Advertisement
ಬದುಕನ್ನು ಕಟ್ಟುವ, ಸಮರ್ಥವಾಗಿ ಜೀವನವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಅವರಲ್ಲಿ ತುಂಬಬೇಕಾಗಿದೆ ಎಂದು ಪುತ್ತೂರಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ನುಡಿದರು.
Related Articles
Advertisement
ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಜಯ ಶೆಟ್ಟಿ ಮಿಯ್ನಾರ್, ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಕೋಶಾಧಿಕಾರಿ ಅರವಿಂದ ರೈ, ಉಪಾಧ್ಯಕ್ಷರುಗಳಾದ ಸುರೇಶ್ ಎಸ್. ಶೆಟ್ಟಿ, ಆನಂದ್ ಶೆಟ್ಟಿ ಮಿಯ್ನಾರ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಸರೋಜಿನಿ ಶೆಟ್ಟಿ, ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್ ಶೆಟ್ಟಿ, ಕಾರ್ಯದರ್ಶಿ ಉಷಾ ಉಲ್ಲಾಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ವತಿಯಿಂದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ರಾಮ್ ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪ, ಸಮ್ಮಾನ ಪತ್ರಗಳನ್ನು ನೀಡಿ ಸಮ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಸತ್ಕರಿಸಿದರು. ಅತಿಥಿಧಿಗಣ್ಯರು ದೀಪ ಪ್ರಜ್ವಲಿಸಿ ತೆಂಗಿನ ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಸಂಘದ ನೂತನ ವೆಬ್‌ಸೈಟ್‌ನ್ನು ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಅತಿಥಿಗಳನ್ನು ಹಿಂಗಾರ ಮತ್ತು ವೀಳ್ಯದೆಲೆ ನೀಡಿ ಸ್ವಾಗತಿಸಲಾಯಿತು. ಪ್ರಫುಲ್ಲಾ ವಿ. ಶೆಟ್ಟಿ ಮತ್ತು ಶಾಲಿನಿ ಮಹೇಶ್ ಶೆಟ್ಟಿ ಪ್ರಾರ್ಥನೆಗೈದರು.
ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ಜತೆ ಕಾರ್ಯದರ್ಶಿ ಲೋಹಿತ್ ಶೆಟ್ಟಿ ವಾಚಿಸಿದರು.
ಕೆಮೂ¤ರು ಸುಧಾಕರ ಶೆಟ್ಟಿ ಮತ್ತು ಸಂಕಯ್ಯ ಶೆಟ್ಟಿ ಸಮ್ಮಾನ ಪತ್ರವನ್ನು ವಾಚಿಸಿದರು. ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನಗಳನ್ನು ಅತಿಥಿಗಳ ಹಸ್ತದಿಂದ ವಿತರಿಸಲಾಯಿತು.
ಬಹುಮಾನ ವಿಜೇತರ ಹೆಸರನ್ನು ಸ್ನೇಹಲ… ನಾರಾಯಣ ಶೆಟ್ಟಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಲೋಹಿತ್ ಶೆಟ್ಟಿ ಮತ್ತು ಸಭಾ ಕಾರ್ಯಕ್ರಮವನ್ನು ಶಿವಾನಾಥ ರೈ ಮೇಗಿನಗುತ್ತು ನಿರೂಪಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ ಅತಿಥಿಗಳಾದ ಶಕುಂತಳಾ ಶೆಟ್ಟಿ ಅವರನ್ನು ಪರಿಚಯಿಸಿದರು. ಶಾಲಿನಿ ಮಹೇಶ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘದ ಸದಸ್ಯರುಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು, ನೃತ್ಯರೂಪಕ ಹಾಗೂ ವಿಸ್ಮಯ ವಿನಾಯಕ ಬಳಗ ಮಂಗಳೂರು ತಂಡದಿಂದ ಹಾಸ್ಯ ಕಾರ್ಯಕ್ರಮ ಕಡೆಕೊಡಿ ಹಾಗೂ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪುಣೆಯ ಬಂಟ ಸಮಾಜದ ಈ ಗೌರವ ನಿಜವಾಗಿಯೂ ಮನಸ್ಸಿಗೆ ಅಭಿಮಾನಪಡುವಂತೆ ಮಾಡಿದೆ. ನಾವು ಬಂಟರು ಹೊಟ್ಟೆಪಾಡಿಗಾಗಿ ಹೊರನಾಡಿನಲ್ಲಿ ನೆಲೆಸಿ ಬಹಳ ಕಷ್ಟದ ದುಡಿಮೆಯಿಂದ ಯಶಸ್ಸನ್ನು ಗಳಿಸಿದ್ದೇವೆ. ಅದೇ ರೀತಿ ನಾವು ಬಂಟರು ಹೆಚ್ಚಾಗಿ ಹೊಟೇಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದು ಚಲನಚಿತ್ರದಂತಹ ರಂಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಗುರುತಿಸಿಕೊಂಡಿದ್ದು ಸಾಧಾರಣ ಮದ್ರಾಸಿಗಳೆಂದು ಕರೆಸಿಕೊಳ್ಳುತ್ತಿದ್ದು, ಈ ಜನರಿಗಿರುವ ಕೀಳರಿಮೆಯನ್ನು ತೊಡೆದು ಹಾಕುವಲ್ಲಿ ಸಾಧನೆಯ ಮೂಲಕ ಸಫಲತೆಯನ್ನು ಸಾಧಿಸಿರುವೆ. ಜೀವನದಲ್ಲಿ ಉನ್ನತ ಗುರಿಯೊಂದಿಗೆ ಸಾಧಿಸುವ ಛಲವೊಂದಿದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು
ಧಿ ರಾಮ್ ಶೆಟ್ಟಿ (ಖ್ಯಾತ ಚಲನಚಿತ್ರ ನಿರ್ಮಾಪಕ). ಚಿತ್ರಧಿವರದಿ : ಕಿರಣ್ ಬಿ. ರೈ ಕರ್ನೂರು