Advertisement

ಕೊಡಗು: ಬೈಕ್‌ ಅಡ್ಡ ಬಂದು ಮಗುಚಿ ಬಿದ್ದ ಬಸ್: ಅದೃಷ್ಟವಶಾತ್ ಸವಾರ ಪಾರು

05:22 PM Sep 04, 2022 | Team Udayavani |

ಕೊಡಗು:  ಕೆ.ಎಸ್.ಆರ್ ಟಿ.ಸಿ‌ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬಸ್ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿ ತಿರುವಿನಲ್ಲಿ ನಡೆದಿದೆ.

Advertisement

ಮಡಿಕೇರಿಯಿಂದ ಮೈಸೂರು ತೆರಳುತ್ತಿದ್ದ ಬಸ್ಸಿನಲ್ಲಿ 21 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಡಿಕೇರಿ ಕಡೆ ಬರುತ್ತಿದ್ದ ಬೈಕ್‌ ಅಡ್ಡ ಬಂದ ಪರಿಣಾಮ ಬಸ್‌ ನ ಚಕ್ರಕ್ಕೆ ಬೈಕ್‌ ಸಿಲುಕಿ ಬಸ್‌ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಬೈಕ್‌ ಸವಾರ ಪಾರಾಗಿದ್ದಾನೆ. ಬಸ್ ನಲ್ಲಿದ್ದ 21 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿ ಗ್ರಾಮಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next