ಚಾಮರಾಜನಗರ: ಜಿಲ್ಲೆಯಿಂದ ಅಂತರ ಜಿಲ್ಲೆ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಂಗಳವಾರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇವೆ ಪ್ರಾರಂಭಗೊಂಡಿದೆ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಗಳು ಸಂಚರಿಸುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಸೀಮಿತ ನಿಲುಗಡೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಉಳಿದಂತೆ ಅಂತರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳಿಗೆ ಪಾಯಿಂಟ್ ಟು ಪಾಯಿಂಟ್‌ಗೆ ಮಾತ್ರ ಸಂಚರಿಸಲು ಅನುಮತಿಸಲಾಗಿದೆ. ಕೋವಿಡ್ 19 ಮುಂಜಾಗ್ರತಾ ಕ್ರಮ ಪಾಲಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ. ಸಾಮಾಜಿಕ ಅಂತರ, ಮಾಸ್ಕ್ , ಸ್ಯಾನಿಟೈಸರ್ ಗಳ ಬಳಕೆ ಒಳಗೊಂಡಂತೆ 30 ಜನರಿಗೆ ಪ್ರ ಯಾಣಿಸಲು ಅವಕಾಶ ನೀಡಿದೆ.
ಗ್ರಾಮಾಂ ತರದಲ್ಲಿ ರಾತ್ರಿ ವೇಳೆ ಬಸ್ ತಂಗು ವಂತಿಲ್ಲ. ಜಿಲ್ಲೆಯಲ್ಲಿ ಮೊದಲ ದಿನ ಮಂಗಳ ವಾರ 80 ಬಸ್ ಸಂಚರಿಸಿದವು. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲು ಪೇಟೆಯಿಂದ ವಿವಿಧೆ ಡೆಗೆ ಬಸ್ ಸಂಚರಿ ಸಿದವು. ಬಸ್‌ಗಳಲ್ಲಿ 30 ಜನರಿಗೆ ಅವಕಾಶ ನೀಡಲಾಗಿತ್ತು. ಹೊರ ಜಿಲ್ಲೆಗಳ ಪೈಕಿ ಮೈಸೂರಿಗೆ 25 , ಬೆಂಗಳೂರಿಗೆ 20 ಬಸ್‌ಗಳು ಸಂಚರಿಸಿತು.
ಹೊರ ರಾಜ್ಯಗಳಿಗೆ ಬಸ್ ಸಂಚಾರಕ್ಕೆ ಅವ ಕಾಶ ನೀಡಿಲ್ಲ. ಜಿಲ್ಲಾ ಕೇಂದ್ರದ ಬಸ್ ನಿಲ್ದಾ ಣದಲ್ಲಿ ಬಸ್ ಹತ್ತುವ ಮುಂಚೆ ಪ್ರಯಾಣಿ ಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗು ತ್ತಿದೆ. ಜ್ವರದ ಲಕ್ಷಣ ರುವವರು, 60 ವರ್ಷ ಕ್ಕಿಂತ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳಿಗೆ ಪ್ರಯಾಣಕ್ಕೆ ಅವಕಾಶ ಇರಲಿಲ್ಲ. ಮೇ 31ರವರೆಗೂ ಖಾಸಗಿ ಬಸ್ ಸಂಚಾರ ಇರಲ್ಲ. ಆದರೆ ಆಟೋ ರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಸಂಚಾರಕ್ಕೆ ಅನುಮತಿಸಲಾಗಿದೆ.
ಖಾಸಗಿ ಬಸ್ ಸಂಚಾರಕ್ಕೆ ಮಾಲೀ ಕರ ಜತೆ ಮಾತುಕತೆ ನಡೆಸಲಾಗಿದೆ. ಸಂಘದ ಪದಾಧಿಕಾರಿಗಳು ರಾಜ್ಯ ಮಟ್ಟದಲ್ಲಿ ಸ್ಪಂದನೆ ಸಿಕ್ಕ ಬಳಿಕ ಸಂಚಾರಕ್ಕೆ ತೀರ್ಮಾನಿಸಲಾಗುವುದು.
-ಡಾ. ಎಂ.ಆರ್.ರವಿ , ಡೀಸಿ