Advertisement
ಜೂ. 16 ರಂದು ಕಾಂದಿವಲಿ ಪೂರ್ವದ ಹೊಟೇಲ್ ಅವೆನ್ಯೂ ಸಭಾಗೃಹದಲ್ಲಿ ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ನಡೆದ ವಾರ್ಷಿಕ ಆರ್ಥಿಕ ಸಹಾಯ ಮೇಳ ಮತ್ತು ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಶಿಕ್ಷಣ ಕ್ಷೇತ್ರದಲ್ಲಿ ದೇಶವು ಗಮನೀಯವಾಗಿ ಸಾಧನೆಗೈಯುತ್ತಿರುವ ಇಂದಿನ ದಿನಗಳಲ್ಲಿ ಸಮಾಜದ ಪ್ರತಿಯೊಂದು ಮಕ್ಕಳು ಕಲಿಕೆಯತ್ತ ವಿಶೇಷ ಗಮನ ಹರಿಸಿ ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ನುಡಿದರು.
Related Articles
ಪ್ರಾರಂಭದಲ್ಲಿ ವಿಶಾಲಾಕ್ಷೀ ಶೆಟ್ಟಿ ಪ್ರಾರ್ಥನೆಗೈದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅವರು ಸ್ವಾಗತಿಸಿದರು.
Advertisement
ಅತಿಥಿಗಳನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಅವೆನ್ಯೂ ಹೊಟೇಲ್ ಮಾಲಕ ರಘುರಾಮ ಶೆಟ್ಟಿ, ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿ, ಸ್ಥಳೀಯ ಸಮಿತಿಯ ಸಂಚಾಲಕರಾದ ವಿಜಯ ಆರ್. ಭಂಡಾರಿ, ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಸಮಿತಿಯ ಉಪ ಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ, ಸಲಹೆಗಾರರಾದ ಮನೋಹರ್ ಶೆಟ್ಟಿ, ಸ್ಥಳೀಯ ಸಮಿತಿಯ ಗೌರವ ಕೋಶಾಧಿಕಾರಿ ಗಂಗಾಧರ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ವಿನೋದಾ ಅಶೋಕ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್ ಎಸ್. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಸಮಾಜದ ವಿದ್ಯಾರ್ಥಿಗಳಿಗೆ ಧನ ಸಹಾಯ, ಸ್ಕಾಲರ್‌ಶಿಪ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ರಮಾನಾಥ ಪಯ್ಯಡೆ ಕಾಲೇಜ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಅಣ್ಣಲೀಲಾ ಕಾಲೇಜ್, ಶೋಭಾ ಜಯರಾಮ ಶೆಟ್ಟಿ, ಎಸ್‌ಎಂ ಶೆಟ್ಟಿ ಕಾಲೇಜಿನ ಪ್ರೊಫೇಸರ್‌ಗಳು ವಿದ್ಯಾರ್ಥಿಗಳ ಪ್ರವೇಶದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಸಮಿತಿಯ ಗೌರವ ಕಾರ್ಯದರ್ಶಿ ಕೊಂಡಾಡಿ ಪ್ರೇಮನಾಥ್ ಶೆಟ್ಟಿ ವಂದಿಸಿದರು. ರಘುನಾಥ ಎನ್. ಶೆಟ್ಟಿ, ಅಶೋಕ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಮಿತಿಯ ಪದಾಧಿಕಾರಿಗಳು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಂಟರ ಸಂಘದ ಇತಿಹಾಸದಲ್ಲೇ ಶೈಕ್ಷಣಿಕ ಕ್ರಾಂತಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜಕ್ಕೆ ಸಂಘವು ನೀಡುವ ವಿಶೇಷ ಕೊಡುಗೆಯನ್ನು ಉತ್ತಮ ರೀತಿಯಲ್ಲಿ ಸದುಪಯೋಗವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸದಸ್ಯ ಬಾಂಧವರ ಮೇಲಿದೆ.
-ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಕಾರ್ಯಾಧ್ಯಕ್ಷರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಬಂಟರ ಸಂಘ ಮುಂಬಯಿ
ಶಿಕ್ಷಣ ಮಕ್ಕಳ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಕ್ಕಳು ಸುಸಂಸ್ಕೃತರಾಗಿ ದೇಶದ ಉತ್ತಮ ಸತøಜೆಗಳಾಗಿ ಬಾಳಬೇಕು. ವ್ಯವಸ್ಥಿತವಾಗಿ ರೂಪಿಸಿದ ಈ ಯೋಜನೆಯು ಮನಸ್ಸಿಗೆ ಮುದ ನೀಡಿದೆ.
-ರಂಜನಿ ಎಸ್. ಹೆಗ್ಡೆ, ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿಯಿಂದ ಸಮಾಜ ಬಾಂಧವರನ್ನು ಹತ್ತಿರ ದಿಂದ ಕಾಣುವಂತಾಗಿದೆ. ಸಮಿತಿಯಿಂದ ಇಂದು ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯ ದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿ ಸಂಘದ ಋಣ ತೀರಿಸುವ ಮೂಲಕ ಇತರರಿಗೆ ನೆರವಾಗಬೇಕು.
-ಡಾ| ಪ್ರಭಾಕರ ಶೆಟ್ಟಿ, ಸಮನ್ವಯಕರು, ಪ. ವಿಭಾಗದ
ಪ್ರಾದೇಶಿಕ ಸಮಿತಿಗಳು ಚಿತ್ರ-ವರದಿ : ರಮೇಶ್ ಉದ್ಯಾವರ