Advertisement
ಮೈಗವರ್ನಮೆಂಟ್ ವೆಬ್‌ಸೈಟ್‌ನಲ್ಲಿ ಬುಲೆಟ್ ರೈಲಿಗೆ ಹೆಸರು ಸೂಚಿಸುವ ಸ್ಪರ್ಧೆಗೆ ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೊರೇಶನ್ (ಎನ್‌ಎಚ್ಎಸ್‌ಆರ್‌ಸಿಎಲ್) ಆಹ್ವಾನಿಸಿತ್ತು. ಕಳೆದ ಫೆಬ್ರವರಿಯಲ್ಲಿ ಆರಂಭವಾದ ಈ ಸ್ಪರ್ಧೆ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದು, ಮಾ. 25ಕ್ಕೆ ಕೊನೆಗೊಂಡಿತ್ತು. ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಸ್ವೀಕರಿಸಿದ ಹೆಸರುಗಳನ್ನೂ ಸಂಸ್ಥೆ ವೆಬ್‌ಸೈಟ್‌ನಲ್ಲಿ ಸ್ಪರ್ಧೆಗೆ ಸೇರಿಸಿಕೊಂಡಿದೆ.
ಈ ಸ್ಪರ್ಧೆಯಲ್ಲಿ ಬುಲೆಟ್ ರೈಲಿನ ಲೋಗೋ ವಿನ್ಯಾಸದ ಸ್ಪರ್ಧೆಯೂ ಇತ್ತು. ಇದಕ್ಕೆ ಸುಮಾರು 4,400 ಜನರು ಲೋಗೋ ವಿನ್ಯಾಸ ಮಾಡಿದ್ದಾರೆ. ಸರಕಾರಿ ಸಂಸ್ಥೆಯ ನೆರವಿನಿಂದ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಹೆಸರು ಅಂತಿಮಗೊಳಿಸಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.