Advertisement

ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್‌: ವಾರ್ಷಿಕ ವಿಹಾರಕೂಟ

03:39 PM Jan 20, 2019 | Team Udayavani |

ಪುಣೆ: ಬಂಟರ ಸಂಘ ಪಿಂಪ್ರಿ-ಚಿಂಚ್ವಾಡ್‌ ಇದರ ವಾರ್ಷಿಕ ವಿಹಾರಕೂಟವು ಜ. 3 ರಂದು ಲೋನಾವಾಲಾ ಹತ್ತಿರದ ಕಾರ್ಲಾದಲ್ಲಿರುವ ಎಂಟಿಡಿಸಿ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿತ್ತು.

Advertisement

ಸಂಘದ ಅಧ್ಯಕ್ಷ ವಿಜಯ್‌ ಎಸ್‌. ಶೆಟ್ಟಿ ಕಟ್ಟನಿಗೆ ಮನೆ ಬೋರ್ಕಟ್ಟೆ ಇವರ ನೇತೃತ್ವದಲ್ಲಿ  ಬೆಳಗ್ಗೆ ಪಿಂಪ್ರಿ- ಚಿಂಚಾÌಡ್‌ ಪರಿಸರದ ಸುಮಾರು 350 ಸದಸ್ಯರು ಬಸ್ಸುಗಳ ಮೂಲಕ ವಿಹಾರಕೂಟಕ್ಕೆ ತೆರಳಿದರು. 

ಬೆಳಗ್ಗಿನಿಂದ ಸಂಜೆಯವರೆಗೆ ವಿಹಾರಕೂಟದಲ್ಲಿ ಸದಸ್ಯರು ಸಂಭ್ರಮಪಟ್ಟರು. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಸಂಜೆಯ ಚಹಾ, ಹಣ್ಣು ಹಂಪಲುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸದಸ್ಯರು ವಿಹಾರಕೂಟದಲ್ಲಿ ಭಾಗವಹಿಸಿದ್ದರು. 

ಸಂಘದ ಪದಾಧಿಕಾರಿಗಳು ವಿಹಾರ ಕೂಟದ ಪ್ರಾಯೋಜಕತ್ವವನ್ನು ವಹಿಸಿದ್ದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next