Advertisement

ಬುರಾರಿ ಸಾಮೂಹಿಕ ಆತ್ಮಹತ್ಯೆ: ಇಂದು ಅಂತಿಮ ಅಟಾಪ್ಸಿ ವರದಿ

11:19 AM Jul 07, 2018 | Team Udayavani |

ಹೊಸದಿಲ್ಲಿ  : ಇದೇ ಜುಲೈ 1ರಂದು ನಿಗೂಢ ಸನ್ನಿವೇಶದಲ್ಲಿ ನೇಣಿಯಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಒಂದೇ ಕುಟುಂಬದ ಹನ್ನೊಂದು ಮಂದಿಯ ಅಂತಿಮ ಅಟಾಪ್ಸಿ ವರದಿ ಇಂದು ಶನಿವಾರ ಹೊರಬರುವ ನಿರೀಕ್ಷೆ ಇದೆ. 

Advertisement

ಉತ್ತರ ದಿಲ್ಲಿಯ ಬುರಾರಿಯಲ್ಲಿನ ತಮ್ಮ ನಿವಾಸದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದ ಭಾಟಿಯಾ ಕುಟುಂಬದ ಸದಸ್ಯರ ಮಾನಸಿಕ ಅಟಾಪ್ಸಿ ಯನ್ನು ದಿಲ್ಲಿ ಕ್ರೈಮ್‌ ಬ್ರಾಂಚ್‌ ನಡೆಸಿರುವುದಾಗಿ ನಿನ್ನೆ ಶುಕ್ರವಾರ ವರದಿಯಾಗಿತ್ತು. 

ಸಿಸಿಟಿವಿ ಚಿತ್ರಿಕೆಯಲ್ಲಿ ಈ ಕುಟುಂಬದ ಕೆಲ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸ್ಟೂಲುಗಳನ್ನು ಮತ್ತು ವಯರ್‌ಗಳನ್ನು ತಂದಿರುವುದು ದಾಖಲಾಗಿತ್ತು. ಅಲ್ಲದೆ ಕಳೆದ 11ವರ್ಷಗಳಿಂದ ಬರೆಯಲ್ಪಡುತ್ತಿದ್ದ 11 ಡೈರಿಗಳು ಕೂಡ ಪೊಲೀಸರಿಗೆ ಸಿಕ್ಕಿವೆ. 

Advertisement

Udayavani is now on Telegram. Click here to join our channel and stay updated with the latest news.

Next