Advertisement

20 ನಗರಗಳಲ್ಲಿ ಚೇತಕ್‌ ನೆಟ್‌ವರ್ಕ್‌; 2 ಸಾವಿರ ರೂ. ಪಾವತಿ ಮಾಡಿ ಬುಕಿಂಗ್‌ಗೆ ಅವಕಾಶ

03:00 PM Feb 21, 2022 | Team Udayavani |

ಜನಪ್ರಿಯ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಬಜಾಜ್‌ ಅಟೋ ಪ್ರಸಕ್ತ ವರ್ಷದ ಮೊದಲ ಆರು ವಾರಗಳಲ್ಲಿ ತನ್ನ ನೆಟ್‌ವರ್ಕ್‌ ಜಾಲ ವಿಸ್ತರಿಸಿದೆ.

Advertisement

ನವದೆಹಲಿ, ಮುಂಬೈ, ಹುಬ್ಬಳ್ಳಿ, ವಿಶಾಖಪಟ್ಟಣ, ಮಾಪುಸಾ, ಕಲ್ಲಿಕೋಟೆ ಸೇರಿದಂತೆ 20 ನಗರಗಳಲ್ಲಿ ಕಂಪನಿಯ ಹೊಸ ವಾಹನ ವಿದ್ಯುತ್‌ ಚಾಲಿತ ಸ್ಕೂಟರ್‌ ಬುಕ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.

www.chetak.com ನಲ್ಲಿ ಹೊಸ ವಾಹನವನ್ನು 2 ಸಾವಿರ ರೂ. ಪಾವತಿ ಮಾಡುವ ಮೂಲಕ ಬುಕಿಂಗ್‌ ಮಾಡಬಹುದು. ಗ್ರಾಹಕರ ಕೈಸೇರಲು 4-8 ವಾರಗಳು ಬೇಕಾಗುತ್ತವೆ.

5 ಗಂಟೆಗಳಲ್ಲಿ ಸಂಪೂರ್ಣವಾಗಿ ರಿಚಾರ್ಜ್‌ ಮಾಡಬಹುದಾದ ಬ್ಯಾಟರಿ ಸೇರಿದಂತೆ ಹಲವು ವಿಶೇಷಗಳನ್ನು ಸ್ಕೂಟರ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next