Advertisement
ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ವಲಯಕ್ಕೆ 61,488 ಕೋಟಿ ರೂ. ಬೃಹತ್ ಮೊತ್ತ ಮೀಸಲಿಟ್ಟಿದ್ದು ಮಾತ್ರವಲ್ಲದೇ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಬಹು ರಾಷ್ಟ್ರೀಯ ಕಂಪೆನಿಗಳ ಕಾರ್ಯಾಚರಣೆ ತ್ವರಿತವಾಗಿ ಪ್ರಾರಂಭಿ ಸಲು, ಕೆಐಎ ಡಿಬಿಯಿಂದ ಬೆಂಗಳೂರು ಸುತ್ತಮುತ್ತ ವಿಶ್ವ ದರ್ಜೆಯ “ಪ್ಲಗ್ ಅಂಡ್ ಪ್ಲೇ ಕೈಗಾರಿಕ ಪಾರ್ಕ್’ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಸಾಲ: ದೇವನಹಳ್ಳಿ ಬಳಿ ಸ್ಥಾಪಿಸಿರುವ ಡಾ| ಬಿ.ಆರ್.ಅಂಬೇಡ್ಕರ್ ಕೌಶಲ ಅಭಿವೃದ್ದಿ ಕೇಂದ್ರದ ವಿಸ್ತರಣೆಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಕೆಎಸ್‌ಎಫ್ಸಿ ವತಿಯಿಂದ ಸೇವಾ ವಲಯದ ಮಹಿಳಾ ಉದ್ದಿಮೆದಾರರಿಗೆ 2 ಕೋಟಿ ರೂ.ವರೆಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡು ತ್ತಿದ್ದು, ಐದು ಕೋಟಿ ರೂ.ವರೆಗೆ ಹೆಚ್ಚಿಸಲಾಗುವುದು ಎಂದು ಘೋಷಿಸಲಾಗಿದೆ. ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲಿ ಗಣಿ ಬಾಧಿತ ಪರಿಸರ ಪುನಶ್ಚೇತನ ಅಭಿವೃದ್ಧಿಗೆ 4,332 ಕೋಟಿ ರೂ. ವೆಚ್ಚದಲ್ಲಿ 151 ಯೋಜನೆಗಳನ್ನು ರೂಪಿಸಿದ್ದು ಪ್ರಸಕ್ತ ವರ್ಷ ಅನುಷ್ಠಾನಗೊಳಿಸಲಾಗು ವುದು. ಮೈಶುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ವರ್ಷ ಎಥೆನಾಲ್ ಉತ್ಪಾದನ ಘಟಕ ಸ್ಥಾಪಿಸಲಾಗು ವುದು ಎಂದು ತಿಳಿಸಿದ್ದಾರೆ.
Related Articles
Advertisement
ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸಲು ಪ್ರಾದೇಶಿಕ ಅಸಮತೋಲನ ಸರಿತೂಗಿಸಲು, ಲಾಸ್ಟ್ ಮೈಲ್ ಕನೆಕ್ಟಿವಿಟಿ ನೀಡಲು ಕೆಶಿಪ್ ನಾಲ್ಕನೇ ಹಂತದಡಿ 2,943 ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಚಿಸಲಾಗಿದ್ದು, ಇದಕ್ಕೆ ಐದು ಸಾವಿರ ಕೋಟಿ ರೂ. ವೆಚ್ಚದ ಅಂದಾಜು ಮಾಡ ಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಂಪರ್ಕ ಜಾಲ ವಿಸ್ತರಿಸಲು ಹಾಗೂ ಗ್ರಾಮೀಣ ರಸ್ತೆ ಗಳಿಗೆ ಸಂಪರ್ಕ ಕಲ್ಪಿಸಲು ಅನು ಮೋದ ನೆ ಗೊಂಡಿರುವ ಐದು ಸಾವಿರ ಕಿ.ಮೀ. ಉದ್ದದ ಜಿಲ್ಲಾ ಪ್ರಮುಖ ರಸ್ತೆಗಳ ಕಾಮಗಾರಿಗಳಿಗೆ 1,500 ಕೋಟಿ ರೂ.ಅನುದಾನ ಒದಗಿಸುವ ಭರವಸೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕದ ಪ್ರಮುಖ ಸಂಪರ್ಕ ರಸ್ತೆಯಾದ 411 ಕಿ.ಮೀ ಉದ್ದದ ಬೀದರ್-ಕಲಬುರಗಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ 7,650 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿದೆ.
ಕಾಲುಸಂಕಗಳ ನಿರ್ಮಾಣ: ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ರಭಸದಿಂದ ಹರಿಯುವ ಹಳ್ಳ ತೊರೆಗಳನ್ನು ಸುರಕ್ಷಿತವಾಗಿ ದಾಟಲು ಹಾಗೂ ಸಂಪರ್ಕ ರಹಿತ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 500 ಕಾಲು ಸಂಕಗಳ ನಿರ್ಮಾಣ ಕಾಮಗಾರಿಗೆ 250 ಕೋಟಿ ರೂ. ನೆರವು ನೀಡಲಾಗುವುದು. ಕೊಡಗು ಜಿಲ್ಲೆಯ ಮುಖ್ಯ ರಸ್ತೆಯ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಸಹ ಘೋಷಿಸಲಾಗಿದೆ.
ರೈಲ್ವೇ ಜಾಲ ವಿಸ್ತರಣೆಗೆ ಒತ್ತುಕೇಂದ್ರ ರೈಲ್ವೇ ಇಲಾಖೆ ಜತೆ 50:50 ವೆಚ್ಚ ಹಂಚಿಕೆ ಆಧಾರದಲ್ಲಿ ರಾಜ್ಯದಲ್ಲಿ 9 ಹೊಸ ರೈಲ್ವೇ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗು ತ್ತಿದ್ದು, ರಾಜ್ಯದ ರೈಲ್ವೇ ಜಾಲ ಅಭಿವೃದ್ಧಿಪಡಿ ಸಲು 7,561 ಕೋಟಿ ರೂ. ಮೀಸಲಿಡಲಾ ಗಿ ದೆ. ತುಮಕೂರು-ಚಿತ್ರದುರ್ಗ, ಶಿವಮೊಗ್ಗ-ಶಿಕಾರಿಪುರ, ಬಾಗಲಕೋಟೆ- ಕುಡಚಿ, ಮುನಿರಾಬಾದ್- ಗಿಣಿಗೇರಾ- ರಾಯಚೂರು, ಗದಗ-ವಾಡಿ, ತುಮಕೂರು-ರಾಯದುರ್ಗ ರೈಲ್ವೇ ಕಾಮಗಾರಿಗಳಿಗೆ 1,537 ಕೋಟಿ ರೂ. ಒದಗಿಸಲಾಗಿದೆ. ರೈಲ್ವೇ ಹಳಿ ಡಬ್ಲಿಂಗ್ ಕಾರ್ಯಕ್ಕೆ ಕೇಂದ್ರ ಸರಕಾರ ನೀಡುವ 1,490 ಕೋಟಿ ರೂ.ಗೆ ರಾಜ್ಯದ ಪಾಲು ಭರಿಸಲಾಗುವುದು. ಬೆಳಗಾವಿ-ಕಿತ್ತೂರು- ಧಾರವಾಡ ರೈಲ್ವೇ ಮಾರ್ಗದ ಭೂ ಸ್ವಾಧೀನಕ್ಕೆ 150 ಕೋಟಿ ರೂ. ಮೀಸಲಿಡ ಲಾಗುವುದು. ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ಈಗಾಗಲೇ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿದ್ದು ಇದೇ ವರ್ಷ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆಹಾರ ಭದ್ರತೆಗೆ ಬದ್ಧ; 1 ಕೆ.ಜಿ. ಹೆಚ್ಚುವರಿ ಅಕ್ಕಿ
ಸರಕಾರವು ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಆಹಾರ ಭದ್ರತೆ ನೀಡಲು ಬದ್ಧವಾಗಿದೆ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿಯವರು, ಕೇಂದ್ರ ಸರಕಾರದ “ಆಹಾರ ಭದ್ರತಾ ಕಾಯ್ದೆ’ಯಡಿ ಪ್ರತೀ ಫಲಾನುಭವಿಗೆ ನೀಡಲಾಗುತ್ತಿರುವ 5 ಕೆ.ಜಿ. ಆಹಾರಧಾನ್ಯಗಳ ಜತೆಯಲ್ಲಿ ಒಂದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ 2023-24ನೇ ವರ್ಷದಲ್ಲಿ 4 ಸಾವಿರ ಕೋಟಿ ಅನುದಾನ ಒದಗಿಸುವುದಾಗಿಯೂ ಘೋಷಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಕೇಂದ್ರ ಸರಕಾರ ಹೆಚ್ಚುವರಿ ಆಹಾರಧಾನ್ಯ ವಿತರಿಸಿತ್ತು. ಇದರೊಂದಿಗೆ ರಾಜ್ಯ ಸರಕಾರವು ಅಕ್ಕಿಯೊಂದಿಗೆ ಸ್ಥಳೀಯ ಪ್ರಮುಖ ಆಹಾರಧಾನ್ಯಗಳಾದ ರಾಗಿ ಮತ್ತು ಜೋಳವನ್ನೂ ಸಹ ಪಡಿತರ ವ್ಯವಸ್ಥೆಯಡಿ ವಿತರಿಸಿ ರಾಜ್ಯದ ರೈತರಿಗೆ ಹೆಚ್ಚುವರಿಯಾಗಿ ನೀಡಿದೆ. ಸ್ಥಳೀಯ ಧಾನ್ಯಗಳ ವಿತರಣೆಯನ್ನು ಈ ವರ್ಷವೂ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಪ್ರಮುಖಾಂಶಗಳು
1.ರಾಜ್ಯದ ರೈಲ್ವೇ ಜಾಲ ಅಭಿವೃದ್ಧಿಗೆ 7,561 ಕೋಟಿ ರೂ. ಮೀಸಲು ಒಂಬತ್ತು ಕಡೆ ಹೊಸದಾಗಿ ಕೈಗಾರಿಕೆ ವಸಾಹತುಗಳ ಸ್ಥಾಪನೆ
2. 1,700 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಗಳ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.
3. ಮಂಗಳೂರು-ಕಾರವಾರ-ಗೋವಾ-ಮುಂಬೈ ಮಾರ್ಗದಲ್ಲಿ ವಾಟರ್‌ವೆàಸ್ ಅಭಿವೃದ್ಧಿ ಕೆಎಸ್‌ಎಫ್ಸಿ ವತಿಯಿಂದ
4.ಸೇವಾ ವಲಯದ ಮಹಿಳಾ ಉದ್ದಿಮೆದಾರರಿಗೆ ಶೇ.4ರ ಬಡ್ಡಿ ದರದಲ್ಲಿ 5 ಕೋಟಿ ರೂ.ವರೆಗೆ ಸಾಲ
5.ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪರಿಸರ ಪುನಶ್ಚೇತನಕ್ಕೆ 4,332 ಕೋಟಿ ರೂ. ವೆಚ್ಚದಲ್ಲಿ 151 ಯೋಜನೆ