ಕಾಸರಗೋಡು: ಕೋವಿಡ್‌ನಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಕರು ಇಲ್ಲದಿರು ವುದರಿಂದ ಆದಾಯವಿಲ್ಲದೆ ಸಂಚಾರ ಮೊಟಕುಗೊಂಡ ಬಸ್‌ನ ಕಾರ್ಮಿಕರು ಉಪ ಜೀವನಕ್ಕಾಗಿ ಹೊಸ ಮಾರ್ಗವನ್ನು ಅನುಸರಿಸತೊಡಗಿದ್ದಾರೆ.
ಕಾಸರಗೋಡು-ಕಣ್ಣೂರು ರೂಟ್‌ನಲ್ಲಿ ಸಂಚರಿಸುವ ಸೂಪರ್ ಫಾಸ್ಟ್ ಬಸ್‌ನ ಸಿಬಂದಿ ಕಣ್ಣೂರಿನಿಂದ ಟಿ ಶರ್ಟ್ ಸಹಿತ ಬಟ್ಟೆ ಬರೆಗಳನ್ನು ಕಾಸರಗೋಡಿಗೆ ತಂದು ಬಸ್‌ನಲ್ಲೇ ಮಾರಾಟ ಮಾಡುತ್ತಿದ್ದಾರೆ.
‘ಟಿಕೆಟ್‌ನಿಂದ ಲಭಿಸುವ ಆದಾಯ ಡೀಸೆಲ್‌ಗೂ ಸಾಕಾಗುತ್ತಿಲ್ಲವೆಂದು ಬಸ್ ಕಾರ್ಮಿಕರು ಹೇಳುತ್ತಿದ್ದಾರೆ.
ಕೆಲವೊಮ್ಮೆ ಆಹಾರಕ್ಕೂ, ನಿತ್ಯ ಖರ್ಚಿಗೂ ಹಣ ಲಭಿಸುತ್ತಿಲ್ಲ. ಆದರಿಂದ ಬಟ್ಟೆ ಬರೆಗಳನ್ನು ಮಾರಾಟ ನಡೆಸಿ ಖರ್ಚಿಗೆ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿ ದ್ದಾರೆ. ಕಣ್ಣೂರಿನಿಂದ ಬರುವ ಖಾಸಗಿ ಬಸ್‌ಗಳು ಕಾಸರಗೋಡಿಗೆ ತಲುಪಿದ ಬಳಿಕ ಬಟ್ಟೆ ಬರೆಗಳನ್ನು ಮಾರಾಟ ಮಾಡುತಿದ್ದಾರೆ.
ಬಸ್‌ಗಳಲ್ಲಿ ಪ್ರಯಾಣಿಸಿದರೆ ಕೋವಿಡ್ 19 ಬಾಧಿಸುವುದೋ ಎಂಬ ಭಯದಿಂದ ಪ್ರಯಾಣಿಕರು ಬಸ್ ಸಂಚಾರವನ್ನು ಹೊರತುಪಡಿಸಿದ್ದು, ಇದು ಆದಾಯವನ್ನು ಇಲ್ಲದಾಗಿಸಿದೆ ಎಂದು ಬಸ್ ಸಿಬಂದಿ ಹೇಳುತ್ತಿದ್ದಾರೆ.