Advertisement
ನರಿ ಮೇಲೆ ಬರುತ್ತದೆಂದು ನಾಯಿಗಳು ತುಂಬ ಹೊತ್ತು ಕಾದವು. ಆದರೆ ನರಿ ಪ್ರಾಣಭಯದಿಂದ ಕೆಸರಿನಲ್ಲೇ ಹುದುಗಿಕೊಂಡಿತು. ನಾಯಿಗಳು ಕಾದು ಕಾದು ಬೇಸತ್ತು ಹೊರಟುಹೋದವು. ಬಂದೆರಗಿದ ಅಪಾಯ ತೊಲಗಿದ ಮೇಲೆ ನರಿ ಕಷ್ಟಪಟ್ಟು ಮೇಲೆ ಬಂದಿತು. ಕಾಡಿನ ಕಡೆಗೆ ಹೊರಟಿತು. ಆಗ ಅದರ ಮೂಗಿಗೆ ಅನ್ನ ಮತ್ತು ಕೋಳಿ ಪದಾರ್ಥದ ಘಮ್ಮನೆ ಪರಿಮಳ ಬಂದಿತು. ಹಸಿವಿನಿಂದ ಶಕ್ತಿ ಕಳೆದುಕೊಂಡಿದ್ದ ನರಿ ಆ ಪರಿಮಳದ ಜಾಡು ಹಿಡಿದು ಹೋದಾಗ ಒಂದು ಮರದ ಪೊಟರೆಯಲ್ಲಿ ಪೊಟ್ಟಣವೊಂದು ಕಾಣಿಸಿತು. ಅದರಲ್ಲಿ ಆಹಾರವಿದೆಯೆಂಬುದು ನರಿಗೆ ಅರ್ಥವಾಯಿತು. ಯಾರೂ ನೋಡಬಾರದೆಂದು ನರಿ ಪೊಟರೆಯೊಳಗೆ ಹೋಯಿತು. ಅಲ್ಲಿರುವ ಆಹಾರವನ್ನು ಗಬಗಬನೆ ತಿಂದಿತು.
Related Articles
Advertisement
ಇದು ಕಳ್ಳ ನರಿಯ ಕುತಂತ್ರವೆಂದು ಮರ ಕಡಿಯುವವನಿಗೆ ಅನುಮಾನವೇ ಬರಲಿಲ್ಲ. ನರಿ ಹೇಳಿದ ಹಾಗೆ ದಿನವೂ ಕೋಳಿಗಳ ಸಂಖ್ಯೆಯನ್ನು ಇಮ್ಮಡಿಗೊಳಿಸುವುದು ಸುಲಭವಾಗಿರಲಿಲ್ಲ. ಗುರುತಿರುವ ಎಲ್ಲರಿಂದಲೂ ಕೋಳಿಗಳನ್ನು ಸಾಲವಾಗಿ ತಂದ. ನಲುವತ್ತೆಂಟು ದಿನಗಳ ಕಾಲವೂ ಪೊಟರೆಯಲ್ಲಿರುವ ನರಿಗೆ ಊಟ ತಂದುಕೊಟ್ಟ. ಕಡೆಯ ದಿನ ಒಂದು ಎತ್ತಿನ ಗಾಡಿಯೊಂದಿಗೆ ಹೊರಟ. “”ನೋಡುತ್ತ ಇರಿ, ಇವತ್ತು ಈ ಗಾಡಿಯ ತುಂಬ ಚಿನ್ನದ ನಾಣ್ಯಗಳನ್ನು ತುಂಬಿಸಿಕೊಂಡು ಬರುತ್ತೇನೆ. ನನಗೆ ನೀವು ಕೋಳಿಗಳನ್ನು ಕೊಟ್ಟಿರಲ್ಲ, ಅದಕ್ಕೆಲ್ಲ ಬೆಲೆಯನ್ನು ಕೊಡುತ್ತೇನೆ” ಎಂದು ಎಲ್ಲರೊಂದಿಗೆ ಹೇಳಿ ಮರದ ಬಳಿಗೆ ಬಂದ. ಪೊಟ್ಟಣವನ್ನು ಪೊಟರೆಯೊಳಗೆ ಇಟ್ಟ.
ಒಳಗಿದ್ದ ನರಿ, “”ನಲುವತ್ತೆಂಟು ದಿನ ಕಳೆಯಿತು ತಾನೆ? ನಿನಗೆ ಚಂದದ ಮಗಳೊಬ್ಬಳಿರಬೇಕಲ್ಲವೆ? ನಾಳೆ ಅವಳನ್ನು ರೇಷ್ಮೆ ವಸ್ತ್ರ ಉಡಿಸಿ, ಚಿನ್ನಾಭರಣಗಳಿಂದ ಅಲಂಕರಿಸಿ ಇಲ್ಲಿಗೆ ಕರೆತರಬೇಕು. ನಾನು ಅವಳನ್ನು ಮದುವೆಯಾಗಬೇಕೆಂದು ಯೋಚಿಸಿದ್ದೇನೆ” ಎಂದು ಹೇಳಿತು. ಮರ ಕಡಿಯುವವನು ಹೌಹಾರಿದ. ಒಂದು ಪಿಶಾಚಿಗೆ ಮಗಳನ್ನು ಮದುವೆ ಮಾಡಿ ಕೊಡಲು ಅವನ ಮನ ಒಪ್ಪಲಿಲ್ಲ. “”ನೀನು ನಿಧಿ ಕೊಡುವುದಾಗಿ ಹೇಳಿದ್ದೆಯಲ್ಲವೆ? ಅದನ್ನು ಕೊಡು, ನನ್ನ ಮಗಳನ್ನು ಕೇಳಬೇಡ” ಎಂದು ಅಂಗಲಾಚಿದ. ನರಿಯು, “”ನಿಧಿಯೂ ಇಲ್ಲ, ಮಣ್ಣೂ ಇಲ್ಲ. ನಾನೊಂದು ಪಿಶಾಚಿ ಅಂತ ಗೊತ್ತಿದೆ ತಾನೆ? ನಾಳೆ ನನ್ನ ಕೋರಿಕೆ ಈಡೇರದಿದ್ದರೆ ನಿನ್ನ ಗತಿ ಏನಾಗುತ್ತದೆಂದು ಯೋಚಿಸಿದ್ದೀಯಾ?” ಎಂದು ಕೇಳಿತು.
ಮರ ಕಡಿಯುವವನು ತಲೆಯ ಮೇಲೆ ಕೈ ಹೊತ್ತುಕೊಂಡು ಅಲ್ಲಿಂದ ಹೊರಟ. ದಾರಿಯಲ್ಲಿ ಒಂದು ಮಂಗ ಇತ್ತು. “”ಯಾಕಣ್ಣಾ, ತಲೆಯ ಮೇಲೆ ಕೈ ಹೊತ್ತಿರುವೆ?” ಕೇಳಿತು. ಅವನು “ಗೊಳ್ಳೋ’ ಎಂದು ಅಳುತ್ತ ನಡೆದ ಸಂಗತಿ ಹೇಳಿ, “”ಪಿಶಾಚಿಯಿಂದ ಪಾರಾಗಲು ಏನಾದರೂ ದಾರಿಯಿದ್ದರೆ ಹೇಳು” ಎಂದು ಕೋರಿದ. ಮಂಗ ಪೊಟರೆಯೊಳಗೆ ನರಿ ಇಳಿಯುವುದನ್ನು ನೋಡಿತ್ತು. ಕೋಳಿ ತಿಂದು ಉಬ್ಬಿಕೊಂಡಿರುವ ಅದಕ್ಕೆ ಹೊರಗೆ ಬರಲು ಆಗುವುದಿಲ್ಲವೆಂದೂ ತಿಳಿದಿತ್ತು. ಅದು, “”ನೀನು ಒಂದು ಹಂಡೆ ತುಂಬ ಕುದಿಯುವ ನೀರನ್ನು ತೆಗೆದುಕೊಂಡು ಹೋಗಿ ಆ ಪೊಟರೆಯ ಒಳಗೆ ಸುರಿದುಬಿಡು. ಮುಂದೇನಾಗುತ್ತದೋ ನೋಡು” ಎಂದು ಉಪಾಯ ಹೇಳಿತು. ಮರ ಕಡಿಯುವವ ಮಂಗ ಹೇಳಿದಂತೆಯೇ ಮಾಡಿದ. ಕುದಿಯುವ ನೀರಿನಿಂದ ಒಳಗಿದ್ದ ನರಿ ಹೊರಗೆ ಬರಲಾಗದೆ ಒದ್ದಾಡುತ್ತ ಸತ್ತುಹೋಯಿತು. ಪಿಶಾಚಿಯ ಕಾಟ ನೀಗಿತೆಂದು ಅವನಿಗೆ ಸಂತೋಷವಾಯಿತು.
ಇನ್ನು ಪಿಶಾಚಿ ವಾಸಿಸುವ ಈ ಮರವೇ ಇರಬಾರದೆಂದು ಟೊಳ್ಳು ಮರವನ್ನು ಮರ ಕಡಿಯುವವನು ಕೊಡಲಿಯಿಂದ ಕಡಿದು ಹಾಕಿದ. ಆಗ ಒಳಗೆ ಸಿಕ್ಕಿಕೊಂಡು ಸತ್ತ ನರಿಯೂ ಕಾಣಿಸಿತು. ಜೊತೆಗೆ ಯಾವುದೋ ಕಾಲದ ಚಿನ್ನದ ನಾಣ್ಯಗಳ ದೊಡ್ಡ ಭಂಡಾರವೇ ಗೋಚರಿಸಿತು. ಅವನು ಎಲ್ಲವನ್ನೂ ಮನೆಗೆ ತಂದು ಬಡತನವನ್ನು ಪರಿಹರಿಸಿಕೊಂಡ. ತನಗೆ ಸಂಪತ್ತು ಬರಲು ಕಾರಣವಾದ ಮಂಗನನ್ನು ಮರೆಯಲಿಲ್ಲ. ಅದರ ಬಳಿಗೆ ಹೋಗಿ, “”ನೀನು ಕಾಡಿನಲ್ಲಿದ್ದು ಯಾಕೆ ಕಷ್ಟಪಡಬೇಕು? ನನ್ನ ಮನೆಗೆ ಬಂದು ಸುಖವಾಗಿ ಇದ್ದುಬಿಡು” ಎಂದು ಹೇಳಿ ಅದನ್ನು ಕರೆದುಕೊಂಡು ಬಂದ.
ಪ. ರಾಮಕೃಷ್ಣ ಶಾಸ್ತ್ರಿ