Advertisement
ನೆಲ್ಯಾಡಿ ಪೇಟೆಯಿಂದ ಸುಮಾರು ಐದು ಕಿಲೋವೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಈ ಭಾಗದಲ್ಲಿ ಹೆದ್ದಾರಿ ಗಾತ್ರ ತೀರಾ ಕಿರಿದಾಗಿದೆ ಮಾತ್ರವಲ್ಲದೆ ತಿರುವುಗಳಿಂದ ಕೂಡಿದ ರಸ್ತೆ ಇದಾಗಿದೆ. ಇಷ್ಟೂ ಸಾಲದೆಂಬಂತೆ ರಸ್ತೆಯ ತುಂಬೆಲ್ಲಾ ಹೊಂಡಗಳಿರುವುದರಿಂದ ಚಾಲಕರಿಗೆ ವಾಹನ ಚಲಾಯಿಸುವುದೇ ಒಂದು ಸವಾಲಾಗಿದೆ.
ಈ ಟ್ಯಾಂಕರ್ ಮಂಗಳೂರಿನ ಎಂ.ಆರ್.ಪಿ.ಎಲ್.ನಿಂದ ಅಡುಗೆ ಅನಿಲವನ್ನು ತುಂಬಿಸಿಕೊಂಡು ಬೆಂಗಳೂರು ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಈ ಭಾಗದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯೂ ಉಂಟಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಪ್ರದೇಶವು ಅಪಾಯಕಾರಿ ತಿರುವು ಮಾತ್ರವಲ್ಲದೆ ಹೊಂಡಗುಂಡಿಗಳಿಂದ ಕೂಡಿದ ಹೆದ್ದಾರಿಯಾಗಿ ಮಾರ್ಪಟ್ಟಿದ್ದು ಮಳೆಗಾಲದಲ್ಲಿ ನೀರು ನಿಂತು ಹೊಂಡವನ್ನು ಅಂದಾಜಿಸಲು ವಿಫಲವಾಗಿ ಅನೇಕ ಅಫಘಾತಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
Related Articles
Advertisement