Advertisement

ಧಗಧಗ ಹೊತ್ತಿ ಉರಿದ ಎಟಿಎಂ

11:32 PM May 25, 2019 | Lakshmi GovindaRaj |

ಬೀದರ: ನೌಬಾದ ಸಮೀಪದ ಎಟಿಎಂವೊಂದರಲ್ಲಿ ಶನಿವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕೆಲವೇ ಕ್ಷಣಗಳಲ್ಲಿ ಕೊಠಡಿಯಲ್ಲಿ ಬೆಂಕಿ ಆವರಿಸಿಕೊಂಡು ಎಟಿಎಂ ಹೊತ್ತಿ ಉರಿದಿದೆ. ಭಾಲ್ಕಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಈ ಅವಘಡ ಸಂಭವಿಸಿದ್ದು, ಎಷ್ಟು ಹಣ ಇತ್ತು ಹಾಗೂ ಎಷ್ಟು ಹಣ ಬೆಂಕಿಗೆ ಆಹುತಿ ಆಗಿದೆ ಎಂಬುದು ತಿಳಿದು ಬಂದಿಲ್ಲ.

Advertisement

ಎಟಿಎಂನಲ್ಲಿ ಹಣ ಬೆಂಕಿಗೆ ಆಹುತಿ ಆಗದಂತೆ ಸುರಕ್ಷತಾ ವ್ಯವಸ್ಥೆ ಇರುತ್ತದೆ. ಆದರೂ ಕೂಡ ಬೆಂಕಿಯ ಪ್ರಮಾಣ ಹೆಚ್ಚಿರುವ ಕಾರಣ ಈ ಕುರಿತು ಹಣ ಹಾಕುವ ಸಂಸ್ಥೆಯವರು ಬಂದು ಪರಿಶೀಲನೆ ನಡೆಸಿದ ನಂತರ ಪೂರ್ಣ ಮಾಹಿತಿ ಸಿಗಲಿದೆ.

ಎಟಿಎಂನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಸುದ್ದಿ ತಲುಪಿಸಿದರು. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಎಟಿಎಂ ಸುಟ್ಟು ಕರಕಲಾಗಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ತನಿಖೆಯಿಂದ ಮಾತ್ರ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next