Advertisement
ರೇಷ್ಮಾ ಮೋಟಾರ್ ಮಾಲಕ ಟಿ.ಎ. ರಹೀಮ್ ಅವರು ವಿದ್ಯಾರ್ಥಿಗಳಿಂದ ಕಡಿಮೆ ಮೊತ್ತದ ಪ್ರಯಾಣ ದರ ಪಡೆದು ಈ ಸೇವೆ ಒದಗಿಸಿದ್ದಾರೆ.ಬಸ್ ಪ್ರತಿದಿನ ಬೆಳಗ್ಗೆ 8:15ರ ವೇಳೆ ಕಾರ್ಕಳ ಬಸ್ ಸ್ಟಾಂಡ್‌ನಿಂದ ಹೊರಟು ವಿದ್ಯಾರ್ಥಿಗಳನ್ನು ಕಾಲೇಜಿಗೆ ತಲುಪಿಸಿ, ಹಿಂದಿರುಗುತ್ತಿದೆ. ಕಾರ್ಕಳ ಪೇಟೆಯಿಂದ 5 ಕೀ.ಮೀ. ದೂರದಲ್ಲಿರುವ ಎಂಪಿಎಂ ಕಾಲೇಜಿಗೆ ಬದಲಿ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದೀಗ ಬಸ್ ಸೌಲಭ್ಯ ವಿದ್ಯಾರ್ಥಿಗಳಲ್ಲಿ ಸಂತಸ ವನ್ನುಂಟು ಮಾಡಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇವಲ ನಾಲ್ಕೈದು ರೂ. ಪ್ರಯಾಣ ದರ ಪಡೆದು ವಿದ್ಯಾರ್ಥಿಗಳನ್ನು ಕಾಲೇಜಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. 30 ವಿದ್ಯಾರ್ಥಿಗಳಿದ್ದಲ್ಲಿ ಕೇವಲ 150 ರೂ. ದೊರೆಯುವುದು. ಉದಯವಾಣಿ ವರದಿ ಹಾಗೂ ನಮ್ಮ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪದವಿ ವಿದ್ಯಾರ್ಥಿಯೋರ್ವನ ಕೋರಿಕೆ ಮೇರೆಗೆ ಬಸ್ ಸೌಲಭ್ಯ ನೀಡಲಾಗಿದೆ.
-ಟಿ.ಎ. ರಹೀಮ್, ಮಾಲಕರು, ರೇಷ್ಮಾ ಮೋಟಾರ್