Advertisement

ಬುಲಿಯನ್‌ ಮಾರುಕಟ್ಟೆ : ಬೆಳ್ಳಿ ಕೆಜಿಗೆ ನೂರು ರೂ ಏರಿಕೆ, ಚಿನ್ನ ಸ್ಥಿರ

09:50 AM Jun 06, 2019 | |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ಬುಲಿಯನ್‌ ಮಾರುಕಟ್ಟೆಯಲ್ಲಿಂದು ಬುಧವಾರ ಬೆಳ್ಳಿ ಕೆಜಿಗೆ ನೂರು ರೂಪಾಯಿ ಏರಿ 37,850 ರೂ.ಗೆ ತಲುಪಿತು. ಚಿನ್ನದ ಬೆಲೆ ಸ್ಥಿರತೆಯನ್ನು ಕಂಡಿತು.

Advertisement

ಜಾಗತಿಕವಾಗಿ ಚಿನ್ನ ಔನ್ಸಿಗೆ 1,333.70 ಡಾಲರ್‌ ಮಟ್ಟಕ್ಕೇರಿತು. ನ್ಯೂಯಾರ್ಕ್‌ ಮಾರುಕಟ್ಟೆಯಲ್ಲಿ ಬೆಳ್ಳಿ ಔನ್ಸಿಗೆ 14.92 ಡಾಲರ್‌ ಏರಿಕೆಯನ್ನು ಸಾಧಿಸಿತು.

ರಾಷ್ಟ್ರ ರಾಜಧಾನಿಯಲ್ಲಿ ಶೇ. 99.9 ಶುದ್ಧತೆಯ ಅಪ್ಪಟ ಚಿನ್ನ 10 ಗ್ರಾಮಿಗೆ 33,370 ರೂ.ಗಳಿಗೂ ಶೇ.99.5 ಶುದ್ಧತೆಯ ಚಿನ್ನ 33,200 ರೂ.ಗಳಿಗೂ ತಲುಪಿದವು.

Advertisement

Udayavani is now on Telegram. Click here to join our channel and stay updated with the latest news.

Next