Advertisement
ಈಗಾಗಲೇ ಆಸ್ಟ್ರೇಲಿಯಕ್ಕೆ ಆಗಮಿಸಿರುವ ಸಚಿನ್ ತೆಂಡುಲ್ಕರ್, ಶುಕ್ರವಾರ ಯುವರಾಜ್ ಸಿಂಗ್ ಜತೆಗೂಡಿ ಬುಶ್‌ಫೈರ್ ಬಾಶ್ ತಂಡದ ಜೆರ್ಸಿಯನ್ನು ಬಿಡುಗಡೆ ಮಾಡಿದರು. ಯುವರಾಜ್ ಈ ಸಹಾಯಾರ್ಥ ಪಂದ್ಯದಲ್ಲಿ ಆಡಲಿದ್ದಾರೆ.
ತೆಂಡುಲ್ಕರ್ ಅವರನ್ನು ಆಸ್ಟ್ರೇಲಿಯಕ್ಕೆ ಆಹ್ವಾನಿಸಿದ್ದು ಸ್ನೇಹಿತ ಬ್ರೆಟ್ ಲೀ. ಮೆಲ್ಬರ್ನ್ನ ಜಂಕ್ಷನ್ ಓವಲ್ ಮೈದಾನದಲ್ಲಿ ಕಾಡ್ಗಿಚ್ಚು ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಸಲುವಾಗಿ ನಡೆಯಲಿರುವ ಬುಶ್‌ಫೈರ್ ಬಾಶ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಇಲೆವೆನ್ ತಂಡಕ್ಕೆ ತೆಂಡುಲ್ಕರ್ ಕೋಚ್ ಆಗಲಿದ್ದಾರೆ.
“ಬ್ರೆಟ್ ಲೀ ಅವರಿಂದ ಆಹ್ವಾನ ಬಂದಾಗ ಹಿಂದೆಮುಂದೆ ಆಲೋಚಿಸುವ ಪ್ರಶ್ನೆಯೇ ಇಲ್ಲ. ಲೀ ಕರೆದಾಗ ಖಂಡಿತ ಬರುತ್ತೇನೆ, ಇದಕ್ಕಿಂತ ಖುಷಿ ಕೊಡುವ ಸಂಗತಿ ಇನ್ನೊಂದಿಲ್ಲ’ ಎಂದಿದ್ದಾರೆ ತೆಂಡುಲ್ಕರ್. ಆಸ್ಟ್ರೇಲಿಯವನ್ನು ಕಾಡಿದ ಭೀಕರ ಕಾಡ್ಗಿಚ್ಚಿನ ಬಗ್ಗೆ ತೆಂಡುಲ್ಕರ್ ಬಹಳ ಚಿಂತಿತರಾಗಿದ್ದಾರೆ. ಮನುಷ್ಯರು ಮಾತ್ರವಲ್ಲದೆ ಸಾವಿರಾರು ಪ್ರಾಣಿ ಪಕ್ಷಿಗಳಿಗೂ ಕಾಡ್ಗಿಚ್ಚು ಮಾರಕವಾಗಿ ಪರಿಣಮಿಸಿದೆ. ನಾವು ಅವುಗಳ ಕುರಿತೂ ಚಿಂತಿಸಬೇಕೆಂದು ಅವರು ಹೇಳಿಕೊಂಡಿದ್ದಾರೆ.
Related Articles
Advertisement