Advertisement
ಅ.2 ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಸಂಘದ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ಯ ಮಹಿಳಾ ವಿಭಾಗದ ವತಿಯಿಂದ ಸಮಾಜದ ದಂಪತಿಗಳಿಗಾಗಿ ನಡೆದ ಆದರ್ಶ ದಂಪತಿ ಞ-2018 ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಕೇವಲ ಅಂಕಗಳನ್ನು ಪಡೆಯುತ್ತಾರೆಯೇ ಹೊರತು ಅದರೊಂದಿಗೆ ಸಿಗಬೇಕಾದ ಸಂಸ್ಕಾರದ ಕೊರತೆಯಿಂದಾಗಿ ಇಂದು ಅನೇಕ ಕುಟುಂಬಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದರ ಬಗ್ಗೆ ಹೆತ್ತವರು ಎಚ್ಚರ ವಹಿಸಬೇಕು. ಮನೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ನೀಡಿ ಆದರ್ಶಮಯ ಜೀವನವನ್ನು ನಡೆಸಲು ಪ್ರೇರೇಪಿಸಬೇಕು. ಇದರಿಂದ ಕುಟುಂಬದೊಂದಿಗೆ ಸಮಾಜವು ಸುಸಂಸ್ಕೃತವಾಗಿ ಬೆಳೆಯುತ್ತದೆ ಎಂದರು.
Related Articles
Advertisement
ಅತಿಥಿಯಾಗಿ ಪಾಲ್ಗೊಂಡ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಮಾತನಾಡಿ, ಬೆಳಗ್ಗೆಯ ಸ್ವಲ್ಪ ಸಮಯವನ್ನಾದರೂ ಹೆಂಡತಿ ಮಕ್ಕಳೊಂದಿಗೆ ಕಳೆಯಬೇಕು. ಇದರಿಂದ ದಿನಪೂರ್ತಿ ನಾವು ಉಲ್ಲಾಸದಿಂದಿರಲು ಸಾಧ್ಯ ಎಂದು ಹೇಳಿದರು. ಇನ್ನೋರ್ವ ಅತಿಥಿ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ್ ಭಂಡಾರಿ ಅವರು ಮಾತನಾಡಿ, ನಾವು ಕೇವಲ ಸ್ಪರ್ಧೆಗಾಗಿ ಆದರ್ಶವಾಗಿರದೆ ನಿಜ ಜೀವನದಲ್ಲೂ ಆದರ್ಶವಂತರಾಗಿ ಬದುಕ ಬೇಕು ಎಂದು ನುಡಿದರು.
ಬಂಟರ ಸಂಘ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರು ಮಾತನಾಡಿ, ದಾಂಪತ್ಯ ಜೀವನವೆಂಬುವುದು ಜೀವನ ರಥದ ಒಂದೇ ಚಕ್ರವಿದ್ದಂತೆ. ಇದು ಸರಿಯಾಗಿದ್ದರೆ ಜೀವನವು ಮುಂದೆ ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು. ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಅವರು ಮಾತನಾಡಿ, ಇಂದಿನ ಈ ಕಾರ್ಯಕ್ರ ಮವು ಉತ್ತಮವಾಗಿ ಮೂಡಿಬಂದಿದ್ದು, ಇದು ಸಮಾಜದ ದಂಪತಿಗಳ ಪ್ರತಿಭೆಯನ್ನು ಅನಾವ ರಣಗೊಳಿಸಿ ಯಶಸ್ವಿಯಾಗಿದೆ ಎಂದರು.
ಬಂಟರ ಸಂಘ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ ಅವರು ಮಾತನಾ ಡಿ, ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ರಮ್ಯಾ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಸಿದ ಆದರ್ಶ ದಂಪತಿ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಯು. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ಪಲ್ಲವಿ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾ ರೈಸಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿ, ಲತಾ ಜೆ. ಶೆಟ್ಟಿ ಮತ್ತು ಸರೋಜಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಕೇಂದ್ರ ಪ್ರಾದೇಶಿಕ ಸಮಿತಿಯ ಸಮನ್ವಯಕ ದಿವಾಕರ ಶೆಟ್ಟಿ ಇಂದ್ರಾಳಿ, ಸಂಘದ ಕುರ್ಲಾ- ಭಾಂಡೂಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಯು. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ತಾರಾನಾಥ ಶೆಟ್ಟಿ, ಸಮಿತಿಯ ಸಂಚಾಲಕ ಗಣೇಶ್ ರೈ, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಜತೆ ಕೋಶಾಧಿಕಾರಿ ಸಂಜೀವ ಶೆಟ್ಟಿ, ಮಹಿಳಾ ಸಮಿತಿಯ ಉಪ ಕಾರ್ಯಾಧ್ಯಕ್ಷೆ ಸಂಗೀತಾ ಶೆಟ್ಟಿ, ಕಾರ್ಯದರ್ಶಿ ಅಮೃತಾ ಶೆಟ್ಟಿ, ಕೋಶಾಧಿಕಾರಿ ಡಾ| ಪಲ್ಲವಿ ಶೆಟ್ಟಿ, ಜತೆ ಕಾರ್ಯದರ್ಶಿ ಸರೋಜಿನಿ ಶೆಟ್ಟಿ, ಜೊತೆ ಕೋಶಾಧಿಕಾರಿ ವೀಣಾ ಶೆಟ್ಟಿ, ಸಲಹೆಗಾರ ಬೆಳ್ಳಂಪಳ್ಳಿ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರುಆದರ್ಶ ದಂಪತಿ ಸ್ಪರ್ಧೆಯಲ್ಲಿ ಒಟ್ಟು 10 ಜೋಡಿ ದಂಪತಿಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸದಾನಂದ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿ ಪಡೆದರೆ, ದ್ವಿತೀಯ ಬಹುಮಾನವನ್ನು ನವಿಮುಂಬಯಿ ಪ್ರಾದೇಶಿಕ ಸಮಿತಿಯ ಭಾಗ್ಯಪ್ರಸಾದ್ ಶೆಟ್ಟಿ ,ಸುಚಿತಾ ಶೆಟ್ಟಿ ದಂಪತಿ ಹಾಗೂ 3ನೇ ಬಹುಮಾನವನ್ನು ಸಿಟಿ ಪ್ರಾದೇಶಿಕ ಸಮಿತಿಯ ಶಿಬರೂರುಗುತ್ತು ಸುರೇಶ್ ಶೆಟ್ಟಿ ,ಪುಷ್ಪಾ ಶೆಟ್ಟಿ ದಂಪತಿ ಪಡೆದರು. ಬಹುಮಾನದ ಪ್ರಾಯೋಜಕರು
ಮೊದಲ ಬಹುಮಾನದ ಪ್ರಾಯೋಜಕರಾಗಿ ಲತಾ ಜಯರಾಮ ಶೆಟ್ಟಿ, ದ್ವಿತೀಯ ಬಹುಮಾನದ ಪ್ರಾಯೋಜಕರಾಗಿ ಉಮಾಕೃಷ್ಣ ಶೆಟ್ಟಿ , ತೃತೀಯ ಬಹುಮಾ ನದ ಪ್ರಾಯೋಜಕರಾಗಿ ರತ್ನಾ ಶೆಟ್ಟಿ ಸಹಕ ರಿಸಿದರು. ಸ್ಪರ್ಧೆಯ ನಿರ್ಣಾ ಯಕರಾಗಿ ಜಯಶೀಲ ಸುವರ್ಣ, ಪ್ರಜ್ವ ಲ್ ಕಾರ್ಕಳ, ಆಶಾ ನಂಬಿಯಾರ್, ಅಂಜಲಿ ಸರಫ್ ಅವರು ಪಡೆದರು. ಸನ್ನಿಧ್ ಪೂಜಾರಿ ನಿರ್ದೇಶನದಲ್ಲಿ ಆದರ್ಶ ದಂಪತಿ-2018 ಸ್ಪರ್ಧೆ ನಡೆಯಿತು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ವಿಭಾಗೀಯ ಪ್ರಶಸ್ತಿ ಪುರಸ್ಕೃತರು
ಪಾಪ್ಯೂಲರ್ ಇಂಟರ್‌ನೆಟ್ ದಂಪತಿಯಾಗಿ ಸತೀಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ, ಬೆಸ್ಟ್ ಇಂಟಲೆಕ್ಚವಲ್ ದಂಪತಿಯಾಗಿ ಪೇತ್ರಿ ವಿಶ್ವನಾಥ ಶೆಟ್ಟಿ ಮತ್ತು ಚಿತ್ರಾ ವಿ. ಶೆಟ್ಟಿ, ಬೆಸ್ಟ್ ಔಟ್‌ಫಿಟ್ ದಂಪತಿಯಾಗಿ ಆಶೀಶ್ ಶೆಟ್ಟಿ ಮತ್ತು ಹರ್ಷಿತಾ ಶೆಟ್ಟಿ, ಬೆಸ್ಟ್ ವಾಲ್ಕ್ ದಂಪತಿಯಾಗಿ ಯೋಗೇಶ್ ಶೆಟ್ಟಿ ಮತ್ತು ಆರತಿ ವೈ. ಶೆಟ್ಟಿ, ಬೆಸ್ಟ್ ಹೇಯರ್ ದಂಪತಿಯಾಗಿ ಸಾಯಿನಾಥ್ ಶೆಟ್ಟಿ ಮತ್ತು ರಚಿತಾ ಎಸ್. ಶೆಟ್ಟಿ, ಬೆಸ್ಟ್ ಫೇಸ್ ದಂಪತಿಯಾಗಿ ವಿಕ್ರವಾನಂದ ಶೆಟ್ಟಿ ಮತ್ತು ರಚಿತಾ ಶೆಟ್ಟಿ, ಬೆಸ್ಟ್ ಸ್ಮೈಲ್ ದಂಪತಿಯಾಗಿ ವಾಸುದೇವ ಶೆಟ್ಟಿ ಮತ್ತು ನಂದಿನಿ ವಿ. ಶೆಟ್ಟಿ ಅವರು ಪ್ರಶಸ್ತಿ ಪಡೆದರು. ಚಿತ್ರ-ವರದಿ: ಸುಭಾಷ್ ಶಿರಿಯಾ