Advertisement
ಆ. 5 ರಂದು ಸಿಬಿಡಿಯ ಹೊಟೇಲ್ ಅಶ್ವಿತ್ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ ವತಿಯಿಂದ ನಡೆದ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಾವು ಪಡೆದ ಶೈಕ್ಷಣಿಕ ನೆರವನ್ನು ಎಂದಿಗೂ ಮರೆಯಬಾರದು. ಭವಿಷ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಸಂಸ್ಥೆಯ ಋಣ ತೀರಿಸುವ ಕಾರ್ಯವನ್ನು ಮಾಡಬೇಕು. ಸಮಿತಿಯು ಆಯೋಜಿಸಿರುವ ಇಂದಿನ ಎಲ್ಲಾ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಮತ್ತು ಅವರ ತಂಡವು ಪ್ರಸ್ತುತ ವರ್ಷ ಬೃಹತ್ ಮೊತ್ತದ ನಿಧಿಯನ್ನು ಆರ್ಥಿಕ ನೆರವಿಗಾಗಿ ದಾನಿಗಳಿಂದ ಪಡೆದು ವಿನಿಯೋಗಿಸಿರುವುದು ಅಭಿನಂದನೀಯ. ಬಂಟರ ಸಂಘದಿಂದ ಸದ್ಯಕ್ಕೆ ಕೊಡಮಾಡುವ ವಿದ್ಯಾರ್ಥಿ ವೇತನವನ್ನು ಮೊಟಕುಗೊಳಿಸಿ ಆಯ್ದ ವಿದ್ಯಾರ್ಥಿಗಳ ಒಂದನೇ ತರಗತಿಯಿಂದ ಸಂಪೂರ್ಣ ಖರ್ಚನ್ನು ಭರಿಸುವ ಯೋಜನೆಯನ್ನು ಹೊಂದಿದ್ದೇವೆ. ಆರಂಭದಲ್ಲಿ ಸುಮಾರು 300-350 ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚವನ್ನು ದತ್ತು ಸ್ವೀಕರಿಸುವ ಯೋಜನೆ ನಮ್ಮ ಮುಂದಿದೆ. ಅಲ್ಲದೆ ನವಿಮುಂಬಯಿಯಲ್ಲಿ 3 ಸಾವಿರದಿಂದ 4 ಸಾವಿರ ಚದರಡಿಯ ಜಾಗ ಲಭ್ಯವಿದ್ದಲ್ಲಿ ನಾವು ಕಾಲೇಜನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ನವಿಮುಂಬಯಿ ಪ್ರಾದೇಶಿಕ ಸಮಿತಿಗೆ ಸ್ವಂತ ಕಚೇರಿಯ ಅಗತ್ಯವಿದ್ದು, ಪ್ರಸ್ತುತ ಕಾರ್ಯಾಧ್ಯಕ್ಷರ ಅವಧಿಯಲ್ಲಿ ಪೂರ್ಣಗೊಳ್ಳಬೇಕಿದೆ ಎಂದರು. ಗಣ್ಯರು ಹಾಗೂ ಸಮಿತಿಯ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು ಅವರು ಸ್ವಾಗತಿಸಿ ಮಾತನಾಡಿ, ಮಹಿಳಾ ವಿಭಾಗದ ಆಟಿಡೊಂಜಿ ಕಾರ್ಯಕ್ರಮ, ಚಂದ್ರಕಾಂತ್ ಆಚಾರ್ಯ ಪಡುಬಿದ್ರೆ ಅವರ ರಸಮಂಜರಿ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿದೆ. ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯೆಯರು ಅಭಿನಂದನಾರ್ಹರು. ಮುಖ್ಯವಾಗಿ ಎಲ್ಲಾ ಒಂಭತ್ತು ಪ್ರಾದೇಶಿಕ ಸಮಿತಿಗಳು ಸ್ವಂತ ಕಚೇರಿಯನ್ನು ಹೊಂದಿರಬೇಕು ಎಂಬ ನಮ್ಮ ಅಧ್ಯಕ್ಷರ ದೊಡ್ಡ ಕನಸಾಗಿದೆ. ನಮಗೂ ಕೂಡಾ ಸ್ವಂತ ಕಚೇರಿಯ ಅಗತ್ಯತೆಯಿದೆ. ನಮ್ಮ ಮಾಜಿ ಕಾರ್ಯಾಧ್ಯಕ್ಷರು ಮತ್ತು ಸಲಹೆಗಾರರ ನೇತೃತ್ವದಲ್ಲಿ ಈ ಕಾರ್ಯವನ್ನು ನನ್ನ ಕಾರ್ಯಾವಧಿಯಲ್ಲಿ ಪೂರೈಸುವಲ್ಲಿ ಎಲ್ಲರ ಸಹಕಾರವಿರಲಿ ಎಂದರು.
Related Articles
Advertisement
ಹಿರಿಯ ಉದ್ಯಮಿ ಸದಾಶಿವ ಶೆಟ್ಟಿ ಅವರು ಮಾತನಾಡಿ, ನಾವಿಂದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಗಳನ್ನು ಮಾಡಿದ್ದೇವೆ. ಕಚೇರಿಯ ಸ್ಥಾಪನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಇವರು ಮಾತನಾಡಿ, ವಿದ್ಯಾನಿಧಿಗಾಗಿ ಬರುವ ಮನವಿ ಪತ್ರವನ್ನು ಸ್ಥಳೀಯ ಸಮಿತಿಗಳು ಪರಿಶೀಲಿಸಿ ಆನಂತರ ಸಂಘಕ್ಕೆ ನೀಡಬೇಕು. ಇಂದಿನ ಮಹಿಳಾ ವಿಭಾಗದ ಕಾರ್ಯ ಅಭಿನಂದನೀಯ. ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ ಮತ್ತು ಅವರ ತಂಡದವರ ಸೇವೆ ಶ್ಲಾಘನೀಯ ಎಂದರು.
ಬಂಟರ ಸಂಘದ ಮಧ್ಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ ಇವರು ಮಾತನಾಡಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯು ಎಲ್ಲಾ ವಿಧಗಳಿಂದಲೂ ಮುಂದಿದೆ. ನಾವೆಲ್ಲರು ಸೇರಿ ಒಂದು ಸಭಾಭವನವನ್ನು ನಿರ್ಮಿಸೋಣ. ಸಮಿತಿಯ ವಿಶೇಷತೆ ಎಂದರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾಜಿ ಕಾರ್ಯಾಧ್ಯಕ್ಷರುಗಳ ಉಪಸ್ಥಿತಿ ಎನ್ನಬಹುದು. ಇದು ಈ ಸಮಿತಿಯ ಏಕತೆಯನ್ನು ಬಿಂಬಿಸುತ್ತದೆ.
ವಿಜಯಲಕ್ಷಿ³à ಆರ್. ಶೆಟ್ಟಿ ಪ್ರಾರ್ಥನೆಗೈದರು. ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಯಿತು. ರಸಮಂಜರಿ ಕಾರ್ಯಕ್ರಮವನ್ನು ನೀಡಿದ ಚಂದ್ರಕಾಂತ್ ಆಚಾರ್ಯ ಪಡುಬಿದ್ರೆ ಇವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿದರು. ಇತ್ತೀಚೆಗೆ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯಿಂದ ನಡೆದ ಫುಟ್ಬಾಲ್ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಪ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ ವಂದಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಹಾಗೂ ಪ್ರಾದೇಶಿಕ ಸಮಿತಿಯ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಕೋಶಾಧಿಕಾರಿ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ಶೆಟ್ಟಿ ಶಿಮಂತೂರು ಬಾವ, ಜತೆ ಕೋಶಾಧಿಕಾರಿ ನಾಗೇಶ್ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಜತೆ ಕಾರ್ಯದರ್ಶಿ ರವೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಯ್ ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಕಾರ್ಯಾಧ್ಯಕ್ಷರೊಂದಿಗೆ ಮಹಿಳಾ ವಿಭಾಗದ ರೇಣುಕಾ ರೈ, ವೀಣಾ ಎ. ಶೆಟ್ಟಿ, ಗುಣವತಿ ವೈ. ಶೆಟ್ಟಿ, ಸಲಹೆಗಾರರಾದ ಶಿವರಾಮ್ ಜೆ. ಶೆಟ್ಟಿ ಹಾಗೂ ರವಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮಕ್ಕಳ ಶೈಕ್ಷಣಿಕ ದತ್ತಿನಿಧಿಗೆ ಸಹಕರಿಸಿದ ಎಲ್ಲಾ ದಾನಿಗಳನ್ನು ಹಾಗೂ ವಿಶೇಷ ರೀತಿಯಲ್ಲಿ ಅಡುಗೆ ತಯಾರಿಸಿ ಪ್ರದರ್ಶಿಸಿದ ಮಹಿಳಾ ಸದಸ್ಯೆಯರನ್ನು ಸತ್ಕರಿಸಲಾಯಿತು. ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.
ಸಮಾಜಪರ ಕಾರ್ಯವನ್ನು ಮಾಡುವಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ನಾವು ಕಚೇರಿ ಅಥವಾ ಸಭಾಗೃಹ ನಿರ್ಮಿಸುವಲ್ಲಿ ದೇಣಿಗೆ ಸಂಗ್ರಹದ ಅಗತ್ಯವಿದೆ. ಇದನ್ನು ಸಂಗ್ರಹಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕು. ಎಲ್ಲಾ ಉತ್ತಮ ಕಾರ್ಯಗಳು ನವಿಮುಂಬಯಿ ಸಮಿತಿಯಿಂದಲೇ ಪ್ರಾರಂಭಗೊಳ್ಳಬೇಕು. ಸಭಾಭವನದ ಕಾರ್ಯ ಶೀಘ್ರದಲ್ಲಿ ಆರಂಭವಾಗಿ ಯಶಸ್ಸನ್ನು ಹೊಂದಲಿ.ಸಂತೋಷ್ ಡಿ. ಶೆಟ್ಟಿ ,
ಮಾಜಿ ಕಾರ್ಯಾಧ್ಯಕ್ಷರು : ನವಿಮುಂಬಯಿ ಪ್ರಾದೇಶಿಕ ಸಮಿತಿ. ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು, ಸಲಹೆಗಾರರ ಕೊಡುಗೆ ಅಪಾರವಾಗಿದೆ. ಮುಂದೆಯೂ ಅವರ ಮುಂದಾಳತ್ವದಲ್ಲಿ ನಮಗೆ ಕಚೇರಿಯ ಸ್ಥಾಪನೆಯಾಗಬೇಕು. ನನ್ನ ಕಾರ್ಯಾವಧಿಯಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕಾರದ ಯೋಜನೆಯು ಆರಂಭಗೊಂಡು ಇಂದು ಎಲ್ಲಾ ಪ್ರಾದೇಶಿಕ ಸಮಿತಿಗಳಲ್ಲೂ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಖಾಂದೇಶ್ ಭಾಸ್ಕರ್ ಶೆಟ್ಟಿ ,
ಸಮನ್ವಯಕರು, ನವಿಮುಂಬಯಿ
ಪ್ರಾದೇಶಿಕ ಸಮಿತಿ. ನಮಗೆ 300 ಮಂದಿ ಆಸೀನರಾಗುವಂತಹ ಸಭಾಭವ ನದ ಅಗತ್ಯವಿದೆ. ಅದಕ್ಕೆ ಕಡಿಮೆಯೆಂದರೂ 300-400 ಚದರ ಮೀಟರ್‌ನ ಜಾಗ ಖರೀದಿಸಬೇಕಾಗಿದೆ. ಪ್ರಸಕ್ತ ಕಾರ್ಯಾಧ್ಯಕ್ಷರ ಕಾಲಾವಧಿಯಲ್ಲಿ ಈ ಯೋಜನೆ ಪೂರ್ಣ ಗೊಳ್ಳಬೇಕು. ಇದಕ್ಕೆ ನನ್ನ ಸಹಕಾರ ಇದೆ. ತಮ್ಮ ನಿರ್ಮಾಣದ ಶ್ರೀದೇವಿ ಚರಿತ್ರೆ ಧಾರವಾಹಿಯು ಚಂದನ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ. ತಾವೆಲ್ಲರೂ ಅದನ್ನು ಪ್ರೋತ್ಸಾಹಿಸಬೇಕು .
ಕೆ. ಡಿ. ಶೆಟ್ಟಿ ,
ಸ್ಥಾಪಕ ಕಾರ್ಯಾಧ್ಯಕ್ಷರು : ನವಿಮುಂಬಯಿ ಪ್ರಾದೇಶಿಕ ಸಮಿತಿ