Advertisement
ಏನಿದು ವಿಶ್ವಾಸ ಸೂಚ್ಯಂಕಬಿಸಿನೆಸ್ ಕಾನ್ಫಿಡೆನ್ಸ್ ಇಂಡೆಕ್ಸ್ (ಬಿಸಿಐ) ಇದು ದೇಶದ ಉದ್ಯಮಗಳಲ್ಲಿ ನಡೆಯುವ ವ್ಯವಹಾರ ಚಟುವಟಿಕೆಗಳನ್ನು ಅಳೆಯುವ ಸೂಚಕವಾಗಿದ್ದು, ಉತ್ಪಾದನೆ, ದೇಶೀಯ ಮಾರಾಟ, ರಫ್ತು, ಕಚ್ಚಾ ವಸ್ತುಗಳ ಆಮದು ಮತ್ತು ತೆರಿಗೆ ಪೂರ್ವ ಲಾಭದ ಕುರಿತಾದ ವ್ಯವಹಾರ ಮಟ್ಟವನ್ನು ಒಳಗೊಂಡಿದೆ.
ಎನ್‌ಸಿಎಆರ್ ಸಮೀಕ್ಷೆಗೆ ಕೆಲವೊಂದು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಇದರನ್ವಯ ಉದ್ದಿಮೆ ಸ್ಥಾಪನೆ, ನಿರ್ವಹಣೆ ಕುರಿತ ವಿಶ್ವಾಸವನ್ನು ಪರಿಶೀಲಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗುತ್ತವೆಯೇ ? ಮುಂದಿನ ಆರು ತಿಂಗಳಲ್ಲಿ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆಯೇ ಮತ್ತು ಪ್ರಸ್ತುತ ಹೂಡಿಕೆಯ ವಾತಾವರಣ ಸಕಾರಾತ್ಮಕವಾಗಿ ಮಾರ್ಪಡಾಗಲಿದೆಯೇ ಎಂದು ಪ್ರಶ್ನೆಗಳನ್ನು ಕೇಳಲಾಗಿದ್ದು, ಬಂದ ಫಲಿತಾಂಶದ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಾಗಿದೆ. ಶೇ. 103.1ರಷ್ಟಕ್ಕೆ ಇಳಿಕೆ
ತ್ತೈಮಾಸಿಕ ಸಮೀಕ್ಷೆಯ ಪ್ರಕಾರ, ವ್ಯವಹಾರ ವಿಶ್ವಾಸರ್ಹ ಸೂಚ್ಯಂಕ (ಬಿಸಿಐ) 103.1 ಕ್ಕೆ ಇಳಿದಿದ್ದು, ಜುಲೈ ಅಂತ್ಯದ ತ್ತೈಮಾಸಿಕದಲ್ಲಿ ಶೇ.15.3 ರಷ್ಟು ಕುಸಿದಿತ್ತು ಎನ್ನಲಾಗಿದೆ.
Related Articles
ವಿಶ್ವಾಸಾರ್ಹ ಸೂಚ್ಯಂಕವು ವರ್ಷದಿಂದ ವರ್ಷಕ್ಕೆ ಶೇ.22.5ರಷ್ಟು ಕುಸಿತ ಕಾಣುತ್ತಿದೆ ಎಂದು ಆಗಸ್ಟ್-ಅಕ್ಟೋಬರ್ ತ್ತೈಮಾಸಿಕ ವರದಿಯಿಂದ ತಿಳಿದು ಬಂದಿದೆ.
Advertisement
ಶೇ.46.3ಸಮೀಕ್ಷೆಯ ಅಂಗವಾಗಿ ಮುಂದಿನ ಆರು ತಿಂಗಳಲ್ಲಿ ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗಿದ್ದು, ಕೇವಲ ಶೇ.46.3 ರಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬಂದಿದ್ದು, ಜುಲೈ ಅಂತ್ಯದಲ್ಲಿ ಶೇ.58.9 ಸಕಾರಾತ್ಮಕ ಪ್ರತಿಕ್ರಿಯೆಗಳು ದಾಖಲಾಗಿತ್ತು ಎಂದು ಎನ್‌ಸಿಎಆರ್ ವರದಿಯಲ್ಲಿ ತಿಳಿಸಿದೆ. ಆರ್ಥಿಕ ಬೆಳವಣಿಗೆ ಕುಸಿತವೇ ಕಾರಣ
ಆರ್ಥಿಕ ಕ್ಷೇತ್ರದಲ್ಲಿ ಹಿನ್ನಡೆಯಿಂದಾಗಿ ಉದ್ಯಮ ಮಂದಗತಿ ಮತ್ತು ಬಿಕ್ಕಟ್ಟಿನ ಮಧ್ಯೆ ಸಿಲುಕಿದೆ. ಪರಿಣಾಮ ಜೂನ್ ತ್ತೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ.5 ರಷ್ಟು ಕುಸಿದಿದ್ದು, ಆರು ವರ್ಷಗಳ ಕನಿಷ್ಠ ಸೂಚ್ಯಂಕ ದರ ದಾಖಲಾಗಿದೆ. ಬೆಳವಣಿಗೆ ಮುನ್ಸೂಚನೆಯಲ್ಲಿ ಕಡಿತ
ಅಂತಾರಾಷ್ಟ್ರೀಯ ಹಣಕಾಸು ನಿಧಿ ದೇಶಕ್ಕೆ ನೀಡುವ ಬೆಳವಣಿಗೆ ಮುನ್ಸೂಚನೆ ಸೂಚ್ಯಂಕ ದರವನ್ನು ಶೇ.7 ರಿಂದ ಶೇ.6.1 ಕ್ಕೆ ಕಡಿತಗೊಳಿಸಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬೆಳವಣಿಗೆ ಕುರಿತು ಕಳವಳ ವ್ಯಕ್ತಪಡಿಸಿದೆ. ನಿರೀಕ್ಷೆ ಇಲ್ಲ
ಮುಂದಿನ ಆರು ತಿಂಗಳಲ್ಲಿ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಿರೀಕ್ಷಿಸುವವರ ಪ್ರಮಾಣದಲ್ಲಿಯೂ ಕುಸಿತ ಕಂಡು ಬಂದಿದ್ದು, ಶೇ.48.8 ರಿಂದ 2019ರ ಅಕ್ಟೋಬರ್‌ಗೆ ಶೇ.39.3 ಕ್ಕೆ ಇಳಿದಿದೆ. ಏಕೈಕ ವರದಿ
ವಿಶೇಷವೆಂದರೆ, ಏಪ್ರಿಲ್ ಮತ್ತು ಜುಲೈ ತಿಂಗಳ ಬಿಸಿಐ ಸೂಚ್ಯಂಕವನ್ನು ಸಿದ್ಧಪಡಿಸಿದ ಏಕೈಕ ವರದಿ ಇದಾಗಿದ್ದು, 10-100 ರೂ. ಕೋಟಿಗಳ ವಾರ್ಷಿಕ ವಹಿವಾಟು ಹೊಂದಿರುವ ಸಂಸ್ಥೆಗಳ ಬಿಸಿಐನಲ್ಲಿ ಗರಿಷ್ಠ ಶೇ.20.6 ರಷ್ಟು ಕುಸಿತ ದಾಖಲಾಗಿದೆ. ಹಾಗೇ 100-500 ರೂ. ಕೋಟಿ ಮತ್ತು 1-10 ರೂ. ಕೋಟಿ ಸಂಸ್ಥೆಗಳು ಕ್ರಮವಾಗಿ ಶೇ.17.6 ರಷ್ಟು ಮತ್ತು ಶೇ.14 ರಷ್ಟು ಕುಸಿತವನ್ನು ಕಂಡಿದೆ. ಅತ್ಯಂತ ಕಡಿಮೆ ದಾಖಲೆ
ಕಳೆದ 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದ ಸೂಂಚ್ಯಕ ದಾಖಲಾಗಿದ್ದು, ಈ ದತ್ತಾಂಶ ವ್ಯವಹಾರದ ಚಟುವಟಿಕೆಗಳ ಮೇಲೆ ಆಳವಾದ ಮತ್ತು ವ್ಯಾಪಕವಾದ ಪರಿಣಾಮ ಬೀರಲಿದೆ ಎಂದು ಎನ್‌ಸಿಎಆರ್ ವರದಿಯಲ್ಲಿ ತಿಳಿಸಿದೆ.