Advertisement

ಬುಲ್ಲಿ ಬಾಯ್‌: 16ನೇ ವಯಸ್ಸಿಗೆ ಹ್ಯಾಕ್‌ ಮಾಡಿದ್ದ ಆರೋಪಿ

10:45 PM Jan 08, 2022 | Team Udayavani |

ನವದೆಹಲಿ: ಬುಲ್ಲಿ ಬಾಯ್‌ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ, ಇಂಜಿನಿಯರಿಂಗ್‌ ವಿದ್ಯಾರ್ಥಿ ನೀರಜ್‌ ಬಿಶ್ನೋಯ್‌(20) ತನ್ನ 15ನೇ ವಯಸ್ಸಿನಿಂದಲೇ ಹ್ಯಾಕಿಂಗ್‌ ಆರಂಭಿಸಿದ್ದ.

Advertisement

16ನೇ ವರ್ಷದಲ್ಲಿದ್ದಾಗ ಆತನ ಸಹೋದರಿಗೆ ಶಾಲೆಯಲ್ಲಿ ದಾಖಲಾತಿ ಸಿಗಲಿಲ್ಲವೆಂಬ ದ್ವೇಷಕ್ಕೆ ಆ ಶಾಲೆಯ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನೀರಜ್‌ ಅಶ್ಲೀಲ ಚಿತ್ರಗಳ ದಾಸನಾಗಿದ್ದ (ಪೋರ್ನ್ ಅಡಿಕ್ಟ್). ಆತನ ಲ್ಯಾಪ್‌ಟಾಪ್‌ನಲ್ಲಿ 153 ಪೋರ್ನ್ ವೀಡಿಯೋ ಇತ್ತು. ಆತನಿಗೆ ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ವಿಚಿತ್ರ ಆಸೆಯಿತ್ತು. ಆಯ ಸುಲ್ಲಿ ಡೀಲ್ಸ್‌ ಪ್ರಕರಣದ ಆರೋಪಿಗ ಳೊಂದಿಗೂ ಸಂಪರ್ಕದಲ್ಲಿದ್ದ. ಬಂಧನದಲ್ಲಿರುವ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನೇಕ ಬಾರಿ ಪೊಲೀಸರಿಗೆ ಬೆದರಿಸಿರುವುದಾಗಿಯೂ ತಿಳಿಸಲಾಗಿದೆ.

ಇದನ್ನೂ ಓದಿ:ನಾಯಿಯ ಬರ್ತ್‌ಡೇ ಪಾರ್ಟಿಗೆ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿದ ಕುಟುಂಬ!

 

Advertisement
Advertisement

Udayavani is now on Telegram. Click here to join our channel and stay updated with the latest news.

Next