Advertisement
ಪೆರ್ಲದಿಂದ ವಾಣೀನಗರ ಪ್ರದೇಶ ಗಳಿಗೆ ಬೆರಳೆಣಿಕೆಯ ಬಸ್‌ಗಳಿದ್ದರೂ ಇದೀಗ ಕೇವಲ ಒಂದು ಬಸ್ ಮಾತ್ರ ಸಂಚಾರ ನಡೆಸುತ್ತಿದೆ. ಸ್ವರ್ಗದಿಂದ ಸುಮಾರು 4 ಕಿ.ಮೀ. ದೂರ ಕಾಡು ಪ್ರದೇಶದ ರಸ್ತೆಯಲ್ಲಿ ವಾಣೀನಗರಕ್ಕೆ ನಡೆದೇ ಹೋಗಬೇಕು. ವಾಣೀನಗರದಲ್ಲಿ ಪ್ರಾಥಮಿಕ, ಪ್ರೌಢ, ಹೈ. ಸೆ. ಶಾಲೆ, ಪರಿಶಿಷ್ಟ ವರ್ಗ ಮಕ್ಕಳ ವಸತಿ ನಿಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಲು ಶೇಖರಣ ಕೇಂದ್ರ, ಅಂಚೆ ಕಚೇರಿ, ಅಂಗನವಾಡಿ ಮೊದಲಾದವುಗಳಿದ್ದು ಶಾಲಾ ವಿದ್ಯಾರ್ಥಿ ಗಳು, ನಾಗರಿಕರಿಗೆ ಇಲ್ಲಿಗೆ ತಲುಪಬೇಕಾ ದರೆ ನಡೆದೇ ಬರಬೇಕು. ಈ ಪ್ರದೇಶದ ಜನರಿಗೆ ಪೆರ್ಲ, ಪುತ್ತೂರು, ಮಂಗಳೂರು ಮೊದಲಾದ ಕಡೆಗಳಿಗೆ ತೆರಳ ಬೇಕಾದರೆ ತುಂಬ ಕಷ್ಟ. ಅಸೌಖ್ಯವಾದರಂತೂ ರೋಗಿ ಗಳಿಗೆ ಖಾಸಗಿ ವಾಹನವೇ ಗತಿ. ಎಂಡೋ ರೋಗಬಾಧಿತ ಪ್ರದೇಶವು ಇದಾಗಿದ್ದು ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಸರಕಾರಿ ಬಸ್ ಸಮೇತ ಹೆಚ್ಚಿನ ಬಸ್ ಸೇವೆ ಒದಗಿಸಲು ಕ್ರಮ ಕೈಗೊಳ್ಳು ವಂತೆ ಸಮಿತಿಯ ಸದಸ್ಯರಾದ ಸಮಾಜ ಸೇವಕ, ಪತ್ರಕರ್ತ ಅಜಿತ್ ಸ್ವರ್ಗ, ಜಗದೀಶ್ ಕುತ್ತಾಜೆ, ಕೆ.ವೈ. ಸುಬ್ರಹ್ಮಣ್ಯ ಭಟ್, ಉದಯ ಶಂಕರ್ ವಾಣೀನಗರ, ರಾಮಚಂದ್ರ ಭಟ್ ಬದಿ, ಕಿಶನ್ ಕುತ್ತಾಜೆ ಹಾಗೂ ಇನ್ನಿತರರು ಮನವಿ ಮೂಲಕ ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ. Advertisement
ವಾಣೀನಗರ ಪ್ರದೇಶಕ್ಕೆ ಬಸ್ ಸೌಕರ್ಯ: ಆಗ್ರಹ
10:56 PM Jul 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.