Advertisement
ದೂರುಗಳಿದ್ದರೆ ವಾಟ್ಸಪ್‌ಗೆ ಕಳುಹಿಸಿಸಾರ್ವಜನಿಕರು ತಮ್ಮ ದೂರುಗಳನ್ನು ವಾಟ್ಸಪ್ ಮೂಲಕ ಪೊಲೀಸರ ಗಮನಕ್ಕೆ ತನ ಬಹುದು. ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಶುಕ್ರವಾರದ ಫೋನ್ ಇನ್ ಕಾರ್ಯಕ್ರಮವನ್ನೇ ಕಾಯುವ ಆಗತ್ಯವಿಲ್ಲ, ಯಾವಾಗ ಬೇಕಾದರೂ ವಾಟ್ಸಪ್ ನಂಬರ್ 9480802300 ನಂಬ್ರಕ್ಕೆ ಕಳುಹಿಸ ಬಹುದು ಎಂದರು.
Related Articles
Advertisement
ತೊಕ್ಕೊಟ್ಟು ಮೇಲ್ಸೇತುವೆ: ಸಮಸ್ಯೆ ಬಗ್ಗೆ ಅಧ್ಯಯನತೊಕ್ಕೊಟ್ಟು ಮೇಲ್ಸೇತುವೆ ಬಳಿ ಉಳ್ಳಾಲ ತಿರುವು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಅಹವಾಲು ಹೇಳಿಕೊಂಡರು. ಅಲ್ಲಿನ ಸಮಸ್ಯೆ ನಿವಾರಿಸುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದರು. ಇದು 117ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 23 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಕಾಶ್, ಅಶೋಕ್ ಕುಮಾರ್ ಮತ್ತು ಸಿ.ಎನ್. ದಿವಾಕರ್, ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್‌ಸ್ಟೆಬಲ್ ಪುರುಷೋತ್ತಮ ಮೊದ ಲಾ ದ ವರು ಉಪಸ್ಥಿತರಿದ್ದರು. ಪ್ರಮುಖ ದೂರುಗಳು
ಸುರತ್ಕಲ್ ಜಂಕ್ಷನ್‌ನಲ್ಲಿ ಕಾಂಪ್ಲೆಕ್ಸ್ ಒಂದರ ಬಳಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸಿ ಅಲ್ಲಿರುವ ಮನೆಗಳ ಮಂದಿಗೆ ಹೊರಗೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಬೈಕಂಪಾಡಿಯಲ್ಲಿ ಯು- ಟರ್ನ್ ಇರುವ ಕಡೆ ರಸ್ತೆಯಲ್ಲಿ ಗುಂಡಿಗಳಿದ್ದು, ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ರಸ್ತೆ ಬದಿ ಉದ್ದಕ್ಕೆ 50- 60ರಷ್ಟು ಲಾರಿಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತಡೆ ಉಂಟಾಗಿದೆ. ಸುರತ್ಕಲ್‌ನ ಎನ್‌ಐಟಿಕೆ, ರಾಘವೇಂದ್ರ ಮಠ ಮತ್ತು ಹೊನ್ನಕಟ್ಟೆ ಜಂಕ್ಷನ್‌ನಲ್ಲಿದ್ದ ಬಸ್ ಶೆಲ್ಟರ್‌ಗಳನ್ನು ತೆರವು ಮಾಡಿದ್ದು, ಬಸ್‌ಗಳು ರಸ್ತೆ ಮಧ್ಯ ನಿಲ್ಲುತ್ತವೆ. ಬೈಕಂಪಾಡಿಯಿಂದ ಕುಳಾಯಿ ತನಕ, ಹೊನ್ನಕಟ್ಟೆಯಿಂದ ಸುರತ್ಕಲ್ ತನಕ ಬೀದಿ ದೀಪ ಉರಿಯುತ್ತಿಲ್ಲ. ಹಳೆಯಂಗಡಿಯಲ್ಲಿ ರೈಲ್ವೇ ಗೇಟ್ ಬಳಿ ರಸ್ತೆಯಲ್ಲಿ ಹೊಂಡ ನಿರ್ಮಾಣ ಆಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಬೆಂದೂರ್‌ನ ಕುಲಾಸೊ ಆಸ್ಪತ್ರೆ ಬಳಿ ಇದ್ದ ರಸ್ತೆ ಹಂಪ್ ನವೀಕರಿಸಬೇಕು. ಕಿನ್ನಿಗೋಳಿಯಲ್ಲಿ ಮುಖ್ಯ ರಸ್ತೆ ವಿಸ್ತರಣೆ ಮಾಡಿದ ಬಳಿಕ ಎರಡೂ ಬದಿ ವಾಹನ ನಿಲುಗಡೆ ಮಾಡಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಣ್ಣಗುಡ್ಡೆ ದುರ್ಗಾ ಮಹಲ್ ಬಳಿ ರಸ್ತೆಗೆ ರಿಫ್ಲೆಕ್ಟರ್ ಬೇಕು. ದೇರಳಕಟ್ಟೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಅಲ್ಲಿ ಹಂಪ್ ನಿರ್ಮಾಣ ಮಾಡ ಬೇಕು.