Advertisement
ಉತ್ತರ ಕರ್ನಾಟಕದಲ್ಲಿ ಬಿಸಿಲ ಬೇಗೆ, ಬರದ ಛಾಯೆ ಶುರುವಾಗಿದೆ. ಆದರೆ ಇವ್ಯಾವುವೂ ಬಸವನಬಾಗೇವಾಡಿಯ ಹೆಬ್ಟಾಳ ಗ್ರಾಮದ ರೈತ ಶ್ರೀಶೈಲಯ್ಯ ನಾಗಯ್ಯ ಜಾವರಮಠ (ಜೆ.ಪಿ.ಸ್ವಾಮಿ) ಅವರಿಗೆ ತಟ್ಟಿಲ್ಲ ಎನಿಸುತ್ತದೆ. ಅವರು ತಮ್ಮ 4 ಏಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದು 4 ತಿಂಗಳಲ್ಲಿ 5 ಲಕ್ಷ ಆದಾಯ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
Related Articles
Advertisement
ಮಾರುಕಟ್ಟೆಯ ಸ್ಥಿತಿ ಈಗ ಮಾರುಕಟ್ಟೆಯಲ್ಲಿ ಹಸಿ ದ್ರಾಕ್ಷಿಗೆ ಪ್ರತಿ ಕೆ.ಜಿ. ಗೆ 40 ರಿಂದ 60 ರೂ. ಮಾರುಕಟ್ಟೆ ಇದೆ. ಆದರೆ ರೈತರಿಂದ ವ್ಯಾಪಾರಸ್ಥರು ರೈತನ ಜಮೀನಿಗೆ ಬಂದು ದ್ರಾಕ್ಷಿಯನ್ನು ಕಟಾವು ಮಾಡಿಕೊಂಡು ಹೋಗಬೇಕಾದರೆ ರೈತನಿಂದ ಆ ವ್ಯಾಪಾರಸ್ಥ ಪ್ರತಿ ಒಂದು ಕೆ.ಜಿ.ಗೆ 30 ರಿಂದ 35 ರೂ ಗೆ ಖರೀದಿ ಮಾಡುತ್ತಾರೆ. ಆದರೆ ಎಲ್ಲಾ ದ್ರಾಕ್ಷಿ$ಯನ್ನು ಆ ವ್ಯಾಪಾರಸ್ಥ ಪ್ರತಿ ಒಂದು ಕೆ.ಜಿ.ಗೆ 30 ರಿಂದ 35 ರೂ ಗೆ ಖರೀದಿ ಮಾಡುವದಿಲ್ಲಾ. ತನಗೆ ಇಷ್ಟವಾದ ಮತ್ತು ಉತ್ತಮ ಇರುವ ಹಸಿ ದ್ರಾಕ್ಷಿ$ಯನ್ನು ಮಾತ್ರ ಖರೀದಿಸುತ್ತಾನೆ. ಹೀಗಾಗಿ ರೈತನಿಗೆ ಇದರಿಂದ ಲಾಭವಾಗುವುದಿಲ್ಲಾ. ಹಿಂದುಳಿದ ದ್ರಾಕ್ಷಿ$ ಅಡ್ಡಾ ದಿಡ್ಡಿಗೆ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ಹೀಗಾಗಿ ಹೆಚ್ಚಾಗಿ ರೈತರು ಒಣ ದ್ರಾಕ್ಷಿಯತ್ತ ಹೊರಳಿರುವುದು ಸಾಮಾನ್ಯವಾಗಿದೆ. ಸ್ವಾಮಿಗೆ ನಾಲ್ಕು ಎಕರೆ ಹಸಿ ದ್ರಾಕ್ಷಿ ಬೆಳೆಯಲು ವರ್ಷಕ್ಕೆ ನಾಲ್ಕು ಲಕ್ಷ ಖರ್ಚು. ಆಮೇಲೆ ಒಂದು ಎಕರೆಗೆ ನಾಲ್ಕು ಟನ ಒಣದ್ರಾಕ್ಷಿ ಸಿಗುತ್ತದೆ. ಇದರ ಸಿಗುವ ಮಾರುಕಟ್ಟೆ ಮೌಲ್ಯ ಕೆ.ಜಿಗೆ 170ರಿಂದ 200ರೂ. ಸರಾಸರಿ ಎಕರೆಗೆ ನಾಲ್ಕು ಲಕ್ಷ ಆದಾಯ. ಹೀಗೆ ಲಾಭದ ಗಂಟು ಇದೆ ಅಂತ ತೋರಿಸಿಕೊಟ್ಟಿದ್ದಾರೆ. ಒಣದ್ರಾಕ್ಷಿ ಮಾಡಲು ಕಷ್ಟ ಏನಿಲ್ಲ. ಬೆಳೆಗಳ ಅನುಗುಣವಾಗಿ 1 ಲಕ್ಷ ದಿಂದ 1.50 ಲಕ್ಷದ ವರೆಗೆ ಶೆಡ್ ನಿರ್ಮಾಣ ಮಾಡುತ್ತಾರೆ. ಒಣ ದ್ರಾಕ್ಷಿ$ ಮಾಡಲು ಇದಕ್ಕೆ ಸಮಯ 15 ರಿಂದ 20 ದಿನ ಮಾತ್ರ ಬೇಕು. ನಂತರ ಇದಕ್ಕೆ ವಾತಾವರಣದ ಆಧಾರದ ಮೇಲೆ ಕೆಲವರು ಗಂಧಕವನ್ನು ನೀಡುತ್ತಾರೆ. ಒಣ ದ್ರಾಕ್ಷಿ$ ಮಾಡುವ ಮೊದಲು ಕಾಬೊಟಿನ್ ಆಯಿಲ್ ಬಳಿಸಬೇಕು. ಆಗ ಉತ್ತಮವಾದ ಒಣ ದ್ರಾಕ್ಷಿ$ 15 ರಿಂದ 20 ದಿನದಲ್ಲಿ ರೈತನ ಕೈಗೆ ಸಿಗುತ್ತದೆ. ನಂತರ ಆತ ಒಳ್ಳೆಯ ಬೆಲೆ ಸಿಗುವ ಮಾರುಕಟ್ಟೆಗೆ ಅದನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಸ್ವಾಮಿ ಕೆಲ ಸಲ ರೈತರು ವಿಜಯಪುರ ನಗರದಲ್ಲಿ, ಇನ್ನೂ ಕೆಲ ಸಲ ಮಹಾರಾಷ್ಟ್ರದ ತಾಸಗಾಂವಗೆ ಮಾರಾಟ ಮಾಡುತ್ತಾರೆ. ಇಲ್ಲಿ ಬೆಲೆ ಇಳಿಮುಖವಾದರು ಅಲ್ಲಿ ಕೆ.ಜಿಗೆ 150 ರಿಂದ 180 ರೂ. ವರೆಗೆ ಬೆಲೆ ಸಿಗುತ್ತದೆ ಎನ್ನುತ್ತಾರೆ ಸ್ವಾಮಿ. ಪ್ರಕಾಶ.ಜಿ. ಬೆಣ್ಣೂರ