Advertisement

ಬಯಲುಸೀಮೆ ಅಡಕೆ ಬೆಳೆಗಾರರಿಗೆ ಬಂಪರ್‌!

05:36 PM Sep 08, 2021 | Team Udayavani |

ತೆಂಗು ಜೊತೆಗೆ ಅಡಕೆಬೆಳೆಯನ್ನೂ ಬೆಳೆಯುವ ಬಯಲುಸೀಮೆ ಪ್ರದೇಶವಾಗಿರುವ ಕಲ್ಪತರು ನಾಡಿನಲ್ಲಿ ಕೆರೆ ಕಟ್ಟೆ ತುಂಬುವಷ್ಟು ಮಳೆ ಇಲ್ಲದೆ ಬರಗಾಲ ಎದುರಾಗಿರುವ ಸನ್ನಿವೇಶದಲ್ಲಿ ಅಡಕೆಬೆಳೆಗೆ ಬಂಪರ್‌ ಬೆಲೆ ಬಂದಿದೆ. ರೈತರು ಹರಸಾಹಸ ಪಟ್ಟು ಉಳಿಸಿಕೊಂಡಿದ್ದ ಅಡಕೆ ಹುಂಡೆಗೆ ದುಪ್ಪಟ್ಟು ಹಣಕೈ ಸೇರಲಿದ್ದು ವಿದೇಶದಿಂದ ಬರುತ್ತಿದ್ದ ಅಡಕೆಬರದ ಹಿನ್ನೆಲೆಯಲ್ಲಿ ಸ್ಥಳೀಯ ಅಡಕೆಗೆಬೇಡಿಕೆ ಹೆಚ್ಚಾಗಿರುವುದು ಅಡಕೆಬೆಳೆಗಾರರ ಮುಖದಲ್ಲಿ ಸಂತಸ ಮನೆ ಮಾಡಿದೆ.

Advertisement

ತುಮಕೂರು: ಕ ‌ಲ್ಪತರು ನಾಡು ತುಮಕೂರುಜಿಲ್ಲೆಯಲ್ಲಿ ತೆಂಗು, ಅಡಕೆ, ತೋಟಗಾರಿಕೆ ಪ್ರಧಾನ ಬೆಳೆಗಳಾಗಿವೆ.ಇತ್ತೀಚೆಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ರೋಗಬಾಧೆ,ಜೊತೆಗೆ ಬರ ರೈತರನ್ನು ಕಂಗೆಡಿಸಿತ್ತು.ಆದರೆ ಕೋವಿಡ್‌ ವೇಳೆಯಲ್ಲಿ ಅಡಕೆ ಮತ್ತು ಕೊಬ್ಬರಿಗೆ ಉತ್ತಮ ಬೆಲೆ ಬಂದಿರುವುದು ಸಂತಸ ಮೂಡಿದ್ದು ಅಡಕೆಗೆ ದಿನೇ ದಿನೆ ಚಿನ್ನದ ಬೆಲೆ ಬರುತ್ತಿದೆ.

ಒಂದು ಕಾಲದಲ್ಲಿ ಅಡಕೆ ಬೆಳೆಗೆ ಬೆಲೆ ಇಲ್ಲದೇ ಕಂಗಾಲಾಗಿದ್ದ ರೈತರಿಗೆಈಗ ಗುಟ್ಕಾ,ಬಣ್ಣ ತಯಾರಿಕೆ, ಔಷಧಿ ತಯಾರಿಕೆ ಸೇರಿದಂತೆ ವಿವಿಧ ತಯಾರಿಕೆಗೆ ಅಡಕೆಯನ್ನು ಹೆಚ್ಚು ಬಳಕೆ ಮಾಡುತ್ತಿರುವುದರಿಂದ ಅಡಕೆ ಒಳ್ಳೆಯ ಬೆಲೆ ಬಂದಿದೆ.

ಜಿಲ್ಲೆಯಲ್ಲಿ ಬೆಳೆಯುವ ಕೆಂಪು ಅಡಕೆ ಪಾನ್‌ ಮಸಾಲ, ಔಷಧಿ ಹಾಗೂ ಬಣ್ಣ ತಯಾರಿಕೆಯಲ್ಲಿ ಹೆಚ್ಚು ಬಳಕೆಯಾಗುತ್ತದೆ. ಜೊತೆಗೆ ಗುಟ್ಕಾಕ್ಕೆ ಜಿಲ್ಲೆಯ ಅಡಕೆ ಹೇಳಿ ಮಾಡಿಸಿದಂತ್ತಿದೆ. ಜಿಲ್ಲೆಯಲ್ಲಿ 65,771 ಹೆಕ್ಟರ್‌ಪ್ರದೇಶದಲ್ಲಿ ಅಡಕೆ: ಪ್ರಸ್ತುತ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ  6568, ಗುಬ್ಬಿ 20724, ಕೊರಟಗೆರೆಯ 2458, ಕುಣಿಗಲ್‌3148, ಮಧುಗಿರಿಯ 2334, ಪಾವಗಡ2106, ಶಿರಾದ 8214, ತಿಪಟೂರಿನ 3539, ತುರುವೇಕೆರೆಯ 5326 ಮತ್ತು ತುಮ ಕೂರು ತಾಲೂಕಿನ 11354 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆಯನ್ನು ಬೆಳೆಯುತ್ತಿದ್ದು, ಒಂದುಹೆಕ್ಟೇರ್‌ ಗೆ 15ಕ್ವಿಂಟಲ್‌ನಂತೆ ಅಂದಾಜು 5.75 ಲಕ್ಷ ಕ್ವಿಂಟಲ್‌ ಅಡಕೆ ಉತ್ಪಾದನೆಯಾಗುತ್ತಿದ್ದು, ಭೀಮಸಮುದ್ರ ಮತ್ತು ಶಿವಮೊಗ್ಗ ಮಾರುಕಟ್ಟೆಯ ಜೊತೆಗೆ ಸ್ಥಳೀಯವಾಗಿಯೂ ಕೆಲವು ವರ್ತಕರಿಗೆ ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ಪೊದೆಗೆ ಎಸೆದು ಹೋದ ಹಸುಗೂಸನ್ನು ರಕ್ಷಿಸಿ ಮರುಜನ್ಮ ನೀಡಿದ ಸ್ಥಳೀಯರು

Advertisement

ಇಂದಿನ ಮಾರುಕಟ್ಟೆಯ ದರ ಪ್ರತಿ ಕ್ವಿಂಟಲ್‌ ಅಡಕೆಗೆ 58 ಸಾವಿರದಿಂದ 60 ಸಾವಿರ ರೂ. ಇದ್ದು ರೈತರಿಗೆ ಮತ್ತು ಅಡಕೆ ಚೇಣಿದಾರರ ಮುಖದಲ್ಲಿ ಸಂತಸ ಮೂಡಿದೆ.

ಜಿಲ್ಲೆಯಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅಡಕೆ ಕೃಷಿಯಲ್ಲಿ ತೊಡಗಿಕೊಂಡಿದ್ದು. ಕಳೆದ ಹಲವು ವರ್ಷದಿಂದ ಜಿಲ್ಲೆಯಲ್ಲಿ
ನಿರಂತರ ಬರ ಆವರಿಸಿತ್ತು ಆದರೆ ಆ ಬಾರಿ ಅಡಕೆ ಇಳುವರಿ ಬಂದಿತ್ತು, ರೈತರು ತಮ್ಮ ತೊಟಗಳನ್ನು ಚೇಣಿದಾರರಿಗೆ ನೀಡುವ ಪದ್ಧತಿ ಜಿಲ್ಲೆಯಲ್ಲಿದ್ದು, ಬಹುತ್ತೇಕ ರೈತರು ಚೇಣಿದಾರರಿಗೆ ಕ್ವಿಂಟಲ್‌ ಅಡಕೆ ಕಾಯಿಗೆ 6000 ದಿಂದ 7000 ರೂ.ಗೆ ಮಾರಾಟ ಮಾಡಿಬಿಟ್ಟಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಒಂದುಕ್ವಿಂಟಲ್‌ ಅಡಕೆ ಕಾಯಿಗೆ 16 ರಿಂದ 18 ಕೆ.ಜಿ ತೂಕದ ಅಡಕೆ ಉಂಡೆ ಬರುತ್ತಿದೆ. ಈ ವರೆಗೆ ಮಲೇಷಿಯಾ ಸೇರಿದಂತೆ ಹೊರದೇಶದಿಂದ ಅಡಕೆ ಹೆಚ್ಚು ಆಮದಾಗುತ್ತಿತ್ತು, ಇದರಿಂದ ನಮ್ಮ ಅಡಕೆ ಬೆಲೆಯಲ್ಲಿ ಕುಸಿತ ಕಂಡು ರೈತರು ಸಂಕಷ್ಟ ಪಡುತ್ತಿದ್ದರು ಆದರೆ ಈಗ ವಿದೇಶದಿಂದ ಅಡಕೆ ಬರುತ್ತಿಲ್ಲ ಇದರಿಂದ ನಮ್ಮ ರೈತರಿಗೆ ಒಳ್ಳೆಯ ಬೆಲೆ ದೊರೆಯುತ್ತಿದೆ. ಗುಟ್ಕಾಗೆ ಬಳಕೆಮಾಡುವ ಅಡಕೆ ಮಂಗಳೂರು, ಶಿವಮೊಗ್ಗ ಭಾಗದಲ್ಲಿ ಬೆಳೆಯುವ ಚಾಲಿ ಅಡಕೆಯಾಗಿದ್ದು, ಬಯಲು ಸೀಮೆಯಲ್ಲಿ ಬೆಳೆಯುವ ಕೆಂಪು ಅಡಕೆಯನ್ನು ಎಲೆಯ ಜೊತೆಗೆ ಜಗಿಯಲು, ಪಾನ್‌ ಮಸಾಲ ಮತ್ತು ಬಣ್ಣದ ತಯಾರಿಕೆಗೆ ಔಷಧಕ್ಕೆ ಹೆಚ್ಚು ಬಳಕೆಯಾಗುತ್ತದೆ ಆದ್ದರಿಂದ ತುಮಕೂರು ಜಿಲ್ಲೆಯ
ಅಡಕೆಗೆ ಭಾರೀ ಬೇಡಿಕೆ ಇದೆ.

ಇದುವರೆಗೂ ಅಡಕೆ ಸಂಗ್ರಹ
ಮಾಡಿರುವವರಿಗೆ ಬಂಪರ್‌
ಅಡಕೆ ಬೆಲೆಯಲ್ಲಿ ಏರಿಕೆಕಂಡಿದೆ ಇಂದಲ್ಲಾ ನಾಳೆ ಅಡಕೆಗೆ ಒಳ್ಳೆಯ ಬೆಲೆ ಬರುತ್ತದೆ ಎಂದು ಜಿಲ್ಲೆಯ ಹಲವು ತೋಟ ಚೇಣಿ ಮಾಡುವ
ಹಣವಂತರು ಮತ್ತುಕೆಲವು ಅಡಕೆ ವ್ಯಾಪಾರಿಗಳು ತಮ್ಮಲ್ಲಿ ಸಂಗ್ರಹ ಮಾಡಿದ್ದ ಅಡಕೆಯನ್ನು ಮಾರಾಟ ಮಾಡುತ್ತಿದ್ದಾರೆ, ಅಡಕೆ ಬೆಲೆ ಏರಿಕೆ
ಯಿಂದ ಈಗ ಅಡಕೆ ಬೆಳೆಗಾರರಗಿಂತ ಅಡಕೆ ಸಂಗ್ರಹ ಮಾಡಿರುವ ರೈತರಿಗೆ, ಚೇಣಿದಾರರಿಗೆ ವರ್ತಕರಿಗೆ ಹೆಚ್ಚು ಲಾಭ ಬರುತ್ತಿದೆ. ಇದೇ ರೀತಿ
ಬೆಲೆ ಇದ್ದರೆ ಈಗಾಗಲೇ ಚೇಣಿ ನೀಡದೇ ಇರುವ ರೈತರಿಗೆ ಅನುಕೂಲವಾಗುತ್ತದೆ. ಅಡಕೆ ಬೆಲೆ ಹೆಚ್ಚಳ ವಾಗಿರುವುದರಿಂದ ಮನೆಯಲ್ಲಿ ಇದ್ದ
ಅಡಕೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಅಡಕೆಗೆ ಒಳ್ಳೆಯ ಬೆಲೆ ಬಂದಿದೆ, ಹಲವು ವರ್ಷಗಳಿಂದ ಚೇಣಿ ಮಾಡಿಕೊಂಡು ನಷ್ಟ ಅನುಭವಿಸುತ್ತಿದ್ದೆವು ಆದರೆ ಈ ಬಾರಿ ಅಡಕೆಗೆ ಒಳ್ಳೆಯ ಬೆಲೆ ಬಂದಿರುವುದು ಸಂತಸವಾಗಿದೆ. ಇದು ಹೀಗೇ ಇದ್ದರೆ ಅಡಕೆ ಬೆಳೆಗಾರರಿಗೂ ಅನುಕೂಲ ವಾಗುತ್ತದೆ. ಆದರೆಯಾವಾಗ ಬೆಲೆಯಲ್ಲಿ ಏರು ಪೇರಾಗುತ್ತದೆ ಎಂದು ಗೊತ್ತಾಗುವುದಿಲ್ಲ ಈಗ ಅಡಕೆಗೆ ಚಿನ್ನದ ಬೆಲೆ ಬಂದಿದೆ.
– ರಾಜಣ್ಣ , ಅಡಕೆ ಚೇಣಿದಾರ

ರೈತರು ಅಡಕೆಗೆ ಉತ್ತಮ ಬೆಲೆ ಬರಲಿಲ್ಲ ಎಂದು ಸಂಕಷ್ಟ ಪಡುತ್ತಿದ್ದರು,ಆದರೆ ಈಗ ಅಡಕೆಗೆ ಚಿನ್ನದ ಬೆಲೆ ಬಂದಿದೆ.ಅಡಕೆ ಬೆಳೆಗಾರ ಸಂತಸ ಗೊಂಡಿದ್ದಾರೆ.ಕಳೆದ ವರ್ಷ ಅಲ್ಪ ಸ್ವಲ್ಪ ಮಳೆ ಬಂದಿದ್ದರಿಂದ ಅಡಕೆ ಬೆಳೆ ಉತ್ತಮವಾಗಿತ್ತು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಡಕೆ ಬೆಲೆ ಯುವ ರೈತರ ಸಂಖ್ಯೆಹೆಚ್ಚಳವಾಗುತ್ತಿದೆ.
– ರಘು, ಉಪನಿರ್ದೇಶಕರು,
ತೋಟಗಾರಿಕೆ ಇಲಾಖೆ

ಜಿಲ್ಲೆಯ ಕೆಂಪು ಅಡಕೆಗೆ ಒಳ್ಳೆಯ ಬೆಲೆ ಬಂದಿರುವುದು ಸಂತಸವಾಗಿದೆ. ಕ್ವಿಂಟಲ್‌ಗೆ 58 ರಿಂದ 60 ಸಾವಿರದವರೆಗೆ ಅಡಕೆ ಬೆಲೆ ಬಂದಿದೆ. ನಾವು ಅಡಕೆ ಬೆಳೆ ಗಾರರುಚೇಣಿಕೊಟ್ಟಿದ್ದೇವೆಒಂದುಕ್ವಿಂಟಲ್‌ ಅಡಕೆಗೆ 6100 ರಂತೆಕೊಟ್ಟಿದ್ದೆವು. ಅಡಕೆ ಬೆಲೆ ಏರಿಕೆಯಿಂದ ಮಧ್ಯವರ್ತಿಗಳು,
ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಿದೆ. ಇದೇ ದರ ಹೀಗೆ ಇದ್ದರೆ ಮುಂದೆ ಅಡಕೆ ಬೆಳೆಗಾರರಿಗೆ ಅನುಕೂಲವಾಗುತ್ತದೆ.
– ಬರಗೂರು ಸಿ.ಪಿ. ಪ್ರಕಾಶ್‌,
ಅಡಕೆ ಬೆಳೆಗಾರ

– ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next