Advertisement
ಕಲ್ಯಾಣ್‌ನ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇ ಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನಡೆದ ಮರಿಯಲದ ಪೊರ್ಲು ಅಟಿಲ್ದ ಪಂಥೋ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಸಮಿತಿಯ ಮಹಿಳಾ ವಿಭಾಗದ ಒಗ್ಗಟ್ಟು, ಉತ್ಸಾಹ ಇತರರಿಗೆ ಮಾದರಿಯಾಗಿದೆ ಎಂದರು.
Related Articles
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರಕಾಶ್ ಕುಂಠಿನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡುಗೆ ಸ್ಪರ್ಧೆಯ ತೀರ್ಪುಗಾರರು, ದಾನಿಗಳನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನು ವಿಶೇಷವಾಗಿ ಗೌರವಿಸಲಾಯಿತು. ಪ್ರವೀಣಾ ಶೆಟ್ಟಿ, ಶೋಭಾ ಶೆಟ್ಟಿ, ವಿನೋದಾ ಶೆಟ್ಟಿ, ಪ್ರೇಮಾ ಶೆಟ್ಟಿ, ಜಯಶ್ರೀ ಶೆಟ್ಟಿ, ಮಹಾಲಕ್ಷಿ¾à ಶೆಟ್ಟಿ, ಶೈಲಾ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.
Advertisement
ತೀರ್ಪುಗಾರರಾಗಿ ಕೃಷಿ¡ ಶೆಟ್ಟಿ, ಸತೀಶ್ ಶೆಟ್ಟಿ, ಡಾ| ಜ್ಯೋತಿ ಆರ್. ಎನ್. ಶೆಟ್ಟಿ ಅವರು ಸಹಕರಿಸಿದರು. ಸುಜಾತಾ ಶೆಟ್ಟಿ, ಪ್ರವೀಣಾ ಶೆಟ್ಟಿ, ಜಯಶ್ರೀ ಶೆಟ್ಟಿ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ರಂಜನಿ ಸುಧಾಕರ ಹೆಗ್ಡೆ, ಲತಾ ಜಯರಾಮ ಶೆಟ್ಟಿ, ಶಶಿಲತಾ ಶೆಟ್ಟಿ, ಜ್ಯೋತಿ ಪ್ರಕಾಶ್ ಕುಂಠಿನಿ, ಸತೀಶ್ ಎನ್. ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಸುಬ್ಬಯ್ಯ ಎ. ಶೆಟ್ಟಿ, ಸತೀಶ್ ಶೆಟ್ಟಿ, ಪ್ರವೀಣಾ ಪ್ರಕಾಶ್ ಶೆಟ್ಟಿ, ಶೈಲಾ ಎಂ. ಶೆಟ್ಟಿ, ಶೋಭಾ ಶೆಟ್ಟಿ, ಉಮಾ ಶೆಟ್ಟಿ, ಜಯಶ್ರೀ ಹರೀಶ್ ಶೆಟ್ಟಿ, ಡಾ| ಜ್ಯೋತಿ ಆರ್. ಎನ್. ಶೆಟ್ಟಿ, ಕೃಷಿ¡ ಶೆಟ್ಟಿ ಉಪಸ್ಥಿತರಿದ್ದರು. ರೂಪಾ ಡಿ. ಶೆಟ್ಟಿ ವಿಜೇತರ ಯಾದಿಯನ್ನು ಘೋಷಿಸಿದರು. ರೋಹಿಣಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಶೆಟ್ಟಿ ವಂದಿಸಿದರು. ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯಿಂತ ಕೂಡು ಕುಟುಂಬದ ಕಾರ್ಯಕ್ರಮವನ್ನು ಕಂಡು ಬಹಳಷ್ಟು ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ನಮ್ಮ ಸಹಕಾರ ಸದಾಯಿದೆ. ಮಹಿಳೆಯರು ಒಗಟ್ಟಾಗಿ ಇನ್ನಷ್ಟು ಸಮಿತಿಯನ್ನು ಸಂಘಟಿಸಬೇಕು .-ಸುಬ್ಬಯ್ಯ ಶೆಟ್ಟಿ ,
ಸಂಚಾಲಕರು : ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು. ಪ್ರಾದೇಶಿಕ ಸಮಿತಿಯ ವಿಹಾರಕೂಟವು ಒಂದು ವಿಶೇಷ ಅನುಭವ ನೀಡಿದೆ. ಅಂತಹ ವಿಹಾರಕೂಟವು ಸದಾ ನಡೆಯುತ್ತಿರಲಿ. ಸಮಿತಿಯ ಮಹಿಳಾ ವಿಭಾಗದ ಕಾರ್ಯ ಅಭಿನಂದನೀಯ .
-ಇಂದ್ರಾಳಿ ದಿವಾಕರ ಶೆಟ್ಟಿ ,
ಸಮನ್ವಯಕರು : ಕೇಂದ್ರ ಮಧ್ಯ ವಲಯ ಪ್ರಾದೇಶಿಕ ಸಮಿತಿಗಳು