Advertisement

ಚಿಕ್ಕಮಗಳೂರು: ದತ್ತಪೀಠದಿಂದ ವಾಪಾಸಾಗುವ ವೇಳೆ ಕಂದಕಕ್ಕೆ ಉರುಳಿದ ಬಸ್; 6 ಮಂದಿಗೆ ಗಾಯ

08:28 PM Mar 24, 2022 | Team Udayavani |

ಚಿಕ್ಕಮಗಳೂರು: ದತ್ತಪೀಠಕ್ಕೆ ತೆರಳಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಬಸ್ ನಲ್ಲಿ 7 ಜನರು ಪ್ರಯಾಣಿಸುತ್ತಿದ್ದರು. 6 ಜನ ಆಸ್ಪತ್ರೆ ದಾಖಲಾಗಿದ್ದಾರೆ. ಮೂರು ವರ್ಷದ ಮಗು ಪಾರಾಗಿದ್ದಾಳೆ. ವೃದ್ದೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಒಬ್ಬರ ಕೈಗೆ ಪೆಟ್ಟಾಗಿದ್ದು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಚಿಕ್ಕಮಗಳೂರು ನಗರದ ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರು ಎಲ್ಲಿಯವರು ಎಂಬ ಮಾಹಿತಿ ತಿಳಿದು ಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next