Advertisement

Emotions: ಭಾವನೆಗಳ ಬಸ್‌ ನಿಲ್ದಾಣ

05:35 PM Dec 18, 2024 | Team Udayavani |

ಕನಸುಗಳ ಬೆನ್ನತ್ತಿ ಕಣ್ಣಂಚಲಿ ಹುಟ್ಟೂರ ಬಿಟ್ಟು ಹೋಗುವ ಕಂಬನಿ ನಡುವೆ ಜೀವನ ಕಟ್ಟಿಕೊಳ್ಳುವ ಹಂಬಲ ಮನಸ್ಸಿಗೆ ಕೊಂಚ ಶಕ್ತಿ ನೀಡಿರುತ್ತದೆ. ಇದೆಲ್ಲವೂ ಕಾಣುವುದು ಬಸ್‌ ನಿಲ್ದಾಣದಲ್ಲಿ. ವಿಆರ್‌ಎಲ್‌ ಬರೀ ಬಸ್‌ ಮಾತ್ರವಾಗಿರದೇ ಅನೇಕ ಭಾವನೆಗಳ ತಾಣವೂ ಆಗಿದೆ.

Advertisement

ತವರು ಮನೆಯ ಬಿಟ್ಟು ಗಂಡನ ಮನೆ ಸೇರಿದ ಮಗಳು ಪತಿಯ ಕೈ ಹಿಡಿದು ಆತನ ವೃತ್ತಿ ಪ್ರದೇಶ ಬೆಂಗಳೂರಿಗೆ ಹೊರಡುವಾಗ, ದೊಡ್ಡ ನಗರದಲ್ಲಿ ಹೇಗೆ ಜೀವನ ಕಳೆಯುತ್ತಾಳ್ಳೋ ಎಂದು ಪಾಲಕರ ಕಣ್ಣಲ್ಲಿ ಆತಂಕ ಕಾಣತ್ತಿರುತ್ತದೆ. ಹೊಸ ಜೋಡಿಗೆ ಭವಿಷ್ಯದ ಖುಷಿಯೊಂದಿಗೆ ಮನೆಯವರನ್ನು ಬಿಟ್ಟಿರುವ ಭಯವು ಇರುತ್ತದೆ.

ಶಿಕ್ಷಣ ಮುಗಿಸಿ ದೊಡ್ಡ ಪಟ್ಟಣ ಸಿಲಿಕಾನ್‌ ಸಿಟಿಗೆ ಬರುವ ಯುವಕ ಯುವತಿಗೆ ಉತ್ತಮ ಕೆಲಸ, ಸಂಬಳ, ಸಹದ್ಯೋಗಿಗಳು, ಜೀವನದ ನವೀನ ಆಶಾ ಕಿರಣದೊಂದಿಗೆ ಖುಷಿಯಿಂದ ಬಸ್‌ ಹತ್ತುವವರು ಇದ್ದಾರೆ. ಭಾವನೆಗಳನ್ನು ಹೊತ್ತ ಮನಸ್ಸಿಗೆ ಸಂತಸ ನೀಡುವ ವಿಆರ್‌ಎಲ್‌ ಬಿಸಿ ಬಿಸಿ ಇಡ್ಲಿ, ಪಲಾವ್‌ ಅನ್ನದಲ್ಲಿ ನಾಳೆ ಬೆಳ್ಳಿಗ್ಗೆ ಊರು ತಲುಪುವ ಸಂತಸಕ್ಕೆ ಇಮ್ಮಡಿ ಕೊಡುವುದು ಸಾರಿಗೆ ಸಂಪರ್ಕ.

ಬೆಂಗಳೂರಿನಿಂದ ನಮ್ಮೂರುಗಳಿಗೆ ಹೋಗುವಾಗ ಇರುವ ಖುಷಿ ಮರಳಿ ಬೆಂಗಳೂರಿಗೆ ಬರುವಾಗ ಇರುವುದಿಲ್ಲ ಎಂಬುದು ಪೂರ್ಣತಃ ಸತ್ಯ. ಇಷ್ಟರ ನಡುವೆ ಕರ್ಮಭೂಮಿ ಬೆಂಗಳೂರು ರಾಜ್ಯದ ಹಲವೆಡೆ ಸೇರಿದಂತೆ ದೇಶ ವಿದೇಶಿಗರಿಗೂ ಆಶ್ರಯ ನೀಡುತ್ತಿರುವುದು ಅಕ್ಷರಶಃ ಸತ್ಯ. ಇವರೆಲ್ಲರ ಭಾವನೆಗಳಿಗೆ ಬಣ್ಣ ನೀಡುವುದು ಕರುನಾಡಿನ ಸಾರಿಗೆ ವ್ಯವಸ್ಥೆ. ಶುಭಾ ಹತ್ತಳ್ಳಿ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next