Advertisement

ಪೊಸ್ರಾಲು: ಪ್ರಯಾಣಿಕರ ತಂಗುದಾಣಕ್ಕೆ ಕಾಯಕಲ್ಪ

01:30 AM Aug 29, 2018 | Team Udayavani |

ಬೆಳ್ಮಣ್‌: ಮುಂಡ್ಕೂರು ಗ್ರಾ.ಪಂ.ನ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇಗುಲದ ಮಹಾದ್ವಾರದ ಬಳಿ ಪ್ರಯಾಣಿಕರ ಅನುಕೂಲತೆಗಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಈ ಬಗ್ಗೆ ಉದಯವಾಣಿ ಜನಪರ ಕಾಳಜಿವರದಿ ಪ್ರಕಟಿಸಿದ ಬೆನ್ನಲ್ಲೇ ತಂಗುದಾಣದ ರಿಪೇರಿ ಕಾರ್ಯ ನಡೆದಿದೆ. ತಂಗುದಾಣವನ್ನು ನಿರ್ಮಿಸಿದ್ದ  ಶ್ರೀಧರ ಸನಿಲ್‌  ರಿಪೇರಿ ನಡೆಸಿದ್ದು, ಈ ಮೂಲಕ ತಂಗುದಾಣಕ್ಕೆ ಕಾಯಕಲ್ಪ ಒದಗಿದಂತಾಗಿದೆ. ಪೊಸ್ರಾಲು ದೇಗುಲದ‌ ತಿರುವಿನ ಬಳಿಯಲ್ಲಿ 18 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಪ್ರಯಾಣಿಕರ ತಂಗುದಾಣ ಪಾಳು ಬಿದ್ದಿದ್ದು ಕೂಡಲೇ ದುರಸ್ತಿಪಡಿಸಿ ಸಾರ್ವಜನಿಕರ ಸೇವೆಗೆ ಒದಗಿಸಿಕೊಡಬೇಕೆಂದಿ ಈ ಭಾಗದ ನೂರಾರು ಜನರ ಬೇಡಿಕೆಯಾಗಿತ್ತು. 

Advertisement

ರವಿವಾರ ಪ್ರಯಾಣಿಕರ ತಂಗುದಾಣವನ್ನು ದುರಸ್ತಿಪಡಿಸಿದ ಬಳಿಕ ಪತ್ರಿಕೆಯ ಜತೆ ಶ್ರೀಧರ್‌ ಅವರು ಮಾತನಾಡಿ, ನನ್ನ ಹಿರಿಯ ಸಹೋದರನ ಸ್ಮರಣಾರ್ಥ ತಂಗುದಾಣವನ್ನು ಈ ಹಿಂದೆ ನಿರ್ಮಿಸಲಾಗಿತ್ತು. ಗ್ರಾ.ಪಂ.ಗೆ ತಂಗುದಾಣವನ್ನು ಈವರೆಗೆ ಹಸ್ತಾಂತರಿಸಿಲ್ಲ. ಸದ್ಯಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ರಿಪೇರಿ ನಡೆಸಿದ್ದೇನೆ. ಮುಂದೆಯೂ ಕೂಡ ಈ ತಂಗುದಾಣದ ಜವಾಬ್ದಾರಿ ನನ್ನದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next