Advertisement

ಅಂತೂ ರಸ್ತೆಗಿಳಿದ ಸಾರಿಗೆ ಬಸ್

06:23 PM Apr 18, 2021 | Team Udayavani |

ಗದಗ: ಸಾರಿಗೆ ನೌಕರರ ಮುಷ್ಕರದ ಮಧ್ಯೆಯೂ ಶನಿವಾರ ಭಾಗಶಃ ಸಾರಿಗೆ ನೌಕರರು ಸೇವೆಗೆ ಹಾಜರಾಗಿದ್ದಾರೆ. ಹೀಗಾಗಿ, ಗದಗ ವಿಭಾಗದ 7 ಘಟಕಗಳಿಂದ ಒಟ್ಟು 190 ಬಸ್‌ಗಳು ಕಾರ್ಯಾಚರಣೆ ನಡೆಸಿದ್ದು, ಪ್ರಯಾಣಿಕರಿಗೆ ಸೇವೆ ಒದಗಿಸಿವೆ. 6ನೇ ವೇತನ ಆಯೋಗದ ವರದಿ ಶಿಫಾರಸ್ಸು ಜಾರಿಗೊಳಿಸಬೇಕು. ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಅನಿಷ್ಠಾವಧಿ  ಮುಷ್ಕರ ನಡೆಸುತ್ತಿದ್ದಾರೆ.

Advertisement

ಈ ನಡುವೆ ಮುಷ್ಕರ ಸಡಿಲಿಸಿರುವ ಭಾಗಶಃ ನೌಕರರು, ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಪೈಕಿ ಮುಂಡರಗಿ ಮತ್ತು ರೋಣ ಘಟಕದಿಂದ ಗರಿಷ್ಠ ಪ್ರಮಾಣದ ಬಸ್‌ಗಳು ರಸ್ತೆಗಳಿದಿವೆ.

ಮುಂಡರಗಿ 54, ರೋಣ -51, ಗದಗ-29, ಲಕ್ಷೆ¾àಶ್ವರ-19, ನರಗುಂದ-15, ಬೆಟಗೇರಿ-12 ಹಾಗೂ ಗಜೇಂದ್ರಗಡದಿಂದ 10 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಶನಿವಾರ 380 ಚಾಲಕ ಕಂ ನಿರ್ವಾಹಕರು ಸೇರಿದಂತೆ ಸುಮಾರು 430ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ, ಗದಗ ವಿಭಾಗದಲ್ಲಿ ಒಟ್ಟು 385 ಬಸ್‌ಗಳ ಪೈಕಿ 190 ಬಸ್‌ಗಳು ಶನಿವಾರ ರಸ್ತೆಗಳಿದಿವೆ. ಜಿಲ್ಲೆಯ ಎಲ್ಲ ತಾಲೂಕು, ಭಾಗಶಃ ಗ್ರಾಮೀಣ ಮಾರ್ಗಗಳಲ್ಲಿ ಸಂಚಾರ ನಡೆಸಿದ್ದು, ಹುಬ್ಬಳ್ಳಿಗೆ ಗರಿಷ್ಠ ಪ್ರಮಾಣದ ಬಸ್‌ಗಳು ಸಂಚರಿಸಿವೆ ಎಂದು ಸಾರಿಗೆ ಅಧಿ ಕಾರಿಗಳು ಮಾಹಿತಿ ನೀಡಿದರು.

ಸಾರಿಗೆ-ಖಾಸಗಿಯವರ ಜಟಾಪಟಿ: ನಗರದ ಪಂ|ಪುಟ್ಟರಾಜಕವಿ ಗವಾಯಿಗಳ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ವಿಚಾರವಾಗಿ ವಾಯುವ್ಯ ಸಾರಿಗೆ ಅಧಿ ಕಾರಿಗಳು ಮತ್ತು ಖಾಸಗಿ ವಾಹನಗಳ ಚಾಲಕರ ಮಧ್ಯೆ ಪದೇ ಪದೆ ವಾಗ್ವಾದ ನಡೆಯಿತು. ಗದಗ-ಹುಬ್ಬಳ್ಳಿ ಮಾರ್ಗದಲ್ಲಿ ತೆರಳಲು ಖಾಸಗಿ ಬಸ್‌ಗಳು ಕಾದು ನಿಂತಿದ್ದವು. ಈ ನಡುವೆ ಬೆಳಗ್ಗೆ 9 ಗಂಟೆ ಬಳಿಕ ಸಾಲುಸಾಲಾಗಿ ಸಾರಿಗೆ ಬಸ್‌ಗಳು ಆಗಮಿಸಿದ್ದರಿಂದ ಖಾಸಗಿಯವರಿಗೆ ಪ್ರಯಾಣಿಕರ ಕೊರತೆ ಎದುರಾಯಿತು. ಹೀಗಾಗಿ, ಸದರಿಯಂತೆ ಬಿಡುವಂತೆ ಒತ್ತಾಯಿಸಿದರಾದರೂ ನಿರೀಕ್ಷಿತ ಮಟ್ಟದಲ್ಲಿ ಫಲಿಸಲಿಲ್ಲ. ಈ ನಡುವೆ ದಿನದಿಂದ ದಿನಕ್ಕೆ ಸಾರಿಗೆ ಬಸ್‌ಗಳ ಸಂಚಾರ ಹೆಚ್ಚುತ್ತಿರುವುದರಿಂದ ಸಾರಿಗೆ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next