Advertisement
ಇದೆ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಮಣ್ಣೂರು – ಸೂಗೂರು ಗ್ರಾಮದಿಂದ ಕಂಪ್ಲಿ, ಗಂಗಾವತಿ, ಹೊಸಪೇಟೆ, ಬಳ್ಳಾರಿ ಸೇರಿದಂತೆ ಬಹುತೇಕ ತಾಲೂಕು ಮತ್ತು ಜಿಲ್ಲೆ ಗಳಿಗೆ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿ ಹಾಗೂ ಪದವಿ, ಸ್ನಾತಕೋತ್ತರ ಪದವಿಯ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಶಾಲೆ, ಕಾಲೇಜು ಗಳಿಗೆ ತೇರುಳುತ್ತಿದ್ದಾರೆ ಆದ್ರೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ನಿತ್ಯ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.
Related Articles
Advertisement
ವಕೀಲ ಸೋಮಪ್ಪ ಛಲವಾದಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಮೊದಲಿನಿಂದಲೂ ಬೆಳಿಗ್ಗೆ 7 ಗಂಟೆಗೆ ಬಸ್ ಬರುತಿತ್ತು ಇತ್ತೀಚಿಗೆ ಅದನ್ನು ಬಂದ್ ಮಾಡಿ ಬೆಳಿಗ್ಗೆ ಕೇವಲ 8.30 ಕ್ಕೆ ಒಂದೇ ಬಸ್ ನ್ನು ಮಣ್ಣೂರು ಸೂಗೂರು ಮಾರ್ಗವಾಗಿ ಕಂಪ್ಲಿ ಕಡೆಗೆ ಕಳಿಸುತಿದ್ದಾರೆ ಇದರಿಂದ ಬೇರೆ ಬೇರೆ ತಾಲೂಕು ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಉಂಟಾಗಿದೆ ಇನ್ನೂ 8.30 ಕ್ಕೆ ನಿತ್ಯ ಬರಬೇಕಾದ ಬಸ್ ತಿಂಗಳಿಂದ ಸರಿಯಾದ ಸಮಯಕ್ಕೆ ಬಾರದೆ 9.45 ಕ್ಕೆ ಮತ್ತು 10.30 ಕ್ಕೆ ಸಮಯ ತಪ್ಪಿ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದರು.
ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಕಾಲೇಜ್ ಹೋಗಿ ತರಗತಿಗಳು ಕೇಳಲು ಆಗುತ್ತಿಲ್ಲ ಶಿಕ್ಷಣಕ್ಕೆ ಕೊಕ್ಕೆ ಬಿದ್ದಂತಾಗಿದೆ. ಆದ್ದರಿಂದ ಸಾರಿಗೆ ಘಟಕದ ಅಧಿಕಾರಿಗಳು ಬಸ್ ಗಳು ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಒದಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಲ್ಲಿ ರಸ್ತೆ ರೋಖಾ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಪ್ರೇಮಿ ಮಹದೇವ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುವ ಸಮಯದಲ್ಲಿ ಹಾಗೂ ಹಿಂತಿರುಗುವ ಸಮಯದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಾರಂಭದಲ್ಲಿ ಇನ್ಮುಂದೆ ಸರಿಯಾದ ಸಮಯಕ್ಕೆ ಬಸ್ ಬಿಡಲಾಗುವುದು ಪ್ರತಿಭಟನೆಯನ್ನು ಹಿಂಪಡಿಯುವಂತೆ ದೂರವಾಣಿ ಮೂಲಕ ಘಟಕದ ವ್ಯವಸ್ಥಾಪಕರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು ಪ್ರತಿಭಟನೆ ಹಿಂಪಡಿಯದೆ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು, 2 ಗಂಟೆಗಳ ನಂತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಇನ್ಮುಂದೆ ಇತರ ಸಮಸ್ಯೆ ಆಗುವುದಿಲ್ಲ ಸರಿಯಾದ ಸಮಯಕ್ಕೆ ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದರು ತದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಶಾಸಕ ಬಿ. ಎಂ. ನಾಗರಾಜ್ ಆಪ್ತರಿಗೆ ಹಾಗೂ ಗ್ರಾಪಂ ಅಧ್ಯಕ್ಷರಿಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಬಿಡಬೇಕು ಹಾಗೂ ಹೆಚ್ಚುವರಿ ಬಸ್ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
ಸುಮಾರು 2 ಗಂಟೆಗಳ ಕಾಲ ಸಿರುಗುಪ್ಪ ಮಾರ್ಗವಾಗಿ ಕಂಪ್ಲಿ ಕಡೆಗೆ ತೆರಳುವ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಉಂಟಾಯಿತು. ತುಂಬಾ ತಡವಾದ ಕಾರಣ ಪ್ರಯಾಣಿಕರು ಕೆಲ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರು.
ಈ ವೇಳೆ ಸಿದ್ದಮ್ಮ, ಗೀತಾ, ಮಂಜುಳಾ, ಪಲ್ಲವಿ, ಲಕ್ಷ್ಮಿ,ಚೈತ್ರ,ಪಲ್ಲವಿ, ಕ್ರಾಂತಿಕಾರಿ ಪಂಪಪತಿ,ವಿರೇಶ್, ನಿಂಗಪ್ಪ, ಮಲ್ಲಿಕಾರ್ಜುನ, ಅಂಬರೀಷ್,ಮಂಜು, ಗಾದಿ,ವೀರೇಶ್,ಶರಣ ಬಸವ,ಎನ್.ವೀರೇಶ, ಬಿ.ಮಂಜುನಾಥ,ಬಿ.ಲಿಂಗೆಶ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಶಿಕ್ಷಣ ಮುಖಂಡರು ಇತರರು ಇದ್ದರು.