Advertisement

ತಮಿಳು ಚಿತ್ರರಂಗದಲ್ಲಿ ಬಿಝಿ ಆದರೂ ಮತದಾನಕ್ಕಾಗಿ ಊರಿಗೆ ಬಂದ ಮಹಿಮಾ

10:57 PM Apr 23, 2019 | Team Udayavani |

ಕಾಸರಗೋಡು: ತಮಿಳು ಚಿತ್ರರಂಗದಲ್ಲಿ ಬಿರುಸಿನ ಚಿತ್ರೀಕರಣದ ನಡುವೆಯೂ ಪ್ರಜಾಪ್ರಭುತ್ವ ನೀತಿಯ ಮಹತ್ವ ಅರಿತು ಗಡಿನಾಡು ಕಾಸರಗೋಡಿನ ತಾರೆ ಮಹಿಮಾ ನಂಬ್ಯಾರ್‌ ಊರಿಗೆ ಆಗಮಿಸಿ ಮತಚಲಾಯಿಸಿದ್ದಾರೆ.

Advertisement

ನಾಯಮ್ಮಾರಮೂಲೆ ತನ್‌ ಬೀಹುಲ್‌ ಹೈಯರ್‌ ಸೆಕೆಂಡರಿ ಶಾಲೆಯ 101ನೇ ನಂಬ್ರ ಮತಗಟ್ಟೆಯಲ್ಲಿ ಮಹಿಮಾ ಮತದಾನ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಮತದಾನ ನಮ್ಮ ಹಕ್ಕು. ಅದು ಸಾಮಾಜಿಕ ಹೊಣೆಗಾರಿಕೆ. ಮತದಾನ ನಡೆಸುವ ಮೂಲಕ ನಾಡನ್ನು ಯಾರು ಆಳಬೇಕು ಎಂದು ನಾವೇ ನಿರ್ಧರಿಸುತೇ¤ವೆ ಎಂದು ಹೇಳಿದರು.

ಅಣ್ಣ ಉಣ್ಣಿಕೃಷ್ಣನ್‌ ಅವರೊಂದಿಗೆ ಮಹಿಮಾ ಮತದಾನ ನಡೆಸಲು ಆಗಮಿಸಿದ್ದರು. ಸರಕಾರಿ ಸಿಬ್ಬಂದಿಯಾಗಿರುವ ತಂದೆ-ತಾಯಿ ಈ ಹೊಣೆಗಾರಿಕೆಯಲ್ಲಿ ಭಾಗಿಯಾಗುತ್ತಿದ್ದುದನ್ನು ಕಂಡು ಬೆಳೆದ ತಮಗೆ ಬಾಲ್ಯದಿಂದಲೇ ಮತದಾನದ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು.

ದಿಲೀಪ್‌ ನಾಯಕನಾಗಿ ಅಭಿನಯಿಸಿದ್ದ “ಕಾರ್ಯಸ್ಥನ್‌’ ಎಂಬ ಮಲೆಯಾಳ ಚಿತ್ರದಲ್ಲಿ ನಾಯಕಿಯಾಗಿ ಜನಮನ ಸೆಳೆದಿದ್ದ ಮಹಿಮಾ, ನಾಯಮ್ಮಾರಮೂಲೆ ಶಾಲೆ ಬಳಿಯ ನಿವಾಸಿಯಾಗಿದ್ದಾರೆ. ರೈಲ್ವೇ ಸಿಬ್ಬಂದಿ ಕೆ.ಸುಧಾಕರನ್‌-ನಾಯಮ್ಮಾರಮೂಲೆ ಶಾಲೆಯ ಶಿಕ್ಷಕಿ ಪಿ.ಸಿ.ವಿದ್ಯಾ ದಂಪತಿ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next