Advertisement

ಬಂಟರ ಸಂಘ ವಸಾಯಿ-ಡಹಾಣೂ: ಮಹಿಳೆಯರಿಗೆ ಫುಟ್ಬಾಲ್‌ ಪಂದ್ಯಾಟ

04:05 PM Aug 05, 2018 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ವತಿಯಿಂದ ಬಂಟ ಮಹಿಳೆಯರಿಗಾಗಿ ಫುಟ್ಬಾಲ್‌ ಪಂದ್ಯಾಟವು ಜು. 29 ರಂದು ನಲಸೋಪರ ಪೂರ್ವದ ಸೈಂಟ್‌ ಅಲೋಶಿಯಸ್‌ ಸ್ಕೂಲ್‌ ಮೈದಾನದಲ್ಲಿ ನಡೆಯಿತು.

Advertisement

ಬೆಳಗ್ಗೆ ಫುಟ್ಬಾಲ್‌ ಪಂದ್ಯಾಟವನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಬಂಟ ಸಮಾಜದ ಮಕ್ಕಳು ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರ ಕ್ರೀಡಾ ಮನೋಭಾವ ವೃದ್ಧಿಸುವ ಕಾರ್ಯಕ್ಕಾಗಿ ಪ್ರಾದೇಶಿಕ ಸಮಿತಿ ಮಹಿಳೆಯರ ಫುಟ್ಬಾಲ್‌ ಪಂದ್ಯಾಟವನ್ನು ಆಯೋಜಿಸಿ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಅಭಿನಂದನೀಯ. ಸ್ಪರ್ಧೆಯಲ್ಲಿ ಸೋಲು-ಗೆಲುವುಗಳ ಬಗ್ಗೆ ಅವಲೋಕಿಸದೆ ನಮ್ಮ ಕ್ರೀಡಾ ಅಭಿರುಚಿಗೆ ತಕ್ಕಂತೆ ಆಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಸಾಯಿ-ವಿರಾರ್‌ ಮಹಾನಗರ ಪಾಲಿಕೆಯ ಮೇಯರ್‌ ರೂಪೇವ್‌ ಜಾಧವ್‌ ಅವರು ಮಾತನಾಡಿ ಶುಭಹಾರೈಸಿದರು. ಸಂಘದ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ ಅವರು ಮಾತನಾಡಿ, ಬಂಟರ ಸಂಘದ ಪ್ರಾದೇಶಿಕ ಸಮಿತಿಯು ಪ್ರಥಮ ಬಾರಿಗೆ ಬಂಟ ಮಹಿಳೆಯರಿಗೆ ಫುಟ್ಬಾಲ್‌ ಪಂದ್ಯಾಟವನ್ನು ಆಯೋಜಿಸಿದ್ದು, ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಕ್ರೀಡಾಸ್ಫೂರ್ತಿಯಿಂದ ತಂಡಗಳು ಆಡಬೇಕು ಎಂದು ನುಡಿದರು.

ಸಂಘದ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಮಾತನಾಡಿ, ಈ ಪ್ರಾದೇಶಿಕ ಸಮಿತಿ ಮಹಿಳೆಯರ ಕ್ರೀಡಾ ಪ್ರತಿಭೆಗೆ ಅವಕಾಶ ನೀಡಿದೆ. ಪಂದ್ಯಾಟದಲ್ಲಿ ಪಾಲ್ಗೊಂಡ ಸಂಘದ ಪ್ರಾದೇಶಿಕ ಸಮಿತಿಗಳು ಗೆಲ್ಲಲು ಪ್ರಯತ್ನಿಸಬೇಕು ಎಂದರು. ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್‌ ಪಕ್ಕಳ ಅವರು ಮಾತನಾಪಿ, ನಮ್ಮ ಸಮಿತಿಯ ಯುವ ವಿಭಾಗವು ಸಕ್ರಿಯವಾಗಿ ವಿವಿಧ ರೀತಿಯ ಸಹಕಾರ ನೀಡುತ್ತಿದೆ. ಯುವ ವಿಭಾಗದವು ಶಿಸ್ತು ಮತ್ತು ಅಚ್ಚುಕಟ್ಟಾಗಿ ಫುಟ್ಬಾಲ್‌ ಪಂದ್ಯಾಟವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.

ಬಂಟರ ಸಂಘದ ಜತೆ ಕೋಶಾಧಿಕಾರಿ ಐಕಳ ಗುಣಪಾಲ್‌ ಶೆಟ್ಟಿ ಅವರು ಮಾತನಾಡಿ, ಈ ಪ್ರಾದೇಶಿಕ ಸಮಿತಿ ಅನೇಕ ಚಟುವಟಿಕೆಗಳನ್ನು ಆಯೋಜಿಸಿದೆ. ಫುಟ್ಬಾಲ್‌ ಪಂದ್ಯಾಟ ಮಹಿಳೆಯರ ಕ್ರೀಡಾಸಕ್ತಿಯನ್ನು ಹೆಚ್ಚಿಸಿದೆ ಎಂದರು.
ವೇದಿಕೆಯಲ್ಲಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ರಂಜನಿ ಸುಧಾಕರ ಹೆಗ್ಡೆ, ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ್‌ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಕರ್ನೂರು ಶಂಕರ್‌ ಆಳ್ವ, ಗೌರವ ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ ಕಣಂಜಾರು ಕೋಶಾಧಿಕಾರಿ ವಿಜಯ ಶೆಟ್ಟಿ, ಜತೆ ಕಾರ್ಯದರ್ಶಿ ರತೀಶ್‌ ಶೆಟ್ಟಿ, ಜೊತೆ ಕೋಶಾಧಿಕಾರಿ  ಜಗನ್ನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಜಯಾ  ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಶೆಟ್ಟಿ, ಕ್ರೀಡಾ ಸಮಿತಿಯ ವಿಭಾಗದ  ಕಾರ್ಯಾಧ್ಯಕ್ಷ ಅರುಣ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್‌ ಶೆಟ್ಟಿ ನೀರೆ ಹಾಗೂ ಪದಾಧಿಕಾರಿಗಳಾದ ಹರೀಶ್‌ ಶೆಟ್ಟಿ, ಪ್ರಖ್ಯಾತ್‌ ಶೆಟ್ಟಿ, ಶ್ರದ್ಧಾ ಶೆಟ್ಟಿ, ಯಶ್ವಿ‌ನ್‌ ಶೆಟ್ಟಿ, ರಿತೇಶ್‌ ಶೆಟ್ಟಿ, ಪ್ರೀತಿ ಶೆಟ್ಟಿ, ಸಂಜನಾ ಶೆಟ್ಟಿ ಉಪಸ್ಥಿತರಿದ್ದರು. ಪ್ರವೀಣ್‌ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ಸುಪ್ರೀತ್‌ ಶೆಟ್ಟಿ ವಂದಿಸಿದರು. ಭಾರತೀಯ ಫುಟ್ಬಾಲ್‌ ತಂಡದ ಆಟಗಾರ್ತಿ ರುಚಿ ಶೆಟ್ಟಿ ಅವರು ಫುಟ್ಬಾಲ್‌ ಆಡುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

Advertisement

ಪಂದ್ಯಾಟದಲ್ಲಿ ಎಂಟು ತಂಡಗಳು ಭಾಗವಹಿಸಿದ್ದು, ಸಂಜೆಯವರೆಗೆ ನಡೆಯಿತು. ಬಂಟರ ಸಂಘದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ 
ಪದಾಧಿಕಾರಿಗಳು, ಸಮಾಜದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅತಿಥಿಯಾಗಿ ಪಾಲ್ಗೊಂಡ  ಭಾರತೀಯ ಫುಟ್ಬಾಲ್‌ ತಂಡದ ಆಟಗಾರ್ತಿ ರುಚಿ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next