Advertisement

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯಿಂದ ವಿಚಾರ ಸಂಕಿರಣ

12:50 AM Jan 28, 2019 | |

 ಮುಂಬಯಿ: ಇದೊಂದು ದೇಶಪ್ರೇಮ, ರಾಷ್ಟ್ರಗೌರವದ ಕಾರ್ಯಕ್ರಮ ವಾಗಿದೆ. ನನಗೂ ಸಹಭಾಗಿಯಾಗುವ ಭಾಗ್ಯ ನೀಡಿದ್ದೀರಿ. ಪ್ರಪಂಚದಲ್ಲೇ ಒಳ್ಳೆಯ ಹಾಗೂ ಕೆಟ್ಟ ಮನುಷ್ಯರು ಇರುವುದು ಸ್ವಾಭಾವಿಕ. ಇವುಗಳ ಭಿನ್ನತೆ ತಿಳಿದು ಸಮಾನತೆಯನ್ನು ಕಂಡುಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಇಂತಹ ಮೌಲಿಕ ಕಾರ್ಯಕ್ರಮವನ್ನು  ಆಯೋಜಿಸಿದ ಡಾ| ಆರ್‌. ಕೆ. ಶೆಟ್ಟಿ ಮತ್ತು ಸಮಿತಿಗೆ ನನ್ನದೊಂದು ಸಲಾಮು. ಒಳ್ಳೆಯ ಮತ್ತು ಸಮಾಜಪರ ಚಿಂತನೆಯುಳ್ಳವರಿಂದ ಮಾತ್ರ ಇಂತಹ ಯೋಚನೆ, ಯೋಜನೆಗಳು ಸಾಧ್ಯವಾಗುವುದು. ರಾಷ್ಟ್ರದ ಗಣರಾಜ್ಯೋತ್ಸವದ ಶುಭವಸಾರದಲ್ಲಿ ನಾವು ಎಲ್ಲರೂ ಸಮಾಜಪರ ಕೆಲಸ ಮಾಡಬೇಕು. ಇಂತಹ ಸರ್ವೋತ್ಕೃಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಇಂಥ ಒಳ್ಳೆಯ ಮತ್ತು ಪುಣ್ಯ ಕಟ್ಟುವ ಕೆಲಸ ಮುಂದೆಯೂ ನಡೆಯಲಿ ಎಂದು ಬಾಲಿವುಡ್‌ ನಟ  ಶ್ರೇಯಸ್‌ ತಳ್ಪಡೆ ತಿಳಿಸಿದರು.

Advertisement

ಜ. 26ರಂದು ಕುರ್ಲಾ ಪೂರ್ವದ  ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ದಿಶಾ ನಿಧಿ ಸಂಗ್ರಹಕ್ಕಾಗಿ ಆಯೋಜಿಸಲಾಗಿದ್ದ  “ಸಮತೋಲನ ಜೀವನ’ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದ ಅವರು, ಮರಾಠಿ ಮಣ್ಣಿನಲ್ಲಿ ಬಂಟ ಸಮಾಜದ ಸಾಧನೆ ಅಪಾರ ೆ ಎಂದರು.

ಕಾರ್ಯಕ್ರಮವನ್ನು ಬಂಟ್ಸ್‌ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭ‌ದಲ್ಲಿ  ಮೇಜರ್‌ ಡಾ|  ಗೌರವ್‌ ಎಸ್‌. ಶೆಟ್ಟಿ ಅವರನ್ನು ನಟ ತಳ್ಪಡೆ ಸಮ್ಮಾನಿಸಿ ಶುಭಹಾರೈಸಿದರು. ಸೂರಜ್‌ ಶೆಟ್ಟಿ ಮತ್ತು ಸಂತೋಷ್‌ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರ ವನ್ನಿತ್ತು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿದ್ದ ಆರ್ಥಿಕ ಸಲಹೆಗಾರ ಸಿಎ  ಅಮನ್‌ ಚೌಗ್‌ ಮ್ಯಾನೇಜಿಂಗ್‌ ಮನಿಯ  ಬಗ್ಗೆ  ಮಾಹಿತಿ ನೀಡಿದರು.  ಡಾ| ಹರೀಶ್‌ ಶೆಟ್ಟಿ  ಅವರು ಮ್ಯಾನೇಜಿಂಗ್‌ ಹೆಲ್ತ್‌,   ಸಾಂಸಾರಿಕ ಉಪದೇಶಕ  ಮುರಳಿ ಮೆಹ್ತಾ  ಮ್ಯಾನೇಜಿಂಗ್‌ ಫ್ಯಾಮಿಲಿ ಹಾಗೂ  ಮನೋ ಮೇಧಾವಿ ದೀಪಕ್‌ ರಾವ್‌ ಅವರು ಪವರ್‌ ಆಫ್‌ ಮೈಂಡ್‌ ಕುರಿತು ಉಪನ್ಯಾಸ ನೀಡಿದರು.
ಮೇಜರ್‌ ಗೌರವ್‌ ಮಾತನಾಡಿ, ಸ್ವಸಮಾಜದ ಗೌರವ ಸ್ವೀಕರಿಸಲು ಅಭಿಮಾನವೆನಿಸುತ್ತಿದೆ.  ರಾಷ್ಟ್ರಾಭಿಮಾನ ಮತ್ತು ದೇಶದ ಹಿತಾಸಕ್ತಿ ಎಲ್ಲ ಭಾರತೀಯರ ಹೊಣೆಯಾಗಿದೆ. ಯುವಜನತೆ ಸೈನ್ಯದಲ್ಲಿ ಭರ್ತಿಯಾಗಿ ದೇಶಸೇವೆಯಲ್ಲಿ ಆಸಕ್ತಿ ತೋರಬೇಕು ಎಂದರು.

ಬಂಟರ ಸಂಘದ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಂದ ನಮ್ಮ ಜನತೆ ಫಲಾನುಭವ ದೊರಕಿದೆ. ಸಂಘದ 92 ವರ್ಷಗಳ ಸೇವೆಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಮಹತ್ವಪೂರ್ಣ ದಿಶೆೆೆಯನ್ನು ಕಂಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ನಡೆಸಿ ಸ್ವಸ್ಥ$ ಸಮಾಜ ರೂಪಿಸುವಲ್ಲಿ ಶ್ರಮಿಸಿದ ಅಭಿಮಾನ ನಮಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪದ್ಮನಾಭ ಎಸ್‌.  ಪಯ್ಯಡೆ  ಹೇಳಿದರು.

ಬಂಟ್ಸ್‌ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ  ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್‌ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿಜಯ್‌ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಕರುಣಾಕರ್‌ ವಿ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ಮಹಿಳಾ ವಿಭಾಗಾಧ್ಯಕ್ಷೆ ವನಿತಾ ವೈ. ನೋಂಡಾ, ಯುವ ವಿಭಾಗಾ‌ಧ್ಯಕ್ಷ ರಕ್ಷಿತ್‌ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯತ್ವ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ನಾನಯರ ಗರಡಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್‌ ಶೆಟ್ಟಿ, ವೈವಾಹಿಕ  ಸಮಿತಿಯ ಕಾರ್ಯಾಧ್ಯಕ್ಷ  ಕೃಷ್ಣ ಶೆಟ್ಟಿ, ಉದ್ಯಮ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್‌ ಆಳ್ವ ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಅಕ್ಷಯ್‌ ಶೆಟ್ಟಿ  ಮತ್ತು ಬಳಗದ  ಪ್ರಾರ್ಥನಾನೃತ್ಯ ದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಪ್ರಾದೇಶಿಕ ಸಮಿತಿ ಗೌರವ ಕಾರ್ಯದರ್ಶಿ ರವಿ ಆರ್‌.ಶೆಟ್ಟಿ, ಸ್ವಾಗತಿಸಿದರು. ಬಂಟರವಾಣಿ ಮಾಸಿಕದ ಗೌರವ ಸಂಪಾದಕ ಅಶೋಕ್‌ ಪಕ್ಕಳ ಅತಿಥಿಗಳನ್ನು ಪರಿಚಯಿಸಿದರು. ಮನೀಷಾ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರಮೇಶ್‌ ಡಿ. ರೈ ಕಯ್ನಾರು ದಾನಿಗಳ ಯಾದಿ ವಾಚಿಸಿದ್ದು, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್‌.ಜಿ. ಶೆಟ್ಟಿ  ಕೃತಜ್ಞತೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಷ್ಯ1ನ್‌ ಡ್ಯಾನ್ಸ್‌ ಮತ್ತು ವಿಶ್ವಮಾನ್ಯತಾ ಇಂದ್ರಜಾಲ ಮೋಡಿಗಾರ ಕುದ್ರೋಳಿ ಗಣೇಶ್‌ ಅವರಿಂದ ಮಸ್ತ್ ಮ್ಯಾಜಿಕ್‌ ಶೋ ನಡೆಯಿತು. 

ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶಪ್ರೇಮವನ್ನು ಬಿಂಬಿಸಿದ ಈ ಕಾರ್ಯಕ್ರಮವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.  ಸುಧಾಮ ಶೆಟ್ಟಿ  ನಿಟ್ಟೆ ಮತ್ತು ಮಮತಾ ಶೆಟ್ಟಿ ಸಾಣೂರು ದಂಪತಿಯ ಪುತ್ರ ದೇಶದ ಸೈನ್ಯಾಧಿಕಾರಿ  ಮಿಲಿಟರಿ ಸಮವಸ್ತ್ರದಲ್ಲೇ ವೇದಿಕೆಯನ್ನು ಅಲಂಕರಿಸಿದ ಮೇಜರ್‌ ಡಾ| ಗೌರವ್‌ ಎಸ್‌. ಶೆಟ್ಟಿ ಅವರನ್ನು ರಾಜಗಾಂಭೀರ್ಯೆೆ, ಮಿಲಿಟರಿ ಗೌರವದಂತೆಯೇ ಶಿಸ್ತುಬದ್ಧವಾಗಿ ಸಮ್ಮಾನಗೈದಿರುವುದು ವಿಶೇಷತೆಯಾಗಿದೆ. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮೇಜರ್‌ ಗೌರವ್‌ ಅವರ ಸಾಧನಾನಡೆ ಸಾಕ್ಷ Âಚಿತ್ರ ಮೂಲಕ ಬಿತ್ತರಿಸುತ್ತಿದ್ದಂತೆಯೇ ಕಿಕ್ಕಿರಿದು ನೆರೆದಿದ್ದ ಸಭಿಕರು  ಹರ್ಷೋದ್ಗಾರದಿಂದ ನಿಂತುಕೊಂಡು ಮೇಜರ್‌ ಗೌರವ್‌ ಅವರ ಸಾಧನೆಗೆ ಸೆಲ್ಯೂಟ್‌ ಹೊಡೆದರು. ಭಾರತ್‌ ಮಾತಾಕೀ ಜೈ ಘೋಷಣೆಗೈದು ರಾಷ್ಟ್ರಗೌರವ ಮೆರೆದರು. ಡಾ| ಆರ್‌. ಕೆ. ಶೆಟ್ಟಿ ಅವರ ಸಾರಥ್ಯದ ಅರ್ಥಗರ್ಭಿತ ಸೇವಾ ಕಾರ್ಯಕ್ರಮ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಕಾರ್ಯಕ್ರಮ ವೀಕ್ಷಿಸಿದ ಸಭಿಕರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಮಾಜದ ಜನತೆಯ ಪ್ರೋತ್ಸಾಹವು ನಮ್ಮ ಸಮಾಜಮುಖೀ ಸೇವೆಗೆ ಪೂರಕವಾಗಿದೆ. ನಾನು ಅಂತಾರಾಷ್ಟ್ರೀಯ ಮಟ್ಟದ ಸೇವಾ ಕಾರ್ಯಕ್ರಮಗಳಲ್ಲಿ ಪಳಗಿದ್ದರೂ ಸದ್ಯ ಸ್ವಸಮಾಜದ ಜನತೆಯ ಸೇವೆಯಲ್ಲಿ ತೊಡಗಿಸಿಕೊಂಡು ಸೇವೆಯ ಆಳವನ್ನು  ಅರಿತುಕೊಳ್ಳುವಂತಾಗಿದೆ. ಈ ಅವಕಾಶ ನನ್ನ ಸೌಭಾಗ್ಯವೇ ಸರಿ. ಸಹಕರಿಸಿದ, ಸಮಿತಿಯ ಸದಸ್ಯರಿಗೆ, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳಿಗೆ, ಸಂಘದ ಪದಾಧಿಕಾರಿಗಳಿಗೆ ಋಣಿಯಾಗಿದ್ದೇನೆ ೆ.
ಡಾ| ಆರ್‌.ಕೆ.ಶೆಟ್ಟಿ , 
ಕಾರ್ಯಾಧ್ಯಕ್ಷರು, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next