ಮುಂಬಯಿ: ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ವಾರ್ಷಿಕ ಔದ್ಯೋಗಿಕ ಪ್ರವಾಸವು ಜ. 10 ರಿಂದ ಜ. 12 ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.
ಹಿಮಾಚಲ ಪ್ರದೇಶದ ಬದ್ದಿಯ ಔದ್ಯೋಗಿಕ ಸಂಕುಲದಲ್ಲಿರುವ ಹೆಸರಾಂತ ಕಂಪೆನಿಗಳ ಪ್ರವೇಶವನ್ನು ಪ್ರವಾಸವು ಒಳಗೊಂಡಿತ್ತು. ಪ್ರತಿಷ್ಠಿತ ಕಂಪೆನಿಗಳಾದ ಹವೇಲ್ಸ್ ಇಂಡಿಯಾ (ಎಲೆಕ್ಟಿÅಕಲ್ಸ್ ಅಸೆಸರೀಸ್), ಡಾ| ರೆಡ್ಡಿಸ್ ಲ್ಯಾಬ್ (ಫಾರ್ಮ), ಖುರನಾ ಓಲಿಯೋ (ಕೆಮಿಕಲ್ಸ್), ಸುವಿಧಾ ಅಪ್ಲಾಯನ್ಸಸ್ (ಹೋಮ್ ಅಪ್ಲಯನ್ಸಸ್), ಪರಿಶ್ರಾಮ್ ಹೋಮ್ ಅಪ್ಲಯನ್ಸಸ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳಿಗೆ ಭೇಟಿ ನೀಡಿದ ಸದಸ್ಯರು ಮಹತ್ವದ ಮಾಹಿತಿಗಳನ್ನು ಪಡೆದರು.
ಸಂಸ್ಥೆಯ ಧ್ಯೇಯ ಧೋರಣೆಗಳಿಗೆ ಅನುಸಾ ರವಾಗಿ ಯಶಸ್ವಿ ಉದ್ಯೋಗಪತಿಗಳ ಔದ್ಯೋಗಿಕ ಅಭಿವೃದ್ಧಿಯನ್ನು ಎಲ್ಲಾ ಸದಸ್ಯರು ಅವಲೋಕಿಸಿ ತಮ್ಮ ಜ್ಞಾನಾಭಿವೃದ್ಧಿ ಹಾಗೂ ಪ್ರಚೋಧನೆಯನ್ನು ಪಡೆಯುವುದು ಈ ಪ್ರವಾಸದ ಮೂಲ ಉದ್ಧೇಶವಾಗಿತ್ತು. ಸಂಸ್ಥೆಯ ಸದಸ್ಯರು ಹಾಗೂ ನಿರ್ದೇಶಕರಾಗಿರುವ ಸಂಸ್ಥೆಯ ಸದಸ್ಯರಾದ ಕರುಣಾಕರ ಎಂ. ಶೆಟ್ಟಿ ಅವರ ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಇದರ ಸುವಿಧಾ ಅಪ್ಲಯನ್ಸಸ್ ಕಂಪೆನಿಗೆ ಹಾಗೂ ಪಾಂಡುರಂಗ ಶೆಟ್ಟಿ ಅವರ ಸೋನಿ ಅಪ್ಲಾಯನ್ಸಸ್ ಇದರ ಪರಿಶ್ರಾಮ್ ಅಪ್ಲಾಯನ್ಸಸ್ ಎಂಬ ಸಂಸ್ಥೆಗಳಿಗೆ ತಂಡವು ಭೇಟಿ ನೀಡಿತು. ದೇಶದಲ್ಲಿ ಮಾರಾಟವಾಗುತ್ತಿರುವ ಶೇ. 80 ರಷ್ಟು ಮಿಕ್ಸರ್‌ಗಳು ಪಾಂಡುರಂಗ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಅವರ ಇಂಡಸ್ಟಿÅàಗಳಲ್ಲಿ ತಯಾಗುತ್ತಿದ್ದು, ಈ ಎರಡೂ ಕಂಪೆನಿಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಈ ಔದ್ಯೋಗಿಕ ಪ್ರವಾಸದ ತಂಡದಲ್ಲಿ ಇಂಡಿ ಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅàಸ್ ಅಧ್ಯಕ್ಷ ಕೆ. ಸಿ. ಶೆಟ್ಟಿ, ಉಪಾಧ್ಯಕ್ಷ ಎಸ್. ಬಿ. ಶೆಟ್ಟಿ, ಕಾರ್ಯದರ್ಶಿ ಜಯ ಸೂಡಾ, ಜತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ, ಕೋಶಾಧಿಕಾರಿ ಡಿ. ಪಿ. ರೈ, ಜೊತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ ಹಾಗೂ ಸಂಸ್ಥೆಯ ನಿರ್ದೇಶಕರು ಮತ್ತು ಉದ್ಯಮಿಗಳಾದ ಸಿಎ ಶಂಕರ ಬಿ. ಶೆಟ್ಟಿ, ಪಿ. ಕೆ. ಶೆಟ್ಟಿ, ಶ್ರೀನಿವಾಸ ಶೆಟ್ಟಿ, ನಿಶಿತ್ ಶೆಟ್ಟಿ, ಹಿತೇಶ್ ಎಸ್. ಶೆಟ್ಟಿ, ಬಿ. ಬಿ. ಶೆಟ್ಟಿ, ಪ್ರಕಾಶ್ ರೈ, ರಾಜೀವ್ ಎಸ್. ಶೆಟ್ಟಿ, ಸಿಎ ಕರುಣಾಕರ ಶೆಟ್ಟಿ, ಶ್ರೀನಾಥ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಸಾಗರ್ ಆರ್. ಶೆಟ್ಟಿ, ಸಚಿನ್ ಎಸ್. ಶೆಟ್ಟಿ, ದಿನೇಶ್ ಆರ್. ಶೆಟ್ಟಿ, ಶಂಕರ್ ಶೆಟ್ಟಿ, ಆರ್. ಕೆ. ಶೆಟ್ಟಿ, ಪುರಂದರ ವಿ. ಶೆಟ್ಟಿ, ಪ್ರಕಾಶ್ ಆನಂದ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಸಿ. ಎಸ್. ಶೆಟ್ಟಿ, ಜಿತೇಂದ್ರ ಎಂ. ಶೆಟ್ಟಿ, ನ್ಯಾಯವಾದಿ ಡಿ. ಕೆ. ಶೆಟ್ಟಿ, ಶಂಕರ ಎ. ಶೆಟ್ಟಿ, ದಯಾನಂದ ಹೆಗ್ಡೆ, ಸದಾಶಿವ ಶೆಟ್ಟಿ, ಅಭಿಜಿತ್ ಬಿ. ಶೆಟ್ಟಿ, ಉದಯ ಬಿ. ಶೆಟ್ಟಿ, ಟಿ. ಆರ್. ಶೆಟ್ಟಿ, ನಮೃತಾ ಶೆಟ್ಟಿ, ಸಂತೋಷ್ ಶೆಟ್ಟಿ, ಡಾ| ಆರ್. ಕೆ. ಶೆಟ್ಟಿ, ಕೆ. ನಾಗರಾಜ್ ಶೆಟ್ಟಿ, ಸಿ. ಎನ್. ಶೆಟ್ಟಿ, ಸದಾನಂದ ಎಸ್. ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಪಾಲ್ಗೊಂಡ ಸದಸ್ಯರ ಜ್ಞಾನಾಭಿವೃದ್ಧಿ ಮಾತ್ರವಲ್ಲದೆ, ಉತ್ತಮವಾದ ಸ್ನೇಹ ಸೌಹಾರ್ಧತೆಯೂ ಈ ಪ್ರವಾಸದಿಂದ ಕಂಡು ಬಂದಿದ್ದು ವಿಶೇಷತೆಯಾಗಿದೆ. ಮುಂದಿನ ದಿನಗಳಲ್ಲಿ ಕೊರಿಯಾದಂತಹ ಆಧುನಿಕ ಉದ್ಯೋಗ ಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶ ವನ್ನು ಒದಗಿಸುವುದಾಗಿ ಸಂಸ್ಥೆಯ ಗುರಿಯಾಗಿದೆ ಎಂದು ಅಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ ಅವರು ತಿಳಿಸಿದರು. ಪಾಲ್ಗೊಂಡ ಎಲ್ಲಾ ಸದಸ್ಯ ಬಾಂಧವರು ಪ್ರವಾಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.