Advertisement

ಬುರ್ಖಾಧಾರಿ ಮಹಿಳೆಯರಿಂದ ನಕಲಿ ಮತದಾನ: ಯುಪಿ ಬಿಜೆಪಿ ಅಭ್ಯರ್ಥಿ ಆರೋಪ

09:56 AM Apr 12, 2019 | Team Udayavani |

ಲಕ್ನೋ : ಬುರ್ಖಾಧಾರಿ ಮಹಿಳೆಯರಿಂದ ನಕಲಿ ಮತದಾನ ನಡೆದಿದೆ ಎಂದು ಉತ್ತರ ಪ್ರದೇಶದ ಮುಜಫ‌ರನಗರದ ಬಿಜೆಪಿ ಅಭ್ಯರ್ಥಿ ಸಂಜೀವ ಬಲ್ಯಾನ್‌ ಆರೋಪಿಸಿದ್ದು ವಿವಾದಕ್ಕೆ ಕಾರಣವಾಗಿದೆ.

Advertisement

‘ಬುರ್ಖಾಧಾರಿ ಮಹಿಳೆಯರ ಗುರುತನ್ನು ಪರಿಶೀಲಿಸದೆಯೇ ಅವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗಾಗಿ ಇಲ್ಲಿ (ಮುಜಫ‌ರನಗರದಲ್ಲಿ ) ನಕಲಿ ಮತದಾನ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ನಾನು ಮರು ಮತದಾನಕ್ಕೆ ಆಗ್ರಹಿಸುತ್ತೇನೆ’ ಎಂದು ಬಲ್ಯಾನ್‌ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇದಕ್ಕೆ ಮೊದಲು ಬಲ್ಯಾನ್‌ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮತದಾರರಿಗೆ ಬೆದರಿಕೆ ಒಡ್ಡಿದ್ದಾರೆಂಬ ದೂರಿನ ಬಗ್ಗೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮುಜಫ‌ರನಗರ ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ವರದಿ ಕೇಳಿರುವುದಾಗಿ ನಿನ್ನೆ ಮಾಧ್ಯಮ ವರದಿಗಳು ತಿಳಿಸಿದ್ದವು.

ಬಲ್ಯಾನ್‌ ಅವರು ಮತದಾರರಿಗೆ ಬೆದರಿಕೆ ಒಡ್ಡುವ ಭಾಷಣದ ವಿಡಿಯೋ ತುಣುಕನ್ನು ಲಗತ್ತೀಕರಿಸಿ ಆರ್‌ಎಲ್‌ಡಿ ಪಕ್ಷ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತ್ತು.

ಇಂದು ಗುರುವಾರ ಬೆಳಗ್ಗೆ 7 ಗಂಟೆಗೆ ಉತ್ತರ ಪ್ರದೇಶದಲ್ಲಿ ಲೋಕಸಭೆಯ ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು ಬಿರುಸಿನ ಮತದಾನ ಸಾಗುತ್ತಿರುವುದಾಗಿ ವರದಿಗಳು ತಿಳಿಸಿವೆ.

Advertisement

ಬಲ್ಯಾನ್‌ ಅವರು ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌ ವಿರುದ್ಧ ಚುನಾವಣಾ ಕಣದಲ್ಲಿ ಹೋರಾಡುತ್ತಿದ್ದಾರೆ. ಅಜಿತ್‌ ಸಿಂಗ್‌ ಅವರು ಉತ್ತರ ಪ್ರದೇಶದಲ್ಲಿನ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮಹಾ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.

ಉತ್ತರ ಪ್ರದೇಶವು ಲೋಕಸಭೆಗೆ 80 ಸಂಸದನ್ನು ಕಳುಹಿಸುವ ರಾಜ್ಯವಾಗಿದ್ದು ಕೇಂದ್ರ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next