Advertisement

ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ವಾರ್ಷಿಕೋತ್ಸವ 

02:01 AM Mar 01, 2019 | |

ಮುಂಬಯಿ: ಸಮಾಜದಲ್ಲಿನ ಆರ್ಥಿಕ ಅಸಾಯಕತೆಯ ಕುಟುಂಬಗಳಿಗೆ ಸ್ಪಂದಿಸುವ ಮೂಲಕ ನಮ್ಮ ದೂರದೃಷ್ಟಿ ಚಿಂತನೆಗೆ ಹೆಚ್ಚು ಒತ್ತು ನೀಡಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಗೈದ ನಾವು ಸಮಾಜದ ಕೆಲವೊಂದು ದೀರ್ಘ‌ ಸಮಸ್ಯೆಗಳನ್ನು ಪರಿಹರಿಸಲು ಸನ್ನದ್ಧರಾಗಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ನಮ್ಮ ಸಮಾಜ ಭಾಂದವರ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಳಷ್ಟು ಮುಂದುವರಿಯಬೇಕಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

Advertisement

ಫೆ. 27ರಂದು ಕಾಂದಿವಲಿ ಪೂರ್ವದ ಹೊಟೇಲ್‌ ಅವೆನ್ಯೂ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ 12ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಮಿತಿಯಲ್ಲಿ ಸ್ಥಾಪಕ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ನನಗಿದೆ. ನಂತರದ ಕಾರ್ಯಾಧ್ಯಕ್ಷರ ಕಾರ್ಯಶೀಲತೆಯಿಂದ ಒಂದು ಶ್ರೇಷ್ಟ ಪ್ರಾದೇಶಿಕ ಸಮಿತಿಯಾಗಿ ರೂಪುಗೊಂಡಿದ್ದು, ಪ್ರಸಕ್ತ ಯುವ ಉತ್ಸಾಹಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಬಳಗದಿಂದ ಅತ್ಯುತ್ತಮ ಕಾರ್ಯಕ್ರಮಗಳು ಜರಗುತ್ತಿವೆ. ಈ ಪರಿಸರದಲ್ಲಿ ನಮ್ಮ ಸಂಸ್ಥೆಯ ಶಾಲಾ, ಕಾಲೇಜು ಸ್ಥಾಪನೆಯಾಗುವ ಅವಶ್ಯಕತೆಯಿದ್ದು, ಸಮಿತಿಗೆ ಸ್ವಂತ ಕಚೇರಿಯ ಅನಿವಾರ್ಯತೆಯಿದ್ದು, ಸಮಾಜ ಬಾಂಧವರೆಲ್ಲರು ಕೈಜೋಡಿಸಬೇಕು ಎಂದು ವಿನಂತಿಸಿದರು.

ಶೈಕ್ಷಣಿಕ ಗಮನ ಅಗತ್ಯ
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟ್ಸ್‌ ನ್ಯಾಯ ಮಂಡಳಿಯ ಕಾರ್ಯಾಧ್ಯಕ್ಷ ರವೀಂದ್ರ ಎಂ. ಅರಸ ಮಾತನಾಡಿ, ಐಕ್ಯತೆ ಮತ್ತು ಏಳ್ಗೆಗಾಗಿ ಪ್ರಾದೇಶಿಕ ಸಮಿತಿಗಳ ಕೊಡುಗೆ ಅಪಾರವಾಗಿದೆ. ಈ ಅಭೂತಪೂರ್ವ ಬೆಳವಣಿಗೆ ಸಮಾಜದ ಆರ್ಥಿಕವಾಗಿ ಹಿಂದುಳಿದವರ ಸಮಸ್ಯೆಗಳಿಗೆ ಸಹಾಯವಾಗಬೇಕು. ಶೈಕ್ಷಣಿಕವಾಗಿ ನಾವು ಹೆಚ್ಚು ಗಮನ ಹರಿಸಿದಾಗ ಬಡ ಕುಟುಂಬಗಳು ತನ್ನಿಂದ ತಾನೇ ಬೆಳವಣಿಗೆ ಕಾಣುತ್ತವೆ. ಬಂಟ್ಸ್‌ ನ್ಯಾಯ ಮಂಡಳಿಯ ಮೂಲಕ ಸಮಾಜದ ಹಲವಾರು ಒಳಜಗಳಗಳನ್ನು ಪರಿಹರಿಸಿ ನ್ಯಾಯ ದೊರಕಿಸಿದ ಹಿರಿಮೆ ನಮಗಿದೆ. ಕೋರ್ಟ್‌ ಕಚೇರಿ, ಸಮಯ, ದುಂದುವೆಚ್ಚವನ್ನು ನಿಯಂತ್ರಿಸಿ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಲಾಗಿದೆ ಎಂದರು.

ಕಾಂದಿವಲಿ ಪಯ್ಯಡೆ ಇಂಟರ್‌ನ್ಯಾಷನಲ್‌ ಹೊಟೇಲ್‌ನ ಮಾಲಕ ಡಾ| ಪಿ. ವಿ. ಶೆಟ್ಟಿ ಇವರು ಮಾತನಾಡಿ, ಸದಾ ವೈವಿಧ್ಯಮಯ ಸಾಮಾಜಿಕ ಸೇವೆಗಳಿಂದ ಕಾರ್ಯನಿರತವಾಗಿರುವ ಈ ಪ್ರಾದೇಶಿಕ ಸಮಿತಿಯು ಪ್ರಾರಂಭದ ದಿನಗಳಿಂದ ಪರಿಸರದಲ್ಲಿ ಶಾಲಾ, ಕಾಲೇಜನ್ನು ಸ್ಥಾಪಿಸುವ ಉದ್ಧೇಶ ಹೊಂದಿದ್ದು, ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ನುಡಿದರು.

ಗೌರವ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ ಅಶೋಕ್‌ ಶೆಟ್ಟಿ ಪೆರ್ಮುದೆ, ಉದ್ಯಮಿ ಮಹೇಶ್‌ ಶೆಟ್ಟಿ ತೆಳ್ಳಾರ್‌, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಇವರು ಮಾತನಾಡಿ ಶುಭಹಾರೈಸಿದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶೈಲಜಾ ಎ. ಶೆಟ್ಟಿ ಪ್ರಾರ್ಥನೆಗೈದರು. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯ ಹಿಂದಿನ ಕಾರ್ಯಾಧ್ಯಕ್ಷರುಗಳ ಸತತ ಸಾಧನೆ, ಪ್ರೇರಣೆಯಿಂದ ಈ ಸಮಿತಿಯು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸರ್ವ ಸದಸ್ಯ ಬಾಂಧವರ ಪರಿಶ್ರಮ ಇಲ್ಲಿ ಪ್ರಾಮುಖ್ಯತೆ ಪಡೆದಿದೆ ಎಂದರು.

ಕಾರ್ಯದರ್ಶಿ ಪ್ರೇಮ್‌ನಾಥ್‌ ಶೆಟ್ಟಿ ಕೊಂಡಾಡಿ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್‌ ಶೆಟ್ಟಿ ಅವರು ತಮ್ಮ ವಿಭಾಗಗಳ ವಾರ್ಷಿಕ ವರದಿ ವಾಚಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶ್ವಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು
ಪ್ರಾರಂಭದಲ್ಲಿ ಸಮಾಜ ಬಾಂಧವರ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ವೇದಿಕೆಯಲ್ಲಿ ಟ್ರಸ್ಟಿ ರಘುರಾಮ ಕೆ. ಶೆಟ್ಟಿ, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ, ಸಂಘದ ನೂತನ ಶಿಕ್ಷಣ ಯೋಜನೆಯ ಉಪ ಕಾರ್ಯಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಪಶ್ಚಿಮ ವಲಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬೋಳ, ಸಲಹೆಗಾರ ಮನೋಹರ ಎನ್‌. ಶೆಟ್ಟಿ, ಸ್ಥಳೀಯ ಸಮಿತಿಯ ಸಂಚಾಲಕರಾದ ವಿಜಯ ಆರ್‌. ಭಂಡಾರಿ, ಉಪ ಕಾರ್ಯಾಧ್ಯಕ್ಷ ಮುದ್ದಣ್ಣ ಜಿ. ಶೆಟ್ಟಿ, ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್‌ ಶೆಟ್ಟಿ, ಸಲಹೆಗಾರ್ತಿ ವಿನೋದಾ ಡಿ. ಶೆಟ್ಟಿ ಅವರು ಉಪಸ್ಥಿತರಿದ್ದರು.

ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಶುಭಾಂಗಿ ಎಸ್‌. ಶೆಟ್ಟಿ, ವೈದ್ಯಕೀಯ ವಿಭಾಗದ ಸುಚರಿತಾ ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಸುನೀತಾ ಎನ್‌. ಹೆಗ್ಡೆ, ಕೋಶಾಧಿಕಾರಿ ರೇಖಾ ವೈ. ಶೆಟ್ಟಿ, ಜತೆ ಕಾರ್ಯದರ್ಶಿ ಸರಿತಾ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಯೋಗಿನಿ ಎಸ್‌. ಶೆಟ್ಟಿ, ಸದಸ್ಯತ್ವ ನೋಂದಾವಣೆ ಸಮಿತಿಯ  ಕಾರ್ಯಾಧ್ಯಕ್ಷೆ ಪ್ರಭಾವತಿ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳನ್ನು ಗೌರವಿಸಲಾಯಿತು. ರಂಗನಟ ಅರವಿಂದ ಶೆಟ್ಟಿ ಕೊಜಕ್ಕೊಳಿ, ಜಯಲಕ್ಷಿ¾à ಬಿ. ಶೆಟ್ಟಿ ಇವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್‌ ಜೆ. ಶೆಟ್ಟಿ ಅವರು ಕ್ರೀಡಾ ವಿಜೇತರ ಯಾದಿಯನ್ನು ಒದಿದರು. ಜತೆ ಕಾರ್ಯದರ್ಶಿ ಅಶೋಕ್‌ ವಿ. ಶೆಟ್ಟಿ ಎಲ್‌ಐಸಿ, ಜೊತೆ ಕೋಶಾಧಿಕಾರಿ ಪ್ರವೀಣ್‌ ಆರ್‌. ಶೆಟ್ಟಿ, ಸದಸ್ಯತ್ವ ನೋಂದಾವಣೆ ಸಮಿತಿಯ ಕಾರ್ಯಾಧ್ಯಕ್ಷ ರಘುನಾಥ ಎನ್‌. ಶೆಟ್ಟಿ ಕಾರ್ಯಕ್ರರಮ ನಿರ್ವಹಿಸಿದರು. ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ ವಂದಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.    

ನಾನು ಉಪ ಮಹಾಪೌರನಾಗಿ ಅಧಿಕಾರ ವಹಿಸಿಕೊಂಡಾಗ ಬಂಟರ ಸಂಘದ ಪ್ರಥಮ ಅಭಿನಂದನಾ ಸಮಾರಂಭದೊಂದಿಗೆ ಪ್ರಾರಂಭವಾದ ಸಂಘದ ನಂಟು, ಸಮಾಜ ಬಾಂಧವರ ಪ್ರೀತಿ, ವಿಶ್ವಾಸವನ್ನು ಹಾಗೂ ಸರ್ವ ತುಳು-ಕನ್ನಡಿಗರ ಸಹಕಾರ ನನ್ನನ್ನು ಉತ್ತುಂಗಕ್ಕೆ ಏರಿಸಿತು. ಮಹಾನಗರದಲ್ಲಿ ಬಂಟರ ಒಕ್ಕೂಟದ ಪ್ರಾದೇಶಿಕ ಸಮಿತಿಗಳು ವೈವಿಧ್ಯಮಯ ಸಮಾಜ ಸೇವೆಗಳ ಮೂಲಕ ಪ್ರಶಂಸೆಗೆ ಪಾತ್ರವಾಗಿವೆ. ಪ್ರಾದೇಶಿಕ ಸಮಿತಿಗಳ ಮೂಲಕ ಸ್ಥಳೀಯ ಎಲ್ಲರಿಗೂ ನಾಯಕತ್ವ ವಹಿಸುವ ಅಥವಾ ವಿವಿಧ ಸಮಿತಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತಿದ್ದು, ಅಭಿನಂದನೀಯ. ರಾಜಕೀಯ ರಂಗದಲ್ಲೂ ಹಲವಾರು ಮಹತ್ವದ ಜನಪರ ಕಾರ್ಯಗಳನ್ನು ಮಾಡಿ ಜನರಿಗೆ ಅರ್ಪಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೂಮ್ಮೆ ನಿಮ್ಮ ಸೇವೆಗೆ ನಾನು ಆಕಾಂಕ್ಷಿಯಾಗಿದ್ದೇನೆ
   – ಗೋಪಾಲ್‌ ಸಿ. ಶೆಟ್ಟಿ, ಸಂಸದರು, ಉತ್ತರ ಮುಂಬಯಿ ಕ್ಷೇತ್ರ ಬೊರಿವಲಿ

ನಮ್ಮ ದಿನನಿತ್ಯದ ಜೀವನದಲ್ಲಿ ಹೃದಯಕ್ಕೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕು. ಬೇರೆಯವರಿಗೆ ತೊಂದರೆಕೊಟ್ಟು ಬದುಕುವ ಜೀವನ ನಮ್ಮದಾಗಬಾರದು. ಮಕ್ಕಳು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಪಾಲಕರ ಸಲಹೆ ಕೇಳಬೇಕು. ಎಲ್ಲರಿಂದಲೂ ಭಾವನಾತ್ಮಕವಾಗಿ ಬದುಕುವ ನಾವು ಹುಟ್ಟು ಸಾವಿನ ನಡುವೆ ನಮ್ಮ ಸಮಾಜ ಸೇವೆ ನಿರಂತರವಾಗಿರಬೇಕು. ಪ್ರಾದೇಶಿಕ ಸಮಿತಿಗೆ ಕಚೇರಿಯೊಂದನ್ನು ಅನುದಾನಿಸುವಂತೆ ಸಂಸದ ಗೋಪಾಲ್‌ ಶೆಟ್ಟಿ ಅವರಲ್ಲಿ ಮನವಿ ಮಾಡುತ್ತೇನೆ
 – ಮುಂಡಪ್ಪ ಎಸ್‌. ಪಯ್ಯಡೆ, ಕಾರ್ಯಾಧ್ಯಕ್ಷರು, ಬಂಟರ ಸಂಘ ನೂತನ ಶಿಕ್ಷಣ ಯೋಜನ ಸಮಿತಿ

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next