Advertisement
ಆಸ್ಟ್ರೇಲಿಯ ಎದುರಿನ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಬುಮ್ರಾ 907 ಅಂಕ ಗಳಿಸಿ ಭಾರತೀಯ ದಾಖಲೆ ಸ್ಥಾಪಿಸಿದ್ದರು. ಸಿಡ್ನಿ ಸಾಧನೆಗೆ ಒಂದಂಕ ಲಭಿಸಿತು. ದ್ವಿತೀಯ ಸರದಿಯಲ್ಲಿ ಬೌಲಿಂಗ್ಗೆ ಇಳಿಯದ ಕಾರಣ ಒಂದಷ್ಟು ಅಂಕ ಕೈತಪ್ಪಿತು.
ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಜೋ ರೂಟ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ (895). ಯಶಸ್ವಿ ಜೈಸ್ವಾಲ್ 847 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ 61 ರನ್ ಬಾರಿಸಿದ ರಿಷಭ್ ಪಂತ್ ಟಾಪ್-10 ಯಾದಿಗೆ ಮರಳಿದ್ದಾರೆ. 3 ಸ್ಥಾನ ಮೇಲೇರಿದ ಪಂತ್ 9ನೇ ರ್ಯಾಂಕ್ ಗಳಿಸಿದ್ದಾರೆ (739).