Advertisement

ಟೆಸ್ಟ್ ರ್ಯಾಂಕಿಂಗ್: ಪೂಜಾರ, ಬುಮ್ರಾ ಹಿನ್ನಡೆ, ಸ್ಮಿತ್ ಸನಿಹಕ್ಕೆ ಕೊಹ್ಲಿ

03:56 PM Dec 20, 2020 | keerthan |

ದುಬೈ: ಭಾರತ- ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಬಳಿಕ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಬಿಡುಗಡೆಯಾಗಿದೆ. ಭಾರತದ ಚೇತೇಶ್ವರ ಪೂಜಾರ, ಜಸ್ಪ್ರೀತ್ ಬುಮ್ರಾ ಹಿನ್ನಡೆ ಸಾಧಿಸಿದರೆ, ಆಸೀಸ್ ವೇಗಿ ಜೋಶ್ ಹ್ಯಾಜಲ್ ವುಡ್ ನಾಲ್ಕು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

Advertisement

ಎರಡನೇ ಸ್ಥಾನದಲ್ಲಿರುವ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ಅರ್ಧಶತಕದ ನೆರವಿನಿಂದ ಎರಡು ಅಂಕ ಗಳಿಸಿದ್ದು, ಮೊದಲ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ ಗಿಂತ ಕೇವಲ 23 ಅಂಕಗಳಷ್ಟು ಹಿಂದಿದ್ದಾರೆ. ಆದರೆ ಮುಂದಿನ ಮೂರು ಟೆಸ್ಟ್ ಗಳಲ್ಲಿ ಕೊಹ್ಲಿ ಆಡುತ್ತಿಲ್ಲವಾದ್ದರಿಂದ ಸ್ಮಿತ್ ಅಂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಮಹಾ ಕುಸಿತ: 46 ವರ್ಷ ಹಿಂದಿನ ದಾಖಲೆ ಪತನ

ಪೂಜಾರ ಒಂದು ಸ್ಥಾನ ಕಳೆದುಕೊಂಡು ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್ ನಲ್ಲಿ ಪಿಂಕ್ ಬಾಲ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಬಿಗು ದಾಳಿ ನಡೆಸಿದ ಜೋಶ್ ಹ್ಯಾಜಲ್ ವುಡ್ ಬರೋಬ್ಬರಿ ನಾಲ್ಕು ಸ್ಥಾನ ಜಿಗಿದು ಐದನೇ ಸ್ಥಾನ ಪಡೆದಿದ್ದಾರೆ. ಆರ್. ಅಶ್ವಿನ್ ಒಂದು ಸ್ಥಾನ ಮೇಲೇರಿ 9ನೇ ರ್ಯಾಂಕ್ ನಲ್ಲಿದ್ದು, ಎರಡು ಸ್ಥಾನ ಕಳೆದುಕೊಂಡಿರುವ ಬುಮ್ರಾ ಜೇಸನ್ ಹೋಲ್ಡರ್ ಜೊತೆ ಜಂಟಿಯಾಗಿ ಹತ್ತನೇ ರ್ಯಾಂಕ್ ನಲ್ಲಿದ್ದಾರೆ. ಉಳಿದಂತೆ ಪ್ಯಾಟ್ ಕಮಿನ್ಸ್ 910 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next