Advertisement

ನಕಲಿ ಕೀ ಬಳಸಿ ಬೈಕ್‌ ಕದಿಯುತ್ತಿದ್ದವನ ಬಂಧನ

12:19 PM Sep 04, 2018 | Team Udayavani |

ಬೆಂಗಳೂರು: ನಕಲಿ ಕೀಲಿ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಉಮಾಶಂಕರ್‌ (41) ಎಂಬಾತನನ್ನು ಆರ್‌.ಟಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಆರ್‌.ಟಿ ನಗರ ವ್ಯಾಪ್ತಿಯಲ್ಲಿ ಕಡಿಮೆ ಬೆಲೆಗೆ ಸ್ಕೂಟರ್‌ ಮಾರಾಟಕ್ಕೆ ಯತ್ನಿಸುತ್ತಿದ್ದ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಫ‌ುಲ್‌ ಟೈಂ ಬೈಕ್‌ಗಳ ಕಳ್ಳನಾಗಿದ್ದು, ಹಲವು ವಾಹನ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆತನಿಂದ 10.91 ಲಕ್ಷ ರೂ. ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

ಗಂಗಾನಗರ ನಿವಾಸಿಯಾಗಿರುವ ಉಮಾಶಂಕರ್‌ ಬಿಕಾಂ ಪದವೀಧರನಾಗಿದ್ದ ಇಂಗ್ಲೀಷ್‌ ಸೇರಿದಂತೆ ಹಲವು ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಾನೆ. “ಅಮಲು’ ಭರಿಸುವ ಕೆಮ್ಮು ನಿವಾರಕವಾಗಿರುವ ಕೋರೆಕ್ಸ್‌ ಔಷಧ ಸೇವಿಸಿ ನಶೆ ಏರಿಸಿಕೊಂಡು ಓಡಾಡಿಕೊಂಡು . ರಸ್ತೆ ಬದಿ, ನಿರ್ಜನ ರಸ್ತೆಗಳು, ಪಾರ್ಕಿಂಗ್‌ ಸೇರಿದಂತೆ ವಿವಿಧೆಡೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ನಕಲಿ ಕೀಲಿ ಬಳಸಿ ಕಳವು ಮಾಡುತ್ತಿದ್ದ. ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next