Advertisement

ಸರಕಾರಿ ಶಾಲೆ ಮಕ್ಕಳಿಗೂ ಬಸ್‌: ವಾಹನ ಖರೀದಿಸುವಂತೆ ಆದೇಶಿಸಿದ ರಾಜ್ಯ ಸರಕಾರ

12:59 AM Jul 03, 2022 | Team Udayavani |

ಬೆಂಗಳೂರು: ಖಾಸಗಿ ಶಾಲೆಗಳಂತೆ ಇನ್ನು ಮುಂದೆ ಸರಕಾರಿ ಶಾಲೆ ಮಕ್ಕಳು ಕೂಡ ವಾಹನಗಳಲ್ಲಿ ಶಾಲೆಗೆ ಬರಲಿದ್ದಾರೆ. ಸರಕಾರಿ ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರಲು ಶಾಸಕರ ಅನುದಾನದಲ್ಲಿ ವಾಹನ ಖರೀದಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಆರಂಭಿಕ ಹಂತದಲ್ಲಿ ರಾಜ್ಯದ ಸುಮಾರು 200 ಶಾಲೆಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಗ್ರಾ. ಪಂ. ಮಟ್ಟದ ಮಾದರಿ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ ವಾಹನ ಖರೀದಿ ಸುವ ಕುರಿತು ಯೋಜನೆ ರೂಪಿಸುವಂತೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖೀÂಕ ಇಲಾಖೆ ಆದೇಶ ಹೊರಡಿಸಿದೆ.

ವೆಚ್ಚ ಭರಿಸುವುದು ಹೇಗೆ?
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿ- 2014ರಲ್ಲಿ ಹೊಸದಾಗಿ ಶಾಲಾ ವಾಹನ ಖರೀದಿ ಅಂಶ ಸೇರ್ಪಡೆ ಮಾಡಲಾಗಿದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಸಲುವಾಗಿ ವಾಹನ ಖರೀದಿಸಲು ತಗಲುವ ವೆಚ್ಚವನ್ನು ಮಾತ್ರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ಕಲ್ಪಿಸಿದೆ. ಚಾಲಕರ ವೇತನ ಮತ್ತು ಪೆಟ್ರೋಲ್‌/ಡೀಸೆಲ್‌ ಹಾಗೂ ದುರಸ್ತಿ ವೆಚ್ಚವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತು ವಾರಿ ಸಮಿತಿ (ಎಸ್‌ಡಿಎಂಸಿ)ಯ ಇತರ ಅನುದಾನದಡಿ ಭರಿಸಲು ತಿಳಿಸಿದೆ.

10ಕ್ಕಿಂತ ಕಡಿಮೆ ಮಕ್ಕಳಿರುವಲ್ಲಿ ಅವರನ್ನು ಮಾದರಿ ಶಾಲೆಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತದೆ. ಈ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮಕ್ಕಳು ಇಬ್ಬರಿಗೂ ಸರಿಯಾದ ನ್ಯಾಯ ಸಿಗುತ್ತಿಲ್ಲ. ಎಲ್ಲ ವಿಷಯ ಗಳನ್ನು ಒಬ್ಬನೇ ಶಿಕ್ಷಕ ಬೋಧನೆ ಮಾಡುವು ದರಿಂದ ಹೊರೆಯಾಗುತ್ತದೆ, ಮಕ್ಕಳಿಗೂ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಸಿಗುವುದಿಲ್ಲ.
ಇಂತಹ ಶಾಲೆಗಳನ್ನು ಮಾದರಿ ಶಾಲೆಗಳಿಗೆ ವರ್ಗಾವಣೆ ಮಾಡಿಸಿ ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಮಾದರಿ ಶಾಲೆಗೆ ಕರೆತರಲು ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ಡಿಸೆಂಬರ್‌ ವೇಳೆ ಪದವಿ ಪೂರ್ವ ಹಂತಕ್ಕೂ ಎನ್‌ಇಪಿ
ಮಂಗಳೂರು: ಪ್ರಸಕ್ತ ವರ್ಷದ ಡಿಸೆಂಬರ್‌ ವೇಳೆಗೆ ಪದವಿಪೂರ್ವ ಹಂತಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಪರಿಚಯಿಸುವ ಉದ್ದೇಶವಿದ್ದು, ಅದಕ್ಕೆ ಅನುಸಾರವಾದ ಪಠ್ಯ ಕ್ರಮವನ್ನು ಅಂತಿಮ ಗೊಳಿಸಿ ಅಳವಡಿಸ ಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ತರ ಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅನ್ಯ ರಾಜ್ಯಗಳಲ್ಲಿ ಈಗಾಗಲೇ 1ರಿಂದ 12ನೇ ತರಗತಿ ವರೆಗೆ ಎನ್‌ಇಪಿ ಪಠ್ಯಕ್ರಮವನ್ನು ಅಳವಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.

ಗ್ರಾ.ಪಂ. ಮಟ್ಟದ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇಂತಹ ಶಾಲೆಗಳಿಗೆ ವಾಹನ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಶಾಲೆಗಳ ಪಟ್ಟಿ ಮಾಡಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ.
-ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next