Advertisement

ಬಸ್ ಪ್ರಯಾಣಿಕನ ಸಮಯ ಪ್ರಜ್ಞೆ: ತಪ್ಪಿದ ಭಾರೀ ದುರಂತ..

10:21 AM Sep 13, 2019 | Team Udayavani |

ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರಲ್ಲಿ ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ಕೆಎಸ್‌ಆರ್‌ಟಿಸಿ ಬಸ್ ಭಾರೀ ಅಪಘಾತವಾಗುವುದನ್ನು ತಪ್ಪಿಸಿದಂತಹ ಘಟನೆ ಬೆಂಗಳೂರು ಗೌರಿಬಿದನೂರು ಅಂತರರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.

Advertisement

ಸಂಜೆ 4 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ – ಗೌರಿಬಿದನೂರು ಕಡೆಗೆ ಸಾಗುತ್ತಿದ್ದ ಸಾರಿಗೆ ಬಸ್ ನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಬಸ್ಸು ದೊಡ್ಡಬಳ್ಳಾಪುರ ದಾಟಿದ ಬಳಿಕ ಚಾಲಕ ನಿದ್ರೆಗೆ ಜಾರಿದ್ದಾನೆ,  ಇದನ್ನು ಅರಿತ ಪ್ರಯಾಣಿಕರು ನಿದ್ರೆಗೆ ಜಾರಿದ ಚಾಲಕನನ್ನು ಕೂಗಿ ಎಬ್ಬಿಸಲು ಪ್ರಯತ್ನಿಸಿದ್ದಾರೆ ಆದರೆ ಚಾಲಕ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ, ಇದರಿಂದ ಗಾಬರಿಗೊಂಡ ಪ್ರಾಯಣಿಕರು ಜೋರಾಗಿ ಕೂಗಿಕೊಂಡಾಗ ಬಸ್ಸಿನಲ್ಲಿದ್ದ ಪ್ರಯಾಣಿಕ ಪ್ರಶಾಂತ್ ರೆಡ್ಡಿ ಎಂಬುವರು ಎದೆಗುಂದದೆ ಚಾಲಕನ ಬಳಿ ತೆರಳಿ ಚಾಲಕನ್ನು ಪಕ್ಕೆಕ್ಕೆ ಸರಿಸಿ ಬಸ್ಸುನ್ನು ಹತೋಟಿಗೆ ತರುವಲ್ಲಿ ಯಶ್ವಸಿಯಾಗಿದ್ದಾರೆ.

ಇದರಿಂದ ಅಂತರರಾಜ್ಯ ಹೆದ್ದಾರಿಯಲ್ಲಿ ಆಗಬಹುದಾಗಿದ್ದ ಭಾರೀ ಅಪಘಾತ ತಪ್ಪಿಸಿ ಪ್ರಯಾಣಿಕರ ಪ್ರಾಣ ಕಾಪಾಡಿ ಬಸ್ಸಿಗೆ ಆಗುತ್ತಿದ್ದ ಅಪಘಾತ್ತದ ಅನಾಹುತ ತಪ್ಪಿಸಿದ್ದಾರೆ, ನಂತರ ಬಸ್ಸನ್ನು ನಗರದ ಹೊರವಲಯದ ಸಾರಿಗೆ ಡಿಪೋಗೆ ತಂದು ಒಪ್ಪಿಸಿದ್ದಾರೆ.

ನಿತ್ಯ 800 ಕಿ.ಮೀ. ಬಸ್ಸು ಚಾಲನೆ :

Advertisement

ಚಾಲಕರಿಗೆ ಮತ್ತು ನಿರ್ವಹಕರಿಗೆ ಡ್ಯೂಟಿ ಹೆಸರಿನಲ್ಲಿ ನಿರಂತರ ಶೋಷಣೆ ನಡೆಯುತ್ತಿರುವುದು ಸರ್ವೆಸಾಮಾನ್ಯವಾಗಿದ್ದು ಅದರಲ್ಲೂ ಚಾಲಕರಿಗೆ ನಿತ್ಯ 800 ಕಿ.ಮೀ. ಬಸ್ಸು ಚಾಲನೆ ಮಾಡಲು ನಿಗದಿ ಮಾಡಿದ್ದು ಇದರ ಜೊತೆಗೆ ಹಲವು ನಿಬಂಧನೆಗಳು ವಿಧಿಸಿರುವುದರಿಂದ ಇತಂಹ ಅನಾಹುತಗಳಿಗೆ ಕಂಟಕವಾಗಿದೆ ಎಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next