Advertisement

ಕೋವಿಡ್ ಭಯಕ್ಕೆ ಹೆದರಿ ಬಸ್‌ ಹತ್ತದ ಜನತೆ

05:56 AM May 20, 2020 | Suhan S |

ಚಡಚಣ: ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್‌ ಆದೇಶಿಸಿದ ದಿನದಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಬಸ್‌ ಸಂಚಾರಕ್ಕೆ ಸರ್ಕಾರ ಮಂಗಳವಾರದಿಂದ ಸುರಕ್ಷತಾ ಕ್ರಮದೊಂದಿಗೆ ಮತ್ತೆ ಸಂಚರಿಸಲು ಅವಕಾಶ ನೀಡಿದ್ದರೂ ಪ್ರಯಾಣಿಕರು ಮಾತ್ರ ಬರಲೇ ಇಲ್ಲ.

Advertisement

ಚಡಚಣ ಬಸ್‌ ನಿಲ್ದಾಣಕ್ಕೆ ಬಂದು ನಿಂತ ಬಸ್‌ ಸಂಜೆವರೆಗೂ ಪ್ರಯಾಣಿಕರಿಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿತು. ಬಿಕೋ ಎನ್ನುತ್ತಿದ್ದ ಚಡಚಣ ಬಸ್‌ ನಿಲ್ದಾಣಕ್ಕೆ ಮಂಗಳವಾರ ಬೆಳಗ್ಗೆ ಸುಮಾರು 15 ಜನರನ್ನು ಹೊತ್ತು ವಿಜಯಪುರದಿಂದ ಆಗಮಿಸಿತು. ಆದರೆ, ಮರಳಿ ವಿಜಯಪುರಕ್ಕೆ ಹೋಗಲು ಯಾವೊಬ್ಬ ಪ್ರಯಾಣಿಕರೂ ಬರಲಿಲ್ಲ. ನಂತರ ಮತ್ತೂಂದು ಬಸ್‌ 17 ಜನರು ಹೊತ್ತ ಆಗಮಿಸಿತು. ಮರಳಿ ಹೋಗಲು ಪ್ರಯಾಣಿಕರಿಗಾಗಿ ಕಾಯ್ದು ನಂತರ ಕೇವಲ 7 ಜನರನ್ನು ಹೊತ್ತು ಮರಳಿ ವಿಜಯಪುರಕ್ಕೆ ಸಂಚರಿಸಿತು.

ಇಂಡಿ ಪಟ್ಟಣದಿಂದ ನಿತ್ಯ ಹತ್ತಾರು ಬಸ್‌ ಗಳು ಹಾಗೂ ಖಾಸಗಿ ಮ್ಯಾಕ್ಸಿಕ್ಯಾಬ್‌ ಗಳು ಸಾವಿರಾರು ಜನರನ್ನು ಹೊತ್ತು ಸಾಗುತ್ತಿದ್ದವು. ಆದರೆ, ಕೋವಿಡ್ ಸೋಂಕಿನ ಭಯದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ ಎಂದು ಖಾಸಗಿ ಮ್ಯಾಕ್ಸಿಕ್ಯಾಬ್‌ಗಳು ಸಹ ರಸ್ತೆಗಿಳಿಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next