ಬೆಳಕವಾಡಿ: ತಾಲೂಕಿನ ಚಿಕ್ಕಮು ತ್ತತ್ತಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಬೆಳಕವಾಡಿ ಪೊಲೀಸರು ಯಶ್ವಸಿಯಾಗಿದ್ದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಕಿಪಿಕ್ಕಿ ಅಲೆಮಾರಿ ಜನಾಂಗದ ರಾಜೇಶ್, ಉಮೇಶ್, ಕಬ್ಟಾಳು, ಆನಂದ್, ಶಬ್ಬೀರ್ ಬಂಧಿತ ಆರೋಪಿಗಳು. 2021ರ ಸೆ.16ರಂದು ದೇವಸ್ಥಾನದ ಬಾಗಿಲು ಮುರಿದ ದುಷ್ಕರ್ಮಿ ಗಳು ಹಿತ್ತಾಳೆ ಹಾಗೂ ಪಂಚಲೋಹದಿಂದ ಮಾಡಿದ ದೇವರ ಕವಚ ಸೇರಿ ಸುಮಾರು 60 ಸಾವಿರ ರೂ. ಮೌಲ್ಯದ ಪೂಜಾ ಸಾಮಗ್ರಿ ಕದ್ದು ಪರಾರಿಯಾಗಿದ್ದರು.
ಈ ಸಂಬಂಧ ಅರ್ಚಕ ಶ್ರೀನಿವಾಸ್ ಬೆಳಕವಾಡಿ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ ಎಚ್.ಲಕ್ಷ್ಮೀನಾರಾಯಣ ಪ್ರಸಾದ್ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ್ ನೇತೃತ್ವದ ಪಿಎಸ್‌ಐ ಹನುಮಂತು, ಮಹದೇವಪ್ಪ, ಎಎಸ್‌ಐ ರಾಜು, ಸಿಬ್ಬಂದಿ ಗಳಾದ ಮಾದೇಶ, ನಾಗೇಂದ್ರಖಾನ್‌ರ ತಂಡ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ:ವಿಹೆಚ್‌ಪಿ ಹಾಗೂ ಭಜರಂಗದಳ ಮಂದಿರ ಚಲೋ ಕರೆ: ಶ್ರೀರಂಗಪಟ್ಟಣ ಮಸೀದಿ ಸುತ್ತ ನಿಷೇಧಾಜ್ಞೆ
ಆರೋಪಿಗಳ ಬಂಧನದಿಂದ ಕೆಸ್ತೂರು ಠಾಣೆ ವ್ಯಾಪ್ತಿಯ ಶಾಲೆ, ಮನೆ ಕಳ್ಳತನ, ಸಾತನೂರು ಠಾಣೆಯ ಬೈಕ್ ಕಳ್ಳತನ, ಎಡಮಾರನಹಳ್ಳಿ, ದೊಡ್ಡಆಲಹಳ್ಳಿ ಸೇರಿ 7 ಪ್ರಕರಣ ಬೆಳಕಿಗೆ ಬಂದಿವೆ. ಬೆಳಕವಾಡಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.