Advertisement

ಸಮಯಕ್ಕೆ ಬಾರದ ಬಸ್‌: ವಿದ್ಯಾರ್ಥಿಗಳ ಪರದಾಟ

12:58 PM Feb 11, 2021 | Team Udayavani |

ದೊಡ್ಡಬಳ್ಳಾಪುರ: ಸಾರಿಗೆ ಸಂಸ್ಥೆ ಬಸ್‌ ಸಕಾಲಕ್ಕೆ ಆಗಮಿಸದೇ ಇರುವುದರಿಂದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೋವಿಡ್‌ ಮಾರ್ಗಸೂಚಿ ತೆರವಾದ ನಂತರ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪವಾಗಿದೆ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್‌ ಸೇವೆ ಆರಂಭಗೊಂಡಿಲ್ಲ.

Advertisement

ಇದರಿಂದ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ರಸ್ತೆ ಬದಿಯಲ್ಲಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ದೊಡ್ಡಬೆಳವಂಗಲ, ಸಾಸಲು, ಕನಸವಾಡಿ  ತೂಬಗೆರೆ ಸೇರಿದಂತೆ ಎಲ್ಲ ಹೋಬಳಿಯ ವಿದ್ಯಾರ್ಥಿಗಳು ಪದವಿ ಕಾಲೇಜುಗಳಿಗೆ ತಾಲೂಕು ಕೇಂದ್ರಕ್ಕೆ ಬರಬೇಕು. ತಾಲೂಕು ಕೇಂದ್ರದಿಂದ 28 ಕಿ.ಮೀ. ದೂರದ ಸಾಸಲು ಹೋಬಳಿಯಲ್ಲಿ ಪದವಿಪೂರ್ವಕಾಲೇಜು ಇಲ್ಲ.

ಇಲ್ಲಿನ ಎಲ್ಲ ವಿದ್ಯಾರ್ಥಿಗಳು  20 ಕಿ.ಮೀ. ದೂರ ಪ್ರಯಾಣ ಮಾಡಿದರಷ್ಟೇ ಕಾಲೇಜು ತಲುಪಲು ಸಾಧ್ಯ. ಆದರೆ, ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಇಲ್ಲವೆಂದು ವಿದ್ಯಾರ್ಥಿಗಳಪೋಷಕರು ದೂರಿದ್ದಾರೆ.

ಇದನ್ನೂ ಓದಿ:ದೆಹಲಿಯ ರೈತ ಹೋರಾಟಕ್ಕೆ ಬೆಂಬಲ  

ಬಸ್ಆರಂಭಕ್ಕೆ ಕ್ರಮ: ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಸಾರಿಗೆ ಸಂಸ್ಥೆಗಳ ಬಸ್‌ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಸ್‌ ಸಮಯದಲ್ಲಿ ಸ್ಪಲ್ಪ ವ್ಯತ್ಯಾಸಗಳಾಗಿರಬಹುದು. ಹೆಚ್ಚುವರಿ ಬಸ್‌ ಕಳುಹಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಡಿಫೋ ವ್ಯವಸ್ಥಾಪಕ ಆನಂದ್‌ ತಿಳಿಸಿದ್ದಾರೆ.

Advertisement

ತರಗತಿಗೆ ಗೈರು: ಈ ಬಸ್‌ಗಳು ಶಾಲೆಯ ಸಮಯಕ್ಕೆ ಸರಿಯಾಗಿ ಬರುವುದು ಅಪರೂಪ. ಅದರಲ್ಲೂ ರಸ್ತೆಗಳಲ್ಲಿಯೇ ಕೆಟ್ಟು ನಿಂತು ವಾರಕ್ಕೆ ಒಮ್ಮೆಯಾದರು ತರಗತಿಗೆ ಗೈರು ಹಾಕುವಂತಾಗಿದೆ. ಇದರ ವಿರುದ್ಧ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾರುಕ್ರಮ ಕೈಗೊಂಡಿಲ್ಲ ಎಂದು ನೆಲ್ಲುಕುಂಟೆ ಗ್ರಾಮ  ವಿದ್ಯಾರ್ಥಿಗಳು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next