Advertisement

ವೆಚ್ಚ ಪಾವತಿ ಖಟ್ಲೆಯಲ್ಲಿ ಉದ್ಯಮಿ ಮಲ್ಯಗೆ ಹಿನ್ನಡೆ

04:35 AM Apr 18, 2019 | mahesh |

ಲಂಡನ್‌: ಲಂಡನ್‌ನಲ್ಲಿರುವ ಬ್ಯಾಂಕ್‌ಗಳ ಖಾತೆಯೊಂದರಿಂದ ಕಾನೂನು ವೆಚ್ಚ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಯು.ಕೆ. ಹೈಕೋರ್ಟ್‌ನಲ್ಲಿ ಉದ್ಯಮಿ ವಿಜಯ ಮಲ್ಯಗೆ ಹಿನ್ನಡೆಯಾಗಿದೆ. ಇದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ನೈತಿಕ ಜಯವಾಗಿದೆ. ಕಾನೂನು ವೆಚ್ಚ ನೀಡಬೇಕು ಎಂದು ಕೆಳಹಂತದ ಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಜಯ ಮಲ್ಯ ಪರವಾಗಿ ವಾದಿಸಿದ ವಕೀಲರು “ಕಕ್ಷಿದಾರನಿಗೆ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಲಾಗುತ್ತಿಲ್ಲ’ ಎಂಬ ಅಂಶ ಸೇರಿದಂತೆ ಹಲವು ಅಂಶಗಳನ್ನು ಮುಂದಿಟ್ಟರೂ ಹೈಕೋರ್ಟ್‌ ಜಡ್ಜ್ ಮಾಸ್ಟರ್‌ ಡೇವಿಡ್‌ ಕುಕ್‌ ಅದನ್ನು ತಿರಸ್ಕರಿಸಿ ಕಾನೂನು ವೆಚ್ಚ ಪಾವತಿ ಮಾಡುವ ಬಗ್ಗೆ ಆದೇಶ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next