Advertisement
ಹೈಟೆಕ್ ಬಸ್‌ಗಳಲ್ಲೂ ಲಗೇಜು ಇಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಯಾಕೆ, ಪ್ರತಿಷ್ಠಿತರಿಗಾಗಿ ಬಸ್‌ಗಳಲ್ಲೇ ಪ್ರಾಯೋಗಿಕವಾಗಿ ಕೆಎಸ್‌ಆರ್‌ಟಿಸಿ ಶೌಚಾಲಯ ಪರಿಚಯಿಸಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಇದ್ದ ಲಗೇಜುಗಳ ಸೌಕರ್ಯವನ್ನೂ ತೆರವುಗೊಳಿಸಲಾಗಿದೆ!
Related Articles
Advertisement
ಬಸ್‌ಗಳ ಮೇಲೆ ಈ ಹಿಂದಿದ್ದ ಕ್ಯಾರಿಯರ್‌ನಲ್ಲಿ ಲಗೇಜುಗಳನ್ನು ಹಾಕುವುದರಿಂದ ಸೇತುವೆ, ತಿರುವುಗಳಲ್ಲಿ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಮೋಟಾರು ವಾಹನ ಕಾಯ್ದೆಯಡಿ ಅದನ್ನು ತೆರವುಗೊಳಿಸಲಾಗಿದೆ. ಆದರೆ, ಅದರ ಬದಲಿಗೆ ಸೀಟುಗಳನ್ನು ಎತ್ತರಿಸಿ, ಕೆಳಗಡೆ ಲಗೇಜು ವ್ಯವಸ್ಥೆ ಮಾಡಲಾಗಿದೆ. ಇದು ಹೈಟೆಕ್ ಬಸ್‌ಗಳಲ್ಲಿ ಮಾತ್ರ ಇದ್ದು, ಸಾಮಾನ್ಯ ಬಸ್‌ಗಳಲ್ಲಿ ಇಲ್ಲ. ಖಾಸಗಿ ಬಸ್‌ಗಳಲ್ಲಿ ಸಾಧ್ಯವಾದದ್ದು, ಸಾರಿಗೆ ಸಂಸ್ಥೆಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಚಿಂತನೆ ಮಾಡಬೇಕು ಎಂದು ಪ್ರೊ.ಶ್ರೀಹರಿ ಹೇಳುತ್ತಾರೆ.
ಶೇ. 99.9ರಷ್ಟು ಸೇವೆ; ಎಂಡಿ ಖಾಸಗಿ ಬಸ್‌ಗಳಿಗೆ ಹೋಲಿಸಿದರೆ, ಕೆಎಸ್‌ಆರ್‌ಟಿಸಿ ಅತಿ ಹೆಚ್ಚು ಗ್ರಾಮಗಳನ್ನು ತಲುಪಿದೆ. ರಾಷ್ಟ್ರೀಕರಣಗೊಂಡ ಮಾರ್ಗಗಳಲ್ಲಿ ನಮ್ಮ ಸೇವೆ ಶೇ.99.9ರಷ್ಟಿದೆ. ರಾಷ್ಟ್ರೀಕರಣಗೊಳ್ಳದ ಮಾರ್ಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಇಬ್ಬರ ಜವಾಬ್ದಾರಿಯೂ ಇರುತ್ತದೆ. ಅಲ್ಲಿ ಆಯಾ ಜಿಲ್ಲಾಮಟ್ಟದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಇರುತ್ತವೆ. ಅವು ಯಾವ್ಯಾವ ಮಾರ್ಗಗಳಲ್ಲಿ ಎಷ್ಟು ವಾಹನಗಳಿಗೆ ಪರ್ಮಿಟ್‌ಗಳನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತವೆ. ಇನ್ನು ಬಸ್ ಮೇಲಿನ ಲಗೇಜು ವ್ಯವಸ್ಥೆ ಅಪಾಯಕಾರಿ ಎಂಬ ಕಾರಣಕ್ಕೆ ಮೋಟಾರು ವಾಹನ ಕಾಯ್ದೆ ಅಡಿ ತೆರವುಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಸಮಜಾಯಿಷಿ ನೀಡುತ್ತಾರೆ.
4,699 ಹಳ್ಳಿಗಳಿಗೆ ಬಸ್ ಸಂಪರ್ಕ ಇಲ್ಲಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ ಬರುವ ಇನ್ನೂ 4,699 ಹಳ್ಳಿಗಳಿಗೆ ಬಸ್ ಸಂಪರ್ಕ ವ್ಯವಸ್ಥೆಯೇ ಇಲ್ಲ!
ನಿಗಮದ ವ್ಯಾಪ್ತಿಯಲ್ಲಿ 17 ಜಿಲ್ಲೆಗಳು ಬರುತ್ತವೆ. ಅದರಲ್ಲಿ ರಾಷ್ಟ್ರೀಕರಣಗೊಂಡ 7,326 ಹಾಗೂ ರಾಷ್ಟ್ರೀಕರಣಗೊಳ್ಳದ 13,466 ಹಳ್ಳಿಗಳು ಸೇರಿ ಒಟ್ಟಾರೆ 20,792 ಹಳ್ಳಿಗಳಿವೆ. ಆ ಪೈಕಿ 16,093 ಹಳ್ಳಿಗಳಿಗೆ ಬಸ್ ಸೌಲಭ್ಯ ಒದಗಿಸಲಾಗಿದೆ. ಉಳಿದ 4,699 ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಬೇಕಿದೆ. ರಾಷ್ಟ್ರೀಕರಣಗೊಂಡ ಹಳ್ಳಿಗಳಿಗೆ ಬಸ್ ಸೇವೆ ನೀಡುವುದು ನಿಗಮದ ಹೊಣೆಯಾಗಿದ್ದು, ಶೇ. 99.9ರಷ್ಟು ಹಳ್ಳಿಗಳಿಗೆ ಅದು ಸೇವೆ ನೀಡುತ್ತಿದೆ. ಕೇವಲ ಏಳು ಹಳ್ಳಿಗಳು ಮಾತ್ರ ಈ ಸೇವೆಯಿಂದ ಹೊರಗುಳಿದಿವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಬಸ್‌ಗಳ ವಿನ್ಯಾಸ ಬದಲಾಯಿಸಬೇಕೆಂದರೆ ಖರ್ಚು ಹೆಚ್ಚಾಗುತ್ತದೆ. ಹೀಗೆ ಖರ್ಚು ಹೆಚ್ಚಳವಾದರೆ, ಸಂಸ್ಥೆಗೆ ಆರ್ಥಿಕ ಹೊರೆ ಆಗುತ್ತದೆ. ಆಗ, ಟಿಕೆಟ್ ದರ ಹೆಚ್ಚಳ ಮಾಡಬೇಕಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಇದು ಕಷ್ಟವಾಗುತ್ತದೆ. ಸರ್ಕಾರದ ಸಹಾಯಧನ ಸಿಕ್ಕರೆ, ಈ ನಿಟ್ಟಿನಲ್ಲಿ ಚಿಂತನೆ ಮಾಡಬಹುದು.
– ಎಸ್.ಆರ್. ಉಮಾಶಂಕರ್, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ. – ವಿಜಯಕುಮಾರ್ ಚಂದರಗ