Advertisement

ಬಂಟರವಾಣಿ ಚಿಣ್ಣರ ಚಿಲಿಪಿಲಿ-3 ಪೂರ್ವಭಾವಿ ಸಭೆ

03:27 PM Feb 02, 2019 | |

ಮುಂಬಯಿ: ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಸ್ಪರ್ಧೆ ಎಂಬುವುದು ಕೇವಲ ನಿಮಿತ್ತ ಮಾತ್ರ. ಭಾಗವಹಿಸಿದವರೆಲ್ಲರೂ ವಿಜೇತರಾಗಲು ಸಾಧ್ಯವಿಲ್ಲ. ಸ್ಪರ್ಧೆಯಲ್ಲಿ ವಿಜೇತರಾಗುವುದು ಮುಖ್ಯವಲ್ಲ. ಪಾಲ್ಗೊಳ್ಳುವುದು ಬಹಳ ಮುಖ್ಯ. ಬಂಟರವಾಣಿ ಚಿಣ್ಣರ ಚಿಲಿಪಿಲಿಯಲ್ಲಿ ಭಾಗವಹಿಸುವ ಎಲ್ಲಾ ಬಂಟ ಮಕ್ಕಳು ನಮ್ಮ ಮಕ್ಕಳೇ ಎಂಬ ಭಾವನೆಯನ್ನು ಪಾಲಕರು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ನುಡಿದರು.

Advertisement

ಜ. 31 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಬಂಟರವಾಣಿ ಚಿಣ್ಣರ ಚಿಲಿಪಿಲಿ-3 ಫ್ಯಾಶನ್‌ ಶೋ ಪ್ರತಿಭಾ ಸ್ಪರ್ಧೆಯ ಪೂರ್ವತಯಾರಿ ಸಭೆಯಲ್ಲಿ ಸ್ಪರ್ಧಿಗಳನ್ನು  ಮತ್ತು ಪಾಲಕರನ್ನು ಉದ್ಧೇಶಿಸಿ ಮಾತನಾಡಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರಿಗೆ ಮಕ್ಕಳಲ್ಲಿರುವ ಅಗಾಧ ಪ್ರೀತಿಯಿಂದ ಇದೀಗ ಮೂರನೇ ಬಾರಿ ಚಿಣ್ಣರ ಚಿಲಿಪಿಲಿ ಆಯೋಜನೆಗೊಂಡಿದೆ. ಅದಕ್ಕಾಗಿ ಶಾಂತಾರಾಮ ಬಿ. ಶೆಟ್ಟಿ ಹಾಗೂ ಬಂಟರವಾಣಿಯ ತಂಡವನ್ನು ಅಭಿನಂದಿಸುತ್ತಿದ್ದೇನೆ ಎಂದರು.

ನಿಯಮ  ಉಲ್ಲಂಘಿಸುವಂತಿಲ್ಲ 
ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಅವರು ಸ್ಪರ್ಧೆಯ ಕಾನೂನು ಮತ್ತು ನಿಯಮದ ಬಗ್ಗೆ ವಿವರಿಸಿ, ಸ್ಪರ್ಧೆಯ ಅಂತಿಮ ನಿರ್ಣಯ ಆಯ್ಕೆ ಸಮಿತಿಯದ್ದಾಗಿದ್ದು, ಯಾರೂ ಕಾನೂನು ನಿಯಮವನ್ನು ಉಲ್ಲಂಘಿಸುವಂತಿಲ್ಲ ಎಂದು ನುಡಿದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ವೇದಿಕೆಯಲ್ಲಿ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಪ್ರವೀಣ್‌ ಭೋಜ ಶೆಟ್ಟಿ, ಮಹೇಶ್‌ ಎಸ್‌. ಶೆಟ್ಟಿ, ಗುಣಪಾಲ್‌ ಶೆಟ್ಟಿ ಐಕಳ, ರಂಜನಿ ಎಸ್‌. ಹೆಗ್ಡೆ, ಶರತ್‌ ವಿ. ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ, ಹರೀಶ್‌ ವಾಸು ಶೆಟ್ಟಿ, ಕರ್ನೂರು ಮೋಹನ್‌ ರೈ, ವಸಂತ ಶೆಟ್ಟಿ ಪಲಿಮಾರು, ವಿಠuಲ್‌ ಎಸ್‌. ಆಳ್ವ, ಜಗದೀಶ್‌ ಶೆಟ್ಟಿ ನಂದಿಕೂರು, ಡಾ| ಸುನೀತಾ ಎಂ. ಶೆಟ್ಟಿ, ರತ್ನಾ ಶೆಟ್ಟಿ, ಶಾಂತಾ ಶೆಟ್ಟಿ, ಚಿತ್ರಾ ಆರ್‌. ಶೆಟ್ಟಿ, ಕರುಣಾಕರ ಶೆಟ್ಟಿ ಕಲ್ಲಡ್ಕ, ಎಂ. ಜಿ. ಶೆಟ್ಟಿ, ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ಅಶೋಕ್‌ ಅಡ್ಯಂತಾಯ, ಶಂಕರ್‌ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಬೆಳ್ಳಂಪಳ್ಳಿ, ಪ್ರಕಾಶ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ, ಲತಾ ಸಂತೋಷ್‌ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next