Advertisement

ಹಳೇ ನಿಲ್ದಾಣದಿಂದ ಬಸ್‌ ಕಾರ್ಯಾಚರಣೆ ಸ್ಥಳಾಂತರ

04:36 PM Jun 28, 2021 | Team Udayavani |

ಹುಬ್ಬಳ್ಳಿ: ಹಳೇ ಬಸ್‌ ನಿಲ್ದಾಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪುನರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಂದ ಸಂಚರಿಸುತ್ತಿದ್ದ ಬಸ್‌ಗಳನ್ನು ಹೊಸೂರು ಬಸ್‌ ಟರ್ಮಿನಲ್‌ ಹಾಗೂ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.

Advertisement

ನಗರದಿಂದ ಸಂಚರಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆದ್ದಾರಿ ಹಾಗೂ ವಲಯವಾರು ಬಸ್‌ಗಳನ್ನು ವಿಭಜಿಸಿ ಎರಡು ಬಸ್‌ ನಿಲ್ದಾಣಕ್ಕೆ ಹಂಚಿಕೆ ಮಾಡಲಾಗಿದೆ. ಆರಂಭದಲ್ಲಿ ಸ್ಥಳಾಂತರಗೊಳಿಸಿದಾಗ ಹಾವೇರಿ, ರಾಣಿಬೆನ್ನೂರು, ದಾವಣಗೆರೆ ತಡೆರಹಿತ ಬಸ್‌ಗಳು, ಹಾನಗಲ್ಲ ಮತ್ತು ಸವಣೂರು ವೇಗದೂತ ಬಸ್‌ಗಳನ್ನು ಹೊಸೂರು ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಇದರಿಂದ ಜನರಿಗೆ ಗೊಂದಲವಾಗುತ್ತಿರುವ ಹಿನ್ನೆಲೆಯಲ್ಲಿ ಗೋಕುಲ ರಸ್ತೆ ಬಸ್‌ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ.

ನವಲಗುಂದ ಮತ್ತು ಗದಗ ಮಾರ್ಗವಾಗಿ ಹೋಗುವ ವೇಗದೂತ ಬಸ್‌ಗಳು ಮತ್ತು ಎಲ್ಲಾ ಗ್ರಾಮೀಣ ಬಸ್‌ ಗಳು ಹೊಸೂರು ಬಸ್‌ ನಿಲ್ದಾಣದಿಂದ ಹೊರಡುತ್ತವೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4, ಶಿರಸಿ ರಸ್ತೆ, ಕಾರವಾರ ರಸ್ತೆ ಮತ್ತು ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚರಿಸುವ ಎಲ್ಲಾ ವೇಗದೂತ ಮತ್ತು ಪ್ರತಿಷ್ಠಿತ ಸಾರಿಗೆ ಬಸ್‌ಗಳು ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ಹೊರಡುತ್ತವೆ. ಪ್ರಯಾಣಿಕರಿಗೆ ಸಹಕಾರಿಯಾಗುವ ದೃಷ್ಟಿಯಿಂದ ಪ್ರತಿಯೊಂದು ಬಸ್‌ಗಳಿಗೆ ಅಂಕಣ ನಿಗದಿ ಪಡಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.