ಮಂಡ್ಯ: ಪಶ್ಚಿಮ ಬಂಗಾಳದ ಪ್ರವಾಸಿ ಬಸ್ಸು ರಸ್ತೆ ಬದಿಯ ಹಳ್ಳಕ್ಕೆ ಬಿದ್ದು 30 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಐಶ್ವರ್ಯ ಕಾನ್ವೆಂಟ್ ಬಳಿ ಜರುಗಿದೆ.
ಕೋಲ್ಕತ್ತಾದ ಬಿಹಾಲ ರೆಮೆಂಟ್ ಆರ್ಬರ್‌ನ ಮೌಲೀನ್ (70), ಕಲ್ಪನಾ ಹವಾ ಲ್ದಾರ್ (50), ಕುಚಿರಾಂ ಹವಾಲ್ದಾರ್ (67), ಉಮಾ ಹವಾ ಲ್ದಾರ್ (53), ಡೇಬೋಲಾ ಮಾಯ್ತಿ (60), ಸುಬಿದ್ ಮಾಯ್ತಿ (70), ಪುಂಚ ಹವಾಲ್ದಾರ್ (60), ಬೀಚಿಗಾ ಸರ್ದಾರ್ (50), ದೇವ ರಾಜ್ ಪೊಂದೇಲ್ (10), ಶೋಭಿತಾ (54), ಸಂಯೋ ಜಾರ್ (65), ಬಸ್ ಚಾಲಕ ಮೀರ್‌ವೊàಲ್ (45) ಸೇರಿದಂತೆ 41 ಮಂದಿ ಗಾಯಗೊಡದ್ದಾರೆ. ಈ ಪೈಕಿಶೋಭಿತಾ ಹಾಗೂ ಸಂಯೋಜಾರ್ ತೀವ್ರವಾಗಿ ಗಾಯಗೊಂಡಿದ್ದು, ಎಲ್ಲ ರೋಗಿಗಳಿಗೂ ಮಿಮ್ಸ್ ಆಸ್ಪ ತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆಗೆ ದಾಖಲು: ಅಪಘಾತ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಆ್ಯಂಬುಲೆನ್ಸ್ ವಾಹನಗಳಲ್ಲಿ ಗಾಯಾಳುಗಳನ್ನು ಮದ್ದೂರು ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರವಾಸಕ್ಕೆ ಬಂದಿದ್ದ ಜನರು: ಕೊಲ್ಕತ್ತಾದ ಬೆಹಾನ್‌ನ ರೆಮಲ್ಡ್ ಹಾರ್ಬರ್‌ನ ಸುಮಾರು 65 ಮಂದಿ ಗೌತಮ್ ಟ್ರಾವೆಲ್ಸ್‌ನಲ್ಲಿಕರ್ನಾಟಕ, ಒರಿಸ್ಸಾ, ಆಂಧ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ 22 ದಿನಗಳ ಪ್ರವಾಸ ಕೈಗೊಂಡಿದ್ದರು. ಕಳೆದ ಫೆ. 17ರಂದು ರೆಮಲ್ಡ್ ಹಾರ್ಬರ್‌ನಿಂದ ಹೊರಟ ಇವರು, ತಿರುಪತಿ ಸೇರಿದಂತೆ ಇತರೆ ಸ್ಥಳಗಳನ್ನು ನೋಡಿಕೊಂಡು ಮೈಸೂರಿಗೆ ಆಗಮಿಸಿ ಬಳಿಕ ಒರಿಸ್ಸಾದ ಪುರಿ ಜಗನ್ನಾಥ ದೇವಾಲಯಕ್ಕೆ ಬೆಂಗಳೂರು ಮಾರ್ಗವಾಗಿ ಪ್ರವಾಸಿ ಬಸ್ (ಡಬ್ಲೂ$Â ಬಿ-19 ಟಿ. 1377)ನಲ್ಲಿ ಪ್ರಯಾಣಿಸುತ್ತಿದ್ದರು.
ನಿಯಂತ್ರಣ ತಪ್ಪಿದ ಬಸ್: ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುವಾಗ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿ ಪಂಚರ್ ಆಗಿ ರಸ್ತೆ ಬದಿ ನಿಂತಿದ್ದ ಕಬ್ಬು ತುಂಬಿದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದಾಗ ಬಸ್ಸು ರಸ್ತೆಯ ಎಡ ಭಾಗದ ಹಳ್ಳಕ್ಕೆ ಉರುಳಿಬಿದ್ದು ಅ ಘಾತ ಸಂಭವಿಸಿದೆ. ಬಸ್ಸು ಉರುಳಿಬಿದ್ದಿದ್ದನ್ನು ಕಂಡ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಣೆ ಮಾಡಿದರು. ನಂತರ ಡಿವೈ ಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಸಿಪಿಐ ಎನ್‌ವಿ. ಮಹೇಶ್, ಸಂಚಾರಿ ಠಾಣೆ ಪಿಎಸ್‌ಐ ಮೋಹನ್ ಪಟೇಲ್, ಕಾನೂನು ಶಿಸ್ತು ವಿಭಾಗದ ಪಿಎಸ್‌ಐ ಮಂಜೇ ಗೌಡ ಹಾಗೂ ಸಿಬ್ಬಂದಿಗಳು ಗಾಯಾಳುಗಳನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡರು.
ಮದ್ದೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಗೊಂದಲ : ಬಸ್ ಅಪಘಾತ ದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಮದ್ದೂರು ಆಸ್ಪ ತ್ರೆಗೆ ಕರೆ ತಂದ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳ ಆಕ್ರಂಧನ ಮುಗಿಲು ಮುಟ್ಟಿತ್ತು. ಕೊನೆಗೆ ದಾದಿಯರು, ಡಿ ಗ್ರೂಪ್ ನೌಕರರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು