Advertisement

ಬಂಟರ ಸಂಘ ಜೋಗೇಶ್ವರಿ-ದಹಿಸರ್‌ : ಆಟಿಡೊಂಜಿ ಕೂಟ

11:22 AM Jul 31, 2018 | |

ಮುಂಬಯಿ: ಬದಲಾಗುತ್ತಿರುವ ಪರಿವರ್ತನೆಯಲ್ಲಿ ನಮ್ಮ ಜೀವನದ ಹಿನ್ನೆಲೆ ಮುಂದಿನ ಜನಾಂಗಕ್ಕೆ ತಿಳಿಸುವ ಇಂತಹ ಕಾರ್ಯಕ್ರಮ ಸ್ತುತ್ಯರ್ಹ. ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಊರಿನ ಜನರ ಹಿಂದಿನ ಬೇಸಾಯದ ದಿನಗಳ ಕಷ್ಟಗಳನ್ನು ನಾವು ತಿಳಿಯಪಡಿಸುವ ಈ ಕಾರ್ಯಕ್ರಮ  ಯುವ ಪ್ರೇರಣೆಯಾಗಬಹುದು. ಮನುಷ್ಯ ಕಷ್ಟಪಟ್ಟು ಧರ್ಮದ ಹಾದಿಯಲ್ಲಿ ನಡೆದರೆ ಅದರ ಅನುಭವ ಆತನಿಗೆ ಯಶಸ್ಸು ನೀಡುತ್ತದೆ. ಆದರೆ ಇಂದು ಊರಿನ ಜೀವನ ಶೈಲಿ ಮುಂಬಯಿ ಜನರಿಗಿಂತ ಉಚ್ಚಮಟ್ಟಕ್ಕೇರಿದ್ದು,  ಪರಿವರ್ತನೆಯ ಹಾದಿಯಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದ ಜೀವನವೇ  ಮಹತ್ವದ್ದಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

Advertisement

ಜು. 28 ರಂದು ಕಾಂದಿವಲಿ ಪೂರ್ವದ ಹೊಟೇಲ್‌ ಅವೆನ್ಯೂ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಇವರು, ನನ್ನ ನೇತೃತ್ವದಲ್ಲಿ ಪ್ರಾರಂಭಗೊಂಡ ಈ ಎರಡನೆ ಪ್ರಾದೇಶಿಕ ಸಮಿತಿ ಇಂದು ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಅವರ  ಸಂಘಟನೆಯಲ್ಲಿ ಉತ್ತಮವಾಗಿ ಕಾರ್ಯವೆಸಗುತ್ತಿದೆ. ಅದರ ಪ್ರಯೋಜನವನ್ನು ಪಡೆದು ಸಮಾಜ ಬಾಂಧವರು ಇನ್ನಷ್ಟು ಸಂಘಟಿತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಹಾನಗರ ಕಸ್ಟಮ್‌ ಬ್ರೋಕರ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪೊಯಿಸಾರ್‌ ಜಿಮಾVನದ ಉಪಾಧ್ಯಕ್ಷ, ಸಂಘಟಕ ಕರುಣಾಕರ ಶೆಟ್ಟಿ ಮತ್ತು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಮುಂಬಯಿಯ ಕೌಡೂರು ನಾರಾಯಣ ಶೆಟ್ಟಿ ಹಾಗೂ ಬೈಕ್‌ ರ್ಯಾಲಿಯ ಛಾಯಾಗ್ರಾಹಕ ಸಚಿನ್‌ ಶೆಟ್ಟಿ ಕಾಪು, ಅಭಿಷೇಕ್‌ ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಅಭಿನಂದನೆ 
ವೇದಿಕೆಯಲ್ಲಿ ಉಪಸ್ಥಿತರಿದ್ದ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿ ಮಹಿಳೆಯರನ್ನು ಅಭಿನಂದಿಸಿದರು.

ರಜನಿ ಆರ್‌. ಶೆಟ್ಟಿ ಪ್ರಾರ್ಥನೆಗೈದರು. ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಪ್ರತೀ ವರ್ಷ ಜರಗುವ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಸಹಕಾರವನ್ನು ಮರೆಯುವಂತಿಲ್ಲ. ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ ಹಾಗೂ ಅವರ ತಂಡದ ಸದಸ್ಯೆಯರ ಪ್ರಯತ್ನ ಮತ್ತು ಮಕ್ಕಳು ನೀಡಿದ ಕಾರ್ಯಕ್ರಮವನ್ನು ಅಭಿನಂದಿಸಿದರು.

Advertisement

ವೇದಿಕೆಯಲ್ಲಿ ಅವೆನ್ಯೂ ಹೊಟೇಲ್‌ನ ಮಾಲಕ ರಘುರಾಮ ಶೆಟ್ಟಿ, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್‌ ಶೆಟ್ಟಿ, ಸಮಿತಿಯ ಸಲಹೆಗಾರರುಗಳಾದ ಮನೋಹರ ಎನ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ, ಸಮಿತಿಯ ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್‌ ಎಸ್‌. ಶೆಟ್ಟಿ, ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಶೈಲಜಾ ಶೆಟ್ಟಿ, ಕಾರ್ಯದಶಿಭ ಸುನೀತಾ ಎನ್‌. ಹೆಗ್ಡೆ, ಕೋಶಾಧಿಕಾರಿ ರೇಖಾ ಶೆಟ್ಟಿ, ಸಲಹೆಗಾರ್ತಿ ವಿನೋದಾ ಡಿ. ಶೆಟ್ಟಿ ಉಪಸ್ಥಿತರಿದ್ದರು.

ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ, ಸಂಚಾಲಕ ವಿಜಯ ಭಂಡಾರಿ, ವಾರ್ತಾ ಮತ್ತು ತಾಂತ್ರಿಕ ವಿಭಾಗದ ಸಲಹೆಗಾರ ಪ್ರಕಾಶ್‌ ಎ. ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ  ಪ್ರವೀಣ್‌ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಶುಭಾಂಗಿ ಶೆಟ್ಟಿ, ಸತೀಶ್‌ ಶೆಟ್ಟಿ, ಸುಚರಿತಾ ಶೆಟ್ಟಿ, ವಿಠಲ ಆಳ್ವ, ಶೈಲಜಾ ಎ. ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.
ಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ರಘುನಾಥ್‌ ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್‌ ವಿ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರವೀಣ್‌ ಆರ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಕೊಂಡಾಡಿ ಪ್ರೇಮ್‌ನಾಥ್‌ ಶೆಟ್ಟಿ ವಂದಿಸಿದರು. ಸದಸ್ಯರ ಮಕ್ಕಳಿಂದ, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಿತಿಯ ಮಹಿಳಾ ಸದಸ್ಯೆಯರು ಸುಮಾರು 85 ಕ್ಕಿಂತಲೂ ಅಧಿಕ ಆಟಿ ತಿಂಗಳ ಖಾದ್ಯ, ತಿನಸುಗಳನ್ನು ತಯಾರಿಸಿ ತಂದು ಪ್ರದರ್ಶಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಆಟಿ ತಿಂಗಳು ಕೃಷಿ ಮುಗಿದು ಆರಾಮವಾಗಿ ಮನೆಯಲ್ಲಿ ಕುಳಿತುಕೊಳ್ಳುವ ತಿಂಗಳಾಗಿದೆ. ಈ ದಿನಗಳಲ್ಲಿ ಯಾವುದೇ ರೀತಿಯ ಸಮಾರಂಭ, ಧಾರ್ಮಿಕ ಅಂಕ-ಆಯಾನಗಳು ಜರಗುವುದಿಲ್ಲ. ಆಟಿ ತಿಂಗಳು ಹೆಂಗಸರನ್ನು ಒಗ್ಗಟ್ಟಾಗಿಸುವ ತಿಂಗಳಾಗಿದೆ. ಜೊತೆಗೆ ಇಂದಿನ ಕಾರ್ಯಕ್ರಮಕ್ಕೂ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಆಟಿ ತಿಂಗಳಲ್ಲಿ ಆರೋಗ್ಯವರ್ಧಕ ಶಕ್ತಿಗಾಗಿ 101 ರೋಗನಿರೋಧಕ ಶಕ್ತಿಯಿಂದ ಕೂಡಿದ ಪಾಲೆಮರದ ಕಷಾಯ,  ಆ ದಿನಗಳ ನಮ್ಮ ಅಡುಗೆ, ತಿಂಡಿ-ತಿನಸುಗಳನ್ನು ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಅಗತ್ಯವಿದೆ. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಆಳವಾಗಿ ಅರ್ಥೈಯಿಸುವ ಕೆಲಸ ನಮ್ಮಲ್ಲಿ  ಆಗಬೇಕು. 
-ಮುಂಡಪ್ಪ, ಪಯ್ಯಡೆ, ಕಾರ್ಯಾಧ್ಯಕ್ಷ, ಬಂಟರ ಸಂಘದ 
ನೂತನ ಶಿಕ್ಷಣ ಯೋಜನಾ ಸಮಿತಿ

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next